ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ

Sep 26, 2025 - 12:54
 0  37
ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ

ಆಪ್ತ ನ್ಯೂಸ್‌ ಶಿರಸಿ:

ಶಿರಸಿ ಶಹರ ಪೊಲೀಸ್ ಠಾಣಾ ವ್ಯಾಪ್ತಿಯ ಬಿಡ್ಕಿ ಸರ್ಕಲ್ ನಿಂದ ಮುಸ್ಲಿಂಗಲ್ಲಿ ಕಡೆಗೆ ಹೋಗುವ ರಸ್ತೆಯ ಹತ್ತಿರ ಒಬ್ಬ ವ್ಯಕ್ತಿ ಅನುಮಾನಾಸ್ಪದವಾಗಿ ನಿಂತುಕೊಂಡಿದ್ದು, ಪೊಲೀಸ್ ಜೀಪ್ ಕಂಡು ಓಡಿ ಹೋಗಲು ಪ್ರಯತ್ನಿಸಿದವನಿಗೆ ಹಿಡಿದು ವಿಚಾರಿಸಿದಾಗ ಸದರಿಯವನು ಗಾಂಜಾ ಪದಾರ್ಥವನ್ನು ಸಾಗಾಟ ಮಾಡಿಕೊಂಡು, ಮಾರಾಟ ಮಾಡಲು ಬಂದಿರುವುದಾಗಿ ತಿಳಿಸಿರುವ ಬಗ್ಗೆ ವರದಿಯಾಗಿದೆ.

ಮೇಲಾಧಿಕಾರಿಗಳ ಮಾರ್ಗದರ್ಶನ ದಲ್ಲಿ, ಶಿರಸಿ ಶಹರ ಪೊಲೀಸರು  ಆರೋಪಿತನಾದ ಮುರಗೇಶ @ ಗುಂಡಾ ತಂದೆ ಮಾರುತಿ ಪೂಜಾರಿ. (25) ಸಾ: ಬಸವೇಶ್ವರ ನಗರ ಆರ್.ಟಿ.ಓ ಆಫೀಸ್ ಹತ್ತಿರ, ಶಿರಸಿ,ಈತನನ್ನು ದಸ್ತಗಿರಿ ಮಾಡಿ ಆರೋಪಿತನು ಮಾರಾಟ ಮಾಡಲು ತಂದಿದ್ದ ಸುಮಾರು 10,000/- ರೂಪಾಯಿ ಮೌಲ್ಯದ 152 ಗ್ರಾಂ ತೂಕದ ಗಾಂಜಾ ಮಾದಕ ವಸ್ತು ಜಪ್ತ ಮಾಡಿ  ಕಾನೂನು ರೀತ್ಯಾ ಕ್ರಮ ಕೈಗೊಂಡಿದ್ದಾರೆ.

ಗೀತಾ ಪಾಟೀಲ್ ಪೊಲೀಸ್ ಉಪಾಧೀಕ್ಷಕರು, ಶಿರಸಿ ಉಪವಿಭಾಗ, ಮತ್ತು ಶಶಿಕಾಂತ ವರ್ಮಾ ಪೊಲೀಸ್ ವೃತ್ತ ನಿರೀಕ್ಷಕರು, ಶಿರಸಿ ರವರ ಮಾರ್ಗದರ್ಶನದಲ್ಲಿ  ಪಿಎಸ್ಐ ಗಳಾದ ನಾಗಪ್ಪ. ಬಿ ಮತ್ತು ನಾರಾಯಣ ರಾಟೋಡ್ ಇತರ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0