ಎಲ್.ಎಸ್. ಶಾಸ್ತ್ರಿಯವರಿಗೆ ಮಹಾಬಲ ಪ್ರಶಸ್ತಿ ಪ್ರದಾನ
ಡಾ. ಕೆರೆಮನೆ ಮಹಾಬಲ ಹೆಗಡೆ ರಂಗ ಪ್ರತಿಷ್ಠಾನದಿಂದ ಸಂಸ್ಮರಣೆ

ಆಪ್ತ ನ್ಯೂಸ್ ಶಿರಸಿ:
ಯಕ್ಷಗಾನದ ಪುರೋಭಿವೃದ್ಧಿಗಾಗಿ ಈ ಕಲೆಗೆ ಒಂದು ಪರಂಪರಾಗತವಾಗಿ ಬಂದಿರುವ ಸಾತ್ವಿಕ ಚೌಕಟ್ಟನ್ನು ತರುವುದು ಮತ್ತು ಯಕ್ಷಗಾನವನ್ನು ವಸ್ತುನಿಷ್ಠವಾಗಿ ಸಮಷ್ಠಿ ರೀತಿಯಲ್ಲಿ ಸಾರ್ವತ್ರೀಕರಿಸುವುದು ಈ ಕಾಲದ ಮಾನದಂಡವಾದ ವಿಶ್ವವಿದ್ಯಾಲಯಗಳ ಪ್ರಮಾಣ ಪತ್ರ ನೀಡುವುದರ ಮೂಲಕ ಸಾಧ್ಯ ಎಂದು ಹಿರಿಯ ಯಕ್ಷಗಾನ ಕಲಾವಿದರು ಮತ್ತು ನಿವೃತ್ತ ಪ್ರಾಧ್ಯಾಪಕರಾದ ಪ್ರೊ .ಎಂ.ಎಲ್.ಸಾಮಗ ಅಭಿಪ್ರಾಯಪಟ್ಟರು.
ಸಾಮಗ ಅವರು ಡಾ. ಮಹಾಬಲ ಹೆಗಡೆ ಮತ್ತು ಕೆರೆಮನೆ ರಾಮ ಹೆಗಡೆ ಸಂಸ್ಮರಣೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಮಹಾಬಲ ಹೆಗಡೆಯವರು ಸಾಲಿಗ್ರಾಮ ಮೇಳದಲ್ಲಿ ದಶರಥನ ಪಾತ್ರ ಮಾಡಿದ ಸಂದರ್ಭದಲ್ಲಿ ರಾಮನಾಗಿ ಅವರೊಂದಿಗೆ ಪಾತ್ರ ನಿರ್ವಹಿಸಿ,ಅವರ ಭಾವಪೂರ್ಣ ಅಭಿನಯವನ್ನು ನೋಡಿ ಸ್ಪೂರ್ತಿ ಪಡೆದಿದ್ದೇನೆ ಎಂದರು.
ಮೂಲಪ್ರಜ್ಞೆಯೊಂದಿಗೆ ಯಕ್ಷ ಶಿಕ್ಷಣ ಶಿಸ್ತು ಬದ್ಧತೆಯಿಂದ ಮತ್ತು ಪರಂಪರೆ ಚೌಕಟ್ಟನ್ನು ಮೀರದೆ ಬೆಳೆಯಬೇಕು, ಕಲಾವಿದರೆಲ್ಲ ತಮ್ಮೊಳಗಿನ ಭಿನ್ನಾಭಿಪ್ರಾಯಗಳನ್ನು ಮರೆತು ಹೊಂದಾಣಿಕೆಯ ಮನೋಭಾವದೊಡನೆ ಯಕ್ಷಗಾನದ ಏಳ್ಗೆಗೆ ಮುಂದಾಗಬೇಕು ಎಂದೂ ಅವರು ಆಶಿಸಿದರು.
What's Your Reaction?






