ಕಳಚಿತು ಜಿಲ್ಲೆಯ ಸ್ವಾತಂತ್ರ್ಯ ಹೋರಾಟದ ಕೊಂಡಿ: ಕಾಶೀನಾಥ ಮೂಡಿ ಇನ್ನಿಲ್ಲ
ಆಪ್ತ ನ್ಯೂಸ್ ಶಿರಸಿ:
ಜಿಲ್ಲೆಯ ಸ್ವಾತಂತ್ರ್ಯ ಹೋರಾಟದ ಕೊಂಡಿ ಕಳಚಿದೆ. ಜಿಲ್ಲೆಯ ಹಿರಿಯ್ ಜೀವಿ, ಸಾಮಾಜಿಕ ಕಾರ್ಯಗಳಲ್ಲಿ ಸದಾ ಮುಂದಿದ್ದ ಕಾಶೀನಾಥ ಮೂಡಿ ಅವರು ಇಹಲೋಕ ತ್ಯಜಿಸಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಹಿರಿಯ ಜೀವ ಕಾಶಿನಾಥ ಮೂಡಿಯವರು ತಮ್ಮ 95ನೆಯ ವಯಸ್ಸಿನಲ್ಲಿ ವಿಠಲನಲ್ಲಿ ಐಕ್ಯರಾದರು.
ನಗರದ ಪ್ರಸಿದ್ಧ ಜವಳಿ ವರ್ತಕರಾಗಿದ್ದ ಅವರ ಮಳಿಗೆ ಶಿರಸಿಯ ಸಿ. ಪಿ. ಬಜಾರದಲ್ಲಿತ್ತು. ಹಲವು ಸಂಘ-ಸಂಸ್ಥೆಗಳನ್ನು ಮುನ್ನಡೆಸಿದ್ದ ಮೂಡಿಯವರು ಶಿವಾಜಿಚೌಕದ ಸಾರ್ವಜನಿಕ ಗಜಾನನೋತ್ಸವ ಮಂಡಳಿಯ ಪ್ರಧಾನ ಕಾರ್ಯದರ್ಶಿಯಾಗಿ ಹಲವಾರು ವರ್ಷ ಕಾರ್ಯ ನಿರ್ವಹಿಸಿದ್ದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗುರೂಜಿ ಗೋಲವಲ್ಕರ್ ಅವರು ತಮ್ಮ ಅರೋಗ್ಯ ಸಂಬಂಧಿ ಚಿಕಿತ್ಸೆ ಕರಣ ಶಿರಸಿಯಲ್ಲಿ ತಂಗಿದ್ದ ವೇಳೆ ಕಾಶೀನಾಥ ಮೂಡಿ ಅವರು ಹೆಡಿಗೆವಾರ್ ಅವರ ಜೊತೆ ಒಡನಾಡಿದ್ದರು.
ಹಿಂದು ರುದ್ರಭೂಮಿ ಸಮಿತಿಯ ಅಧ್ಯಕ್ಷರಾಗಿ ನೆಮ್ಮದಿಯ ಸ್ಥಾಪನೆಗೆ ಅವರ ಶ್ರಮ ಸ್ಮರಣೀಯವಾಗಿದೆ. ಅವರಿಗೆ ಓರ್ವ ಪುತ್ರ, ಮೂವರು ಪುತ್ರಿಯರು ಇದ್ದಾರೆ. ಅಪಾರ ಬಂಧು-ಬಳಗವನ್ನು ಅವರು ಬಿಟ್ಟಗಲಿದ್ದಾರೆ.
ಅವರ ಅಂತ್ಯಕ್ರಿಯೆಯನ್ನು ನಾಳೆ ದಿನಾಂಕ 4-11-2025ರಂದು ಬೆಳಿಗ್ಗೆ ಅವರ ನೆಚ್ಚಿನ ತಾಣವಾಗಿದ್ದ ನೆಮ್ಮದಿಯ ಸದ್ಗತಿಯಲ್ಲಿ ನೆರವೇರಿಸಲು ಕುಟುಂಬದವರು ತೀರ್ಮಾನಿಸಿದ್ದಾರೆ.
ನೇತ್ರದಾನ ಮಾಡಿದ ಮೂಡಿ
ಹಿರಿಯ ಜೀವಿ \ಕಾಶಿನಾಥ ಮೂಡಿಯವರ ಇಚ್ಛೆಯಂತೆ ನೇತ್ರದಾನ ಮಾಡಲಾಗಿದೆ. ಅವರು ಕೆಲವು ಕಾಲ ಪತ್ರಿಕಾ ಸಂಪಾದಕರೂ ಆಗಿದ್ದರೆಂಬುದನ್ನು ಸ್ಮರಿಸಬಹುದಾಗಿದೆ. ಇಂದಿನ ಯುವಪೀಳಿಗೆಗೆ ಮಾರ್ಗದರ್ಶಕರಾಗಿಯೂ ಮಾದರಿಯಾಗಿಯೂ ಅವರು ತಮ್ಮ ಜೀವನವನ್ನು ನಡೆಸಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
1
Wow
0



