ಬನವಾಸಿಯಲ್ಲಿ ಮಯೂರ ವರ್ಮ ಪ್ರತಿಮೆ ಸ್ಥಾಪನೆ: ಶಿವರಾಮ ಹೆಬ್ಬಾರರ ಸ್ಪಂದನೆ
ಆಪ್ತ ನ್ಯೂಸ್ ಬನವಾಸಿ:
ಶಿರಸಿ ತಾಲೂಕಿನ ಬನವಾಸಿಯಲ್ಲಿ ಕನ್ನಡದ ಮೊದಲ ಸಾಮ್ರಾಜ್ಯ ಕಟ್ಟಿ ಪಂಪನ ನಾಡು ಬನವಾಸಿಯನ್ನು ಮೊದಲ ರಾಜಧಾನಿಯನ್ನಾಗಿ ಮಾಡಿದ್ದ ರಾಜ ಮಯೂರ ವರ್ಮನ ಕಂಚಿನ ಪ್ರತಿಮೆ ಸ್ಥಾಪಿಸಬೇಕೆಂದು ಕದಂಬ ಕನ್ನಡ ಸೇನೆಯ ಜಿಲ್ಲಾಧ್ಯಕ್ಷ ಸತೀಶ ನಾಯ್ಕ ಅವರು ರಾಜ್ಯಾಧ್ಯಕ್ಷ ಕದಂಬ ಶಿವಕುಮಾರ ಮತ್ತು ಸಂಸ್ಥಾಪಕ ಅಧ್ಯಕ್ಷ ಕದಂಬ ಅಂಬರೀಶ ಜೊತೆಯಾಗಿ ಬನವಾಸಿಯಲ್ಲಿ ನಡೆದ ರಾಜ್ಯಮಟ್ಟದ ಕನ್ನಡ ರಾಜ್ಯೋತ್ಸವದಲ್ಲಿ ಶಾಸಕ ಶಿವರಾಮ ಹೆಬ್ಬಾರರಿಗೆ ಮನವಿ ಸಲ್ಲಿಸಿದರು.
ಹೆಬ್ಬಾರ ಅವರು ತಕ್ಷಣ ಸ್ಪಂದಿಸಿ ಮುಖ್ಯ ಮಂತ್ರಿಗಳ ಗಮನಕ್ಕೆ ತಂದು ಬನವಾಸಿಯಲ್ಲಿಯೇ ಮೊದಲ ಪುತ್ಥಳಿ ಸ್ಪಾಪನೆ ಮಾಡಿಸುತ್ತೇನೆ ಎಂದರು.
ಅಂದು ನಡೆದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಗೌಡಗೆರೆ ಚಾಮುಂಡೇಶ್ವರಿ ದೇವಾಲಯದ ಧರ್ಮದರ್ಶಿ ಶ್ರೀ ಮಲ್ಲೇಶ ಅವರು ಪ್ರತಿಮೆ ಮಾಡಿಸಲು ೧ ಲಕ್ಷ ರೂಗಳನ್ನು ನೀಡುತ್ತೇನೆಂದು ಘೋಷಣೆ ಮಾಡಿದರು.
ಹಾಗೆಯೇ ಮೊದಲ ಕನ್ನಡ ಸಂಘದ ಶ್ರೀಮತಿ ಸಾರಿಕಾ ವಿನಾಯಕ ಅವರು ೫೦ ಸಾವಿರ ರೂಪಾಯಿ ಮತ್ತು ಡಾ ಲೋಕಾನಂದ ೧೦ ಸಾವಿರ ರೂಪಾಯಿಗಳನ್ನು ಘೋಷಣೆ ಮಾಡಿದರು.
ಜಿಲ್ಲಾಧ್ಯಕ್ಷ ಸತೀಶ ನಾಯ್ಕ ಅವರು ಪ್ರತಿಮೆ ಸ್ಥಾಪಿಸಲು ತಮ್ಮ ದೇಣಿಗೆಯನ್ನು ಘೋಷಿಸಿದ ಮಹನೀಯರಿಗೂ ರಾಜ್ಯೋತ್ಸವ ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದರಿಗೆ ಕೃತಜ್ಞತೆ ಸಲ್ಲಿಸಿದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



