ಮಲೆನಾಡ ತಲೆಮೇಲೆ ಇನ್ನೊಂದು ಮಾರಕ ಯೋಜನೆ: ಸದ್ದಿಲ್ಲದೇ ಸಿದ್ಧವಾಗುಲ್ಲಿದೆ ಅಘನಾಶಿನಿ ವೇದಾವತಿ ತಿರುವು ಯೋಜನೆ

ಅಘನಾಶಿನಿ-ವೇದಾವತಿ ತಿರುವು ಯೋಜನೆ ಸಾಧ್ಯತಾ ವರದಿ ಸಿದ್ಧವಾಗಿದೆ! ಪಶ್ಚಿಮ ಘಟ್ಟದ ಜನತೆಗೆ ಗೊತ್ತಿಲ್ಲದ ಬೃಹತ್ ನದೀ ಕಣಿವೆ ಯೋಜನೆ ವೃಕ್ಷ ಆಂದೋಲನದಿಂದ ಮಾಹಿತಿ ಬಹಿರಂಗ

Sep 26, 2025 - 10:50
 0  159
ಮಲೆನಾಡ ತಲೆಮೇಲೆ ಇನ್ನೊಂದು ಮಾರಕ ಯೋಜನೆ:  ಸದ್ದಿಲ್ಲದೇ ಸಿದ್ಧವಾಗುಲ್ಲಿದೆ ಅಘನಾಶಿನಿ ವೇದಾವತಿ ತಿರುವು ಯೋಜನೆ
ಅಘನಾಶಿನಿ ಕಣಿವೆಯ ವಿಹಂಗಮ ನೋಟ
ಆಪ್ತ ನ್ಯೂಸ್‌ ಶಿರಸಿ:

ಹಲವು ಯೋಜನೆಗಳ ಭಾರದಿಂದ ನಲುಗುತ್ತಿರುವ ಉತ್ತರ ಕನ್ನಡ ಜಿಲ್ಲೆ ಹಾಗೂ ಮಲೆನಾಡಿನ ಮೇಲೆ ಇನ್ನೊಂದು ಭೀಕರ ಯೋಜನೆಯ ತೂಗುಗತ್ತಿ ತೂಗಲು ಆರಂಭವಾಗಿದೆ. ಈಗಾಗಲೇ ಶರಾವತಿ ಪಂಪ್ಡ್‌ ಸ್ಟೋರೇಜ್‌ ಯೋಜನೆ ಜೀವ ಹಿಂಡುತ್ತಿದೆ. ಇದರ ಬೆನ್ನಲ್ಲಿಯೇ ಅಘನಾಶಿನಿ ನದಿಯನ್ನು ಚಿತ್ರದುರ್ಗದ ವೇದಾವತಿ ನದಿಯೊಂದಿಗೆ ಜೋಡಿಸುವ ಮಾರಕ ಯೋಜನೆಗೆ ನೀಲನಕ್ಷೆ ಸಿದ್ಧವಾಗುತ್ತಿದೆ. ವೃಕ್ಷಲಕ್ಷ ಆಂದೋಲನವು ಈ ಕುರಿತಂತೆ ಮಾಹಿತಿಯನ್ನು ಬಹಿರಂಗ ಮಾಡಿದೆ.
:

ಹಿನ್ನೆಲೆ: 
ಬೇಡ್ತಿ-ಅಘನಾಶಿನಿ ಬೃಹತ್ ಜಲವಿದ್ಯುತ್ ಯೋಜನೆಗಳ ಸಂದರ್ಭದಲ್ಲಿ ೧೯೮೦-೯೦ ರ ದಶಕದಲ್ಲಿ ಉ.ಕ ಜಿಲ್ಲೆ ಸಿದ್ದಾಪುರ ತಾ| ಹೆಗ್ಗರಣಿ-ಗೋಳಿಮಕ್ಕಿ ಬಳಿ  ಬಾಳೆಕೊಪ್ಪದಲ್ಲಿ ಅಘನಾಶಿನಿ ನದಿಗೆ ಬೃಹತ್ ಅಣೆಕಟ್ಟು ನರ‍್ಮಾಣ ಸ್ಥಳ ಗುರುತಿಸಲಾಗಿತ್ತು. ವ್ಯಾಪಕ ಜನಾಂದೋಲನ ನಂತರ ಕೆ.ಪಿ.ಸಿ ಬೇಡ್ತಿ-ಅಘನಾಶಿನಿ ಜಲವಿದ್ಯುತ್ ಯೋಜನೆಗಳನ್ನು ಕೈಬಿಟ್ಟಿತ್ತು. ೨೦೧೭ ರ ಹೊತ್ತಿಗೆ ಅಘನಾಶಿನಿ ವರದಾ ನದೀ ತಿರುವು ಯೋಜನೆ ಪ್ರಸ್ತಾಪವಾಗಿತ್ತು, ಶಿರಸಿಯಲ್ಲಿ ನಡೆದ ಪಶ್ಚಿಮ ಘಟ್ಟ ಉಳಿಸಿ ಸಮ್ಮೇಳನದಲ್ಲಿ ಪೂಜ್ಯ ಪೇಜಾವರ ಶ್ರೀಗಳ ಸಮ್ಮುಖದಲ್ಲಿ ಪೂಜ್ಯ ಸ್ವರ್ಣವಲ್ಲೀ ಶ್ರೀಗಳು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. 
೨೦೨೧-೨೨ ರಲ್ಲಿ ಬೇಡ್ತಿ ವರದಾ ಯೋಜನೆ ಜೊತೆ ಅಘನಾಶಿನಿ ವರದಾ ಯೋಜನೆಗೂ ತಡೆಬಿದ್ದಿತ್ತು. ಇದೀಗ ೨೦೨೫ ರಲ್ಲಿ ಬೇಡ್ತಿ-ವರದಾನದೀ ಜೋಡಣೆ ಭಾರೀ ಸದ್ದು ಮಾಡತೊಡಗಿದೆ. ಆದರೆ ಅಘನಾಶಿನಿ ತಿರುವು ಯೋಜನೆ  ಬಗ್ಗೆ ಈ ವರೆಗೆ ಗೊತ್ತೇ ಇರಲಿಲ್ಲ!
     ಇದೀಗ ವೃಕ್ಷಲಕ್ಷ ಆಂದೋಲನದ ಕಾರ್ಯಕರ್ತರು ರಾಜ್ಯಜಲ ಸಂಪನ್ಮೂಲ ಇಲಾಖೆಯಲ್ಲಿನ ಅಘನಾಶಿನಿ ತಿರುವು ಯೋಜನೆಯ ಮಹತ್ವದ ಬೆಳವಣಿಗೆ ಬಗ್ಗೆ ಮಾಹಿತಿ ಪಡೆದು ಬಹಿರಂಗ ಗೊಳಿಸಿದ್ದಾರೆ. ಬೇಡ್ತಿ ಅಘನಾಶಿನಿ ಸಂರಕ್ಷಣ ಸಮೀತಿಯ ಗೌರವಾಧ್ಯಕ್ಷರಾದ ಪೂಜ್ಯ ಸ್ವರ್ಣವಲ್ಲೀ ಸ್ವಾಮೀಜಿ ಅವರಿಗೆ ಅಘನಾಶಿನಿ ಯೋಜನೆ ಬಗ್ಗೆ ಲಭ್ಯ ಮಾಹಿತಿ ನೀಡಿದ್ದಾರೆ.



ಅಘನಾಶಿನಿ-ವೇದಾವತಿ ಯೋಜನೆ ವಿವರ
೧) ಅಘನಾಶಿನಿ ನದಿಯನ್ನು ಚಿತ್ರದುರ್ಗಾ ಜಿಲ್ಲೆಯ ವೇದಾವತಿನದಿಗೆ ಜೋಡಿಸುವ ಯೋಜನೆ ಇದಾಗಿದೆ. ಇದು ರಾಜ್ಯ ಸರ್ಕಾರದ ಯೋಜನೆ.
೨) ಅಘನಾಶಿನಿ ನದಿಗೆ ಸಿದ್ದಾಪುರ ತಾ| ಬಾಳೆಕೊಪ್ಪ ಬಳಿ ಆಣೆಕಟ್ಟೆ ನರ‍್ಮಿಸಿ ನೀರನ್ನು ವೇದಾವತಿ ನದಿಯ ವಾಣಿ ವಿಲಾಸ ಜಲಾಶಯಕ್ಕೆ ಸಾಗಿಸುವ ಬೃಹತ್ ಯೋಜನೆ ಇದಾಗಿದೆ.
೩) ಸಿದ್ದಾಪುರ ತಾ| ಬಾಳೆಕೊಪ್ಪಾ ಬಳಿ ಅಘನಾಶಿನಿಯಿಂದ ನೀರು ಪಂಪ್‌ಮಾಡಿ ಗೋಳಿಮಕ್ಕಿ ಹಾರ್ಸಿಕಟ್ಟಾ, ಸಿದ್ದಾಪುರ, ಸಾಗರ, ಶಿವಮೊಗ್ಗಾ, ತರೀಕೆರೆ, ಅಜ್ಜಂಪುರ ಮಾರ್ಗವಾಗಿ ವಾಣಿವಿಲಾಸ ಜಲಾಶಯಕ್ಕೆ ನೀರು ತುಂಬಿಸುವ ಅತಿದೊಡ್ಡ ಯೋಜನೆ ಇದಾಗಿದೆ. ವಾಣಿ ವಿಲಾಸ ಜಲಾಶಯ ಹಿರಿಯೂರು ತಾಲೂಕಿನಲ್ಲಿದೆ.
೪) ೩೫ ಟಿ.ಎಮ್.ಸಿ ನೀರನ್ನು ಅಘನಾಶಿನಿಯಿಂದ ಎತ್ತಿ ಸಾಗಿಸುವ ಬೃಹತ್ ಯೋಜನೆ ಇದಾಗಿದೆ.
೫) ಎತ್ತಿನ ಹೊಳೆಯಲ್ಲಿ ೨೪ ಟಿ.ಎಮ್.ಸಿ ನೀರು ಎತ್ತುವ, ಉದ್ದೇಶ ಇತ್ತು. ಅದಕ್ಕಿಂತ ದೊಡ್ಡ ಯೋಜನೆ ಅಘನಾಶಿನಿ-ವೇದಾವತಿ ಜೋಡಣೆ ಆಗಿದೆ.
೬) ಸಂಪೂರ್ಣವಾಗಿ ರಾಜ್ಯ ಜಲಸಂಪನ್ಮೂಲ ಇಲಾಖೆಯ ಯೋಜನೆ ಇದು.
೭) ರಾಜ್ಯ ಸರ್ಕಾರದ ಮನವಿ ಮೇರೆಗೆ ಪ್ರಿ-ಫಿಸಿಬಿಲಿಟಿ ವರದಿಯನ್ನು ರಾಷ್ಟಿçÃಯ ಜಲ ಅಭಿವೃದ್ಧಿ ಸಂಸ್ಥೆ ತಯಾರಿಸಿದೆ. 
೮) ಅಂದಾಜು ೨೩೦೦೦ ಕೋಟಿ ರೂ. ಯೋಜನೆ ವೆಚ್ಚವಾಗಲಿದೆ. ೧೯೪ಕಿ.ಮೀ ಉದ್ದ ಪೈಪ್ ಲೈನ್ ಹಾಕಲಾಗುತ್ತದೆ ಎನ್ನುತ್ತದೆ ಪ್ರಿ-ಫಿಸಿಬಿಲಿಟಿ ವರದಿ. ಓWಆಂ ಬೆಂಗಳೂರು ಕಛೇರಿ ಪ್ರಿಫಿಸಿಬಿಲಿಟಿ ವರದಿ ತಯಾರಿಸಿ ಹೈದ್ರಾಬಾದ ಕಛೇರಿಗೆ ಕಳಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಅಲ್ಲಿಂದ ದೆಹಲಿಯ ಕೇಂದ್ರ ಕಛೇರಿಗೆ ಈ ವರದಿ ಸದ್ಯವೇ ಹಸ್ತಾಂತರಲಾಗಲಿದೆ. 

ದುಷ್ಪರಿಣಾಮಗಳ ಬಗ್ಗೆ ತಜ್ಞರ ಅಭಿಪ್ರಾಯ
 
ಅಘನಾಶಿನಿ-ವೇದಾವತಿ ಯೋಜನೆಯಿಂದ ಪಶ್ಚಿಮ ಘಟ್ಟದ ಮೇಲೆ ಆಗುವ ದುಷ್ಪರಿಣಾಮಗಳ ಬಗ್ಗೆ ವೃಕ್ಷಲಕ್ಷ ಆಂದೋಲನದ ತಜ್ಞರ ವಿಬಾಗ ಈ ಕೆಳಗೆ ಅಭಿಪ್ರಾಯಗಳನ್ನು ದಾಖಲಿಸಿದೆ. ಇದು ಕ್ಷಿಪ್ರ ವಿಶ್ಲೆಷಣಾ ವರದಿ.
• ಅಂದಾಜು ೧,೨೦,೦೦೦ ಮರಗಳು ಆಹುತಿ ಆಗಲಿವೆ. ಅಂದಾಜು ೬೦೦ ಎಕರೆ ಅರಣ್ಯ ಯೋಜನೆಗೆ ಬೇಕಾಗಲಿದೆ. ಶಿರಸಿ ಅರಣ್ಯ ವಿಭಾಗ, ಸಾಗರ ಅರಣ್ಯ ವಿಭಾಗಗಳ ವ್ಯಾಪ್ತಿಯ ಅರಣ್ಯಗಳು ಆಹುತಿ ಆಗಲಿವೆ. 
• ಉ.ಕ ಜಿಲ್ಲೆಯ ಅಘನಾಶಿನಿ ಕಣಿವೆ ವನ್ಯ ಜೀವಿ ಸಂರಕ್ಷಿತ ಪ್ರದೇಶ ಎಂದು ೨೦೧೨ ರಲ್ಲೇ ಘೋಷಣೆಗೊಂಡಿದೆ. 
• ಶಿರಸಿ ಪಟ್ಟಣಕ್ಕೆ, ಕುಮಟಾ ಪಟ್ಟಣಕ್ಕೆ, ಕುಮಟಾ ತಾಲೂಕಿನ ಬಹುಗ್ರಾಮ ಯೋಜನೆಗೆ ಹಾಗೂ ಒಂದು ಲಕ್ಷ ರೈತರ ಪಂಪ್ ಸೆಟ್‌ಗಳಿಗೆ ನೀರು ಒದಗಿಸುವ ಅಘನಾಶಿನಿಗೆ ನದೀ ತಿರುವು ಕಂಟಕ ತರುತ್ತಿದೆ ಎಂದು ವೃಕ್ಷ ಆಂದೋಲನ ತಜ್ಞರು ತಂಡ ಎಚ್ಚರಿಸಿದೆ. 
• ಅಘನಾಶಿನಿ ಕಣಿವೆ ಭೂಕುಸಿತ ಸೂಕ್ಷ್ಮ ಪ್ರದೇಶ. ವ್ಯಾಪಕ ಭೂಕುಸಿತಕ್ಕೆ ಕಾರಣವಾಗಲಿದೆ. 
• ಕುಮಟಾ ಕರಾವಳಿ ಮೀನುಗಾರರು ಮತ್ತು ರೈತರ ಬದುಕು ಅಘನಾಶಿನಿ ನದೀ ನೀರನ್ನೇ ಅವಲಂಭಿಸಿದೆ. ಅಘನಾಶಿನಿ-ವೇದಾವತಿ ತಿರುವ ಯೋಜನೆ ಕರಾವಳಿ ಮೀನುಗಾರ, ರೈತರ ಬದುಕು ಕಸಿದುಕೊಳ್ಳಲಿದೆ!

What's Your Reaction?

Like Like 0
Dislike Dislike 0
Love Love 2
Funny Funny 0
Angry Angry 5
Sad Sad 3
Wow Wow 0