ಅಘನಾಶಿನಿ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಶಿರಸಿಯಲ್ಲಿ ಸಭೆ: ಕೋಡ್ಸರದಲ್ಲಿ ಪೂರ್ವಭಾವಿ ಸಭೆ
ಆಪ್ತ ನ್ಯೂಸ್ ಕೋಡ್ಸರ:
ಸಿದ್ದಾಪುರ ತಾಲೂಕಿನ ಹಸರಗೋಡ ಪಂಚಾಯತದ ಕೋಡ್ಸರದ ವ್ಯವಸಾಯ ಸೇವಾ ಸಹಕಾರಿ ಸಂಘದ ಆವರಣದಲ್ಲಿ
ಅಘನಾಶಿನಿ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಜನವರಿ 11ರಂದು ಶಿರಸಿಯಲ್ಲಿ ಜರುಗಲಿರುವ ಬೃಹತ್ ಸಮಾವೇಶದ ಪೂರ್ವಭಾವಿ ಸಭೆ ನಡೆಯಿತು.
ಸಂಘದ ಸುತ್ತ ಮುತ್ತಲಿನ ಗ್ರಾಮಗಳ ರೈತ ಬಾಂಧವರು, ಹೋರಾಟ ಸಮಿತಿಯ ಸಂಚಾಲಕರು, ಸಂಘ ಸಂಸ್ಥೆಯ ಪ್ರತಿನಿಧಿಗಳು ಪಾಲ್ಗೊಂಡು ಸ್ವರ್ಣವಲ್ಲೀ ಶ್ರೀ ಗಳವರ ಆದೇಶದಂತೆ ಇದೇ ಬರುವ 11 ನೇ ತಾರೀಖು ಮಧ್ಯಾಹ್ನ 2 ಗಂಟೆಗೆ ಶಿರಸಿಯಲ್ಲಿ ನಡೆಯುವ ಬೃಹತ್ ಸಮಾವೇಶಕ್ಕೆ ಸಂಪೂರ್ಣ ಬೆಂಬಲ ನೀಡಬೇಕೆಂದು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ನದಿ ಜೋಡಣೆ ವಿರೋಧಿ ಹೋರಾಟದಲ್ಲಿ ಭಾಗವಹಿಸುವ ನಿರ್ಣಯ ಮಾಡಲಾಯಿತು.
ನದಿ ಜೋಡಣೆ ವಿರೋಧಿಸಿ ಹೋರಾಟಕ್ಕೆ ಆರ್ಥಿಕ ಸಹಕಾರ ಕೂಡ ಜನರಿಂದ ಆಗಬೇಕಾಗಿದ್ದು, ಕನಿಷ್ಠ 100 ರೂಪಾಯಿಯನ್ನಾದರೂ ಪಾವತಿಸಿ ಆರ್ಥಿಕ ಸಹಾಕರ ನೀಡಬೇಕಾಗಿ ಬೇಡ್ತಿ-ಅಘನಾಶಿನಿ ಹೋರಾಟ ಸಮಿತಿಯ ಸಂಚಾಲಕರು ಸೂಚಿಸಿದರು.
ನಮ್ಮದು ಅಘನಾಶಿನಿ-ಬೇಡ್ತಿ ನಮ್ಮದು ಎನ್ನುವ ಭಾವನೆಯಲ್ಲಿ ಪ್ರತಿಯೊಬ್ಬರೂ ಹೋರಾಟಕ್ಕೆ ಸರ್ವವಿಧದಿಂದಲೂ ಸಹಕರಿಸಿ ಕೈ ಜೋಡಿಸಬೇಕು. ಸ್ವರ್ಣವಲ್ಲೀ ಶ್ರೀಗಳು ಹಾಗೂ ಶ್ರೀಮನ್ನೆಲೆಮಾವು ಮಠದ ಶ್ರೀ ಗಳವರ ಮಾರ್ಗದರ್ಶನ ಹಾಗೂ ಸಾನಿಧ್ಯದಲ್ಲಿ ಜರುಗುವ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸೋಣ. ಶ್ರೀಗಳವರ ಆದೇಶವನ್ನು ಶಿರಸಾ ಪಾಲಿಸುವಂತೆ ಕೋಡ್ಸರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರು,ಉಪಾಧ್ಯಕ್ಷರು ಹಾಗೂ ಆಡಳಿತ ಮಂಡಳಿ ಸದಸ್ಯರು ಕೋರಿದ್ದಾರೆ.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0



