ಮೋಡಿ ಮಾಡಿದ ಮೋಕ್ಷತ್ರಯ ತಾಳಮದ್ದಲೆ

Oct 31, 2025 - 13:34
 0  38
ಮೋಡಿ ಮಾಡಿದ ಮೋಕ್ಷತ್ರಯ ತಾಳಮದ್ದಲೆ

ಆಪ್ತ ನ್ಯೂಸ್ ಶಿರಸಿ:

"ಕಮಲಬಿಂದು ಬಳಗ- ನಾಗರಕುರ" ಇದರ ವತಿಯಿಂದ ಶಿರಸಿಯಲ್ಲಿ ಆಯೋಜಿಸಲ್ಪಟ್ಟ ಕಾರ್ಯಕ್ರಮ ತಾಳಮದ್ದಳೆ - "ಮೋಕ್ಷತ್ರಯ" ( ಜಟಾಯು ಮೋಕ್ಷ, ವಾಲಿ ಮೋಕ್ಷ, ಸುಧನ್ವ ಮೋಕ್ಷ ). 
ಈ ಕಾರ್ಯಕ್ರಮದ ಕೊನೆಯ ದಿವಸದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಎಮ್. ಎನ್. ಹೆಗಡೆ ಹಲಸಿನಹಳ್ಳಿ ಅಧ್ಯಕ್ಷರು, ಹಿರಿಯ ನಾಗರೀಕರ ಸಂಘಟನೆ ಸಿರಸಿ, ಇವರು ಮಾತನಾಡುತ್ತಾ, ಯಕ್ಷಗಾನ ಮತ್ತು ತಾಳಮದ್ದಳೆ  ಈ ಕಲೆಯು ಪರಂಪರೆಯಿಂದ ಬಂದದ್ದು. ಅದಕ್ಕೆ  ಅದು ನಿರ್ದಿಷ್ಟವಾದ ವರ್ಷದಿಂದ ಬಂದದ್ದು ಅಂತ ಹೇಳುವುದು ಕಷ್ಟ. ಕಮಲಬಿಂದು ಬಳಗ ನಾಗರಕುರ ಈ ಸಂಸ್ಥೆಯು ಅನೇಕ ಬಿಂದುಗಳು ಸೇರಿ ಸಿಂಧುವಾಗಿ ಬೆಳೆಯಲಿ ಎಂದು ಹಾರೈಸಿದರು.
ಇನ್ನೋರ್ವ ಅತಿಥಿಗಳಾಗಿ ಆಗಮಿಸಿದ್ದ ಕೃಷ್ಣ ಪದಕಿ ಸಾಹಿತಿಗಳು ಶಿರಸಿ ಇವರು ಮಾತನಾಡುತ್ತಾ, ಯಕ್ಷಗಾನವನ್ನು ಜಾನಪದ ಕಲೆಯಾಗಿ ನಾವು ಪರಿಗಣಿಸುತ್ತಾ ಬಂದಿದ್ದೇವೆ. ಅದು ಶಾಸ್ತ್ರೀಯ ಕಲೆಯಾಗಿ ಒಂದು ಚೌಕಟ್ಟಿನ ಒಳಗೆ ಬಂದಾಗ ಅದು ಶಿಷ್ಠ ಕಲೆಯಾಗಿ ಗುರುತಿಸಿಕೊಳ್ಳುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಅನಂತರದಲ್ಲಿ ಕಾರ್ಯಕ್ರಮದ ಸಂಯೋಜಕರಾದ ಕೇಶವ ಹೆಗಡೆ ನಾಗರಕುರ ಇವರು ಕಮಲ ಬಿಂದು ಬಳಗ ಸಂಘಟನೆಯ ಹುಟ್ಟು ಮತ್ತು ಅದು ನಡೆದು ಬಂದ ಬಗ್ಗೆ ಹಾಗೂ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವ ಬಗ್ಗೆ ಮಾಹಿತಿ ನೀಡಿದರು ಮತ್ತು ಕಾರ್ಯಕ್ರಮಕ್ಕೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದವರಗೆ ಕೃತಜ್ಞತೆಯನ್ನು ಸಲ್ಲಿಸುತ್ತಾ ವಂದನಾರ್ಪಣೆಯನ್ನು ಸಲ್ಲಿಸಿದರು. ವೇದಿಕೆಯಲ್ಲಿ ಸುಬ್ರಾಯ ಹೆಗಡೆ ಕೆರೆಕೊಪ್ಪ ಹಾಗೂ ರೋಹಿಣಿ ಹೆಗಡೆ ಉಪಸ್ಥಿತರಿದ್ದರು. ಕೊನೆಯಲ್ಲಿ ದಾಕ್ಷಾಯಿಣಿ ಪಿ.ಸಿ.ಶಿರಸಿ ವಂದನಾರ್ಪಣೆಗೈದರು. ಅನಂತರ ತಾಳಮದ್ದಳೆ "ಸುಧನ್ವ ಮೋಕ್ಷ" ಕಾರ್ಯಕ್ರಮ ನಡೆಯಿತು.
ಅದರಲ್ಲಿ ಭಾಗವತರಾಗಿ, ಗಣಪತಿ ಹೆಗಡೆ ತಟ್ಟೀಸರ ಮತ್ತು ಮದ್ದಳೆಯಲ್ಲಿ ಶ್ರೀಪಾದ್ ಭಟ್ ಮೂಡಗಾರ ಹಾಗೂ ಅರ್ಥಧಾರಿಗಳಾಗಿ ಸುಧನ್ವ- ರೋಹಿಣಿ ಹೆಗಡೆ ಶಿರಸಿ, ಅರ್ಜುನ- ಶ್ರೀನಿವಾಸ್ ಮತ್ತಿಘಟ್ಟ, ಪ್ರಭಾವತಿ - ಸುಬ್ರಾಯ ಹೆಗಡೆ ಕೆರೆಕೊಪ್ಪ, ವೃಷಕೇತು - ದಾಕ್ಷಾಯಿಣಿ ಪಿ ಸಿ ಶಿರಸಿ, ಶ್ರೀಕೃಷ್ಣ - ಶ್ರೀ ಪ್ರಸಾದ ಹಲಗೇರಿ ಇವರು ಭಾಗವಹಿಸಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0