ಇಸ್ಪೀಟ್ ಆಡುತ್ತಿದ್ದವರಲ್ಲಿ ಒಬ್ಬ ಸಿಕ್ಕುಬಿದ್ದ, ನಾಲ್ವರು ಓಡಿಹೋದ್ರು

ಆಪ್ತ ನ್ಯೂಸ್ ಬನವಾಸಿ:
ಬನವಾಸಿ ಪೊಲೀಸ್ ಠಾಣಾ ವ್ಯಾಪ್ತಿಯ ಶಿರಸಿ -ಕೊರ್ಲಕಟ್ಟ ರಸ್ತೆಯಿಂದ ಗೊಣೂರು ಗ್ರಾಮಕ್ಕೆ ಹೋಗುವ ಕಚ್ಚಾ ರಸ್ತೆಯ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಐದು ಜನರು ಅಂದರ್ ಬಹಾರ್ ಇಸ್ಪೀಟು ಆಡುತ್ತಿದ್ದ ಐವರ ಮೇಲೆ ಮಾಂತೇಶ್ ಕುಂಬಾರ್ ಪಿಎಸ್ಐ ಬನವಾಸಿ ಹಾಗೂ ಸಿಬ್ಬಂದಿಗಳು ಹೋಗಿ ದಾಳಿ ಮಾಡಿ ಪ್ರಕರಣ ದಾಖಲಿಸಿದ್ದಾರೆ.
ಜಾಹಿರ್ ಖಾನ್ ತಂದೆ ಮಾಬೂಬ್ ಖಾನ್ ವಿಳಾಸ ಹಂಚಿನಕೇರಿ ಶಿರಸಿ ಈತನನ್ನು ಬಂದಿಸಿದ್ದು, ಉಳಿದ ನಾಲ್ಕು ಜನರು ತಪ್ಪಿಸಿಕೊಂಡಿದ್ದಾರೆ. ಮಕ್ಬುಲ್ ಸಾಬ್ ತಂದೆ ಮೊಹಮ್ಮದ್ ಸಾಬ್ ನೆಗಳೂರು ವಿಳಾಸ ಕಟ್ಲೆರಿ ಪ್ಲಾಟ್ ದೊಡ್ನಳ್ಳಿ ಸಿರಸಿ, ಮಹಮ್ಮದ ರಫೀಕ ಮದರ್ ಸಾಬ್ ದುಂಡಸಿ ವಿಳಾಸ ಹಂಚಿನಕೇರಿ ಸಿರಸಿ, ಪ್ರವೀಣ್ ತಂದೆ ಮಂಜ ನಾಯಕ್ ವಿಳಾಸ ಗೂಣೂರು ಶಿರಸಿ, ಪರಮೇಶ್ವರ ತಂದೆ ಕೇಶವ ಪಟಗಾರ ವಿಳಾಸ ಕೋರ್ಲಕಟ್ಟ ಶಿರಸಿ ತಪ್ಪಿಸಿಕೊಂಡವರಾಗಿದ್ದಾರೆ. ಈ ಸಮಯದಲ್ಲಿ ಸ್ಥಳದಲ್ಲಿ ಸಿಕ್ಕ 52 ಇಸ್ಪೇಟ್ ಎಲೆಗಳು ನಗದು ಹಣ ರೂ.1400 ಹಾಗೂ ಪ್ಲಾಸ್ಟಿಕ್ ತಾಡಪತ್ರಿ ಇವುಗಳನ್ನು ಜಪ್ತಿಪಡಿಸಲಾಗಿದೆ. ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
What's Your Reaction?






