ಜೋಯಿಡಾ ನಗರಬಾವಿಯಲ್ಲಿ ನರಕಾಸುರ ದಹನಕ್ಕೆ ಸಿದ್ಧತೆ

ಆಪ್ತ ನ್ಯೂಸ್ ಜೋಯಿಡಾ:
ತಾಲೂಕಿನ ಜೋಯಿಡಾ ಗ್ರಾಮ ಪಂಚಾಯತ ವ್ಯಾಪ್ತಿಯ ನಗರಬಾವಿಯಲ್ಲಿ ದೀಪಾವಳಿ ಹಬ್ಬದ ನಿಮಿತ್ತ ನರಕಾಸುರನ ದಹನದ ಸಿದ್ಧತೆ ನಡೆದಿದೆ.
ಇಲ್ಲಿನ ಎನ್.ಎಸ್.ಎಸ್ ಬಾಯ್ಸ್ ತಂಡದ ಸದಸ್ಯರು ನರಕಾಸುರನ ಪ್ರತಿಮೆಯನ್ನು ಮಾಡಿದ್ದು, ಸಂಜೆ ಮೆರವಣಿಗೆಯ ಮೂಲಕ ನಸುಕಿನ ಜಾವ ನರಕಾಸುರನ ದಹನ ಮಾಡಿ ಅಭ್ಯಂಗ ಸ್ನಾನ ಮಾಡುವ ಪದ್ಧತಿ ಇದೆ.
ಜೋಯಿಡಾ ಕೇಂದ್ರ ಸ್ಥಾನದಲ್ಲಿ ದೀಪಾವಳಿಯ ಹಬ್ಬದ ನಿಮಿತ್ತ ಪೂಜಾ ಸಾಮಗ್ರಿ, ಹೂವು, ದೀಪಗಳ ಅಲಂಕಾರ ವಸ್ತುಗಳನ್ನು ಮಾರಾಟ, ಖರೀದಿಸುವ ವಹಿವಾಟು ಜೋರಾಗಿ ನಡೆದಿದೆ.ಅಕಾಲಿಕ ಮಳೆ ಮುಂದುವರೆದಿರುವುದು ಜನರಲ್ಲಿ ಬೇಸರವನ್ನುಂಟು ಮಾಡಿದೆ.
What's Your Reaction?






