ಲಾರಿ ಪಲ್ಟಿ: ಚಾಲಕ ಸಾವು

Nov 1, 2025 - 22:43
 0  113
ಲಾರಿ ಪಲ್ಟಿ: ಚಾಲಕ ಸಾವು

ಆಪ್ತ ನ್ಯೂಸ್ ಯಲ್ಲಾಪುರ:

ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಬಿದ್ದು ಚಾಲಕನೋರ್ವ ಸ್ಥಳದಲ್ಲೇ ಸಾವು ಕಂಡ ಘಟನೆ ರಾ.ಹೆದ್ದಾರಿ ೬೩ ಶಿರಲೆ ಕ್ರಾಸ್ ಬಳಿ ತಿರುವಿನಲ್ಲಿ ಸಂಭವಿಸಿದೆ.

ಹುಬ್ಬಳ್ಳಿ ಕಡೆಯಿಂದ ಅಂಕೋಲಾ ಕಡೆ ಹೊರಟಿದ್ದ ಲಾರಿ ಅತೀವೇಗವಾಗಿದ್ದ ಪರಿಣಾಮ ನಿಯಂತ್ರಿಸಲಾಗದೇ ಪಲ್ಟಿಯಾಗಿದೆ. ಚಾಲಕ ಎಡಭಾಗದಿಂದ ಕೆಳಕ್ಕೆ ಹಾರಿ ಪ್ರಾಣ ತಪ್ಪಿಸಿಕೊಳ್ಳಲು ಹೋಗಿ ತಲೆ ಕಾಲಿಗೆ ಗಂಭೀರ ಪೆಟ್ಟು ಮಾಡಿಕೊಂಡು ಸಾವನ್ನಪ್ಪಿದ್ದಾನೆ.

ಮೃತ ಚಾಲಕ ಮುಕೇಶಕುಮಾರ್ ತಿಕೇದ ನಾರಾಯಣದೇವ ಬೃಂದಾವನ ಗೋಕುಲ, ಬಂಕಾ ಜಿಲ್ಲೆಯ ಬಿಹಾರ ರಾಜ್ಯ ಎಂದು ಗುರುತಿಸಲಾಗಿದೆ. ಲಾರಿ ಪಲ್ಟಿ ಬಿದ್ದು ತುಂಡಾಗಿ ಬಿದ್ದಿದೆ. ಚಾಲಕನ ಅಜಾಗರೂಕತೆಯಿಂದ ಈ ಅನಾಹುತ ನಡೆದಿದ್ದು ಪೋಲಿಸರು ಚಾಲಕನ ಮೇಲೆ  ಪ್ರಕರಣ ದಾಖಲಿಸಿಕೊಂಡಿದ್ದಾರೆ.

What's Your Reaction?

Like Like 0
Dislike Dislike 0
Love Love 1
Funny Funny 0
Angry Angry 0
Sad Sad 1
Wow Wow 0