ಲೇಖಿಕಾ ಶ್ರೀ ಪ್ರಶಸ್ತಿಗೆ ಭಾಗೀರಥಿ ಹೆಗಡೆ, ಕೃಷ್ಣ ಪದಕಿ ಆಯ್ಕೆ

Oct 1, 2025 - 22:32
 0  16
ಲೇಖಿಕಾ ಶ್ರೀ ಪ್ರಶಸ್ತಿಗೆ ಭಾಗೀರಥಿ ಹೆಗಡೆ, ಕೃಷ್ಣ ಪದಕಿ ಆಯ್ಕೆ

ಆಪ್ತ ನ್ಯೂಸ್ ಶಿರಸಿ:

ಬೆಂಗಳೂರಿನ ಲೇಖಿಕಾ ಸಾಹಿತ್ಯ ವೇದಿಕೆಯು ನಿರಂತರ ಸಾಹಿತ್ಯ ಸೇವೆಯಲ್ಲಿ 25 ವರ್ಷಗಳು ಪೂರೈಸಿದ್ದರಿಂದ ರಜತ ಮಹೋತ್ಸವ ಆಚರಣೆ ಲೇಖಿಕಾ ಸಾಹಿತ್ಯ ಸಂಭ್ರಮದ ಅಂಗವಾಗಿ ರಾಜ್ಯದ 25 ಸಾಧಕರಿಗೆ ಲೇಖಿಕಾ ಶ್ರೀ-2025 ಪ್ರಶಸ್ತಿ ನೀಡಿ ಗೌರವಿಸುತ್ತಿದೆ. ಇದರಲ್ಲಿ ಉತ್ತರ ಕನ್ನಡ ಜಿಲ್ಲೆ  ಶಿರಸಿಯ ಹಿರಿಯ ಸಾಹಿತಿ ಭಾಗೀರಥಿ ಹೆಗಡೆ ಮತ್ತು ಮುಕ್ತಕ ಕವಿ, ಸಂಘಟಕ ಕೃಷ್ಣ ಪದಕಿಯವರು ಆಯ್ಕೆಯಾಗಿದ್ದಾರೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ನವೆಂಬರ್ 9 ನೇ ತಾರೀಖು ರವಿವಾರದಂದು ಹಾಸನದ ಎ.ವಿ.ಕೆ.ಕಾಲೇಜು ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಲೇಖಿಕಾ ಸಾಹಿತ್ಯ ವೇದಿಕೆಯ ಪ್ರಶಸ್ತಿ ಆಯ್ಕೆ ಸಮಿತಿ ತಿಳಿಸಿರುತ್ತಾರೆ.

ಗೋರೂರು ಅನಂತರಾಜು, ಡಾ.ವೀಣಾ, ಲೀಲಾವತಿ, ಪದ್ಮಾ ಆನಂದ, ದೀಪಿಕಾ ಚಾಟೆ, ರಾಧಾ ಟೇಕಲ್, ಉಷಾ ನರಸಿಂಹನ್, ಉದಯರವಿ, ಕೆ ಎಂ.ಲೋಲಾಕ್ಷಿ, ವಿದ್ಯಾ ಶಿರಹಟ್ಟಿ, ಗಣೇಶ ಅಮೀನಗಡ, ಯಶೋಧಾ ಡಿ, ಎನ್.ಎಲ್.ಚನ್ನೇಗೌಡ,  ಸುಮಾ‌ ವೀಣಾ, ರೂಪಾ ಜೋಷಿ, ಮುಕುಂದ ಗಂಗೂರ್, ನಾಗಲಕ್ಷ್ಮೀ ಎಂ.ಜೆ, ಡಾ.ಕರುಣಾ ಲಕ್ಷ್ಮಿ, ದಮಯಂತಿ ನರೆರಗಲ್, ಮಧುರಾ ಕರ್ಣಂ, ಸುಕನ್ಯ ಮುಕುಂದ, ಪ್ರಭಾ ದಿನಮಣಿ, ನಾಗವೇಣಿ ರಂಗನ್ ಇನ್ನಿತರ ಪ್ರಶಸ್ತಿ ಪುರಸ್ಕೃತರಾಗಿರುತ್ತಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0