ರಾಮಚಂದ್ರ ನಾಯ್ಕ್ ರವರಿಗೆ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ.
ಆಪ್ತ ನ್ಯೂಸ್ ಯಲ್ಲಾಪುರ:
ಪಟ್ಟಣದ ರಾಮಾಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಅಂಚಿನಲ್ಲಿರುವ ಪಧೋನ್ನತ ಮುಖ್ಯ ಶಿಕ್ಷಕ ರಾಮಚಂದ್ರ ಈಶ್ವರ ನಾಯ್ಕ ಇವರಿಗೆ ಈ ಸಲದ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸುವ ಮೂಲಕ ಒಬ್ಬ ಪ್ರಾಮಾಣಿಕ ಮತ್ತು ಶಿಸ್ತುಬದ್ದ ಶಿಕ್ಷಕನಿಗೆ ಸಂದ ಗೌರವ ವಾಗಿದೆ.
ಮೂರುವರೇ ದಶಕಗಳ ಕಾಲ ಸುದೀರ್ಘವಾಗಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಅವರು ಸಧ್ಯವೇ ನಿವೃತ್ತಿಯನ್ನೂ ಕೂಡಾ ಹೊಂದಲಿದ್ದಾರೆ.
ಬೇಲೂರು, ಯಲ್ಲಾಪುರ ತಾಲೂಕಿನ ಕೊಡಸೆ, ಸಾತನಕೊಪ್ಪ, ನಂದೊಳ್ಳಿ,ಪಟ್ಟಣದ ಗಣಪತಿ ಗಲ್ಲಿ ನಂತರ ಬಿ ಆರ್ ಪಿಯಾಗಿ ಕೆಲ ಕಾಲ ಕರ್ತವ್ಯ ಮಾಡಿದ ಬಳಿಕ ಹಾಲಿ ರಾಮಾಪುರ ಶಾಲೆಯಲ್ಲಿ ಪದೋನ್ನತಿ ಪ್ರಭಾರ ಮುಖ್ಯ ಸದಿಕ್ಷಕ ಸೇವೆ ಸಲ್ಲಿಸುತ್ತಿದ್ದಾರೆ.
ಜನ ಮೆಚ್ಚಿದ ಶಿಕ್ಷಕ, ಸ್ಕೌಟ್ ರಾಜ್ಯ ಮಟ್ಟದ ಪ್ರಶಸ್ತಿ,ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ, ಲೈನ್ಸ್ ಕ್ಲಬ್ ಪ್ರಶಸ್ತಿ, ತಾಲೂಕ ಆಡಳಿತದಿಂದ ಪ್ರಸಂಸೆ, ರಾಜ್ಯ ಮಕ್ಕಳ ಆಯೋಗದಿಂದ ಪ್ರಶಂಸನ ಪತ್ರ ,ಜಿಲ್ಲಾ ಉಸ್ತುವಾರಿ ಮಂತ್ರಿಗಳಿಂದ ಪ್ರಶಂಸನಾ ಪತ್ರ ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ಹಲವು ಪ್ರಶಸ್ತಿ ಗೌರವಗಳು ಇವರಿಗೆ ದೊರೆತಿವೆ.
ವಿಭಿನ್ನ ಅಭಿರುಚಿಯ ಮಾಸ್ತರರು ಇವರು:
ಅವರು ತಮ್ಮ ವೃತ್ತಿಯ ಜೊತೆಗೆ ರಾಷ್ಟ್ರ, ರಾಜ್ಯ, ಮತ್ತು ಸಮಾಜಕ್ಕೆ ಹೆಚ್ಚಿನ ಸೇವೆ ನೀಡಬೇಕೆಂಬ ಹಂಬಲದವರಾಗಿದ್ದರು.
ಇದಕ್ಕಾಗಿ ಸ್ವಯಂ ಜಾಗೃತಿ ಅಭಿಯಾನ 2019 ರಿಂದಲೇ ಆರಂಭಿಸಿದ್ದಾರೆ. ನಿವೃತ್ತಿಯ ನಂತರ ಪೂರ್ಣ ಸಮಯ ಈ ಕಾರ್ಯಕ್ಕೆ ಮೀಸಲು ಎನ್ನುತ್ತಾರೆ ಇವರು.ಅದಲ್ಲದೇ ದೇಶದ ರಕ್ಷಣಾ ನಿಧಿ,ಪ್ರಧಾನ ಮಂತ್ರಿಗಳ, ಮುಖ್ಯ ಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ಸಂದಾಯದ ಜೊತೆಯಲ್ಲಿ ಬಡ ಮಕ್ಕಳ ವ್ಯಾಸಂಗಕ್ಕೆ ನೆರವು ನೀಡುವ ದೊಡ್ಡ ಮನಸ್ಸು ಅವರದ್ದು.ಹಾಗೂ "ವ್ಯಸನ ಮುಕ್ತ ಮೌಡ್ಯ ಮುಕ್ತ ಸಮಾಜ" ನಿರ್ಮಾಣಕ್ಕೆ ಶ್ರಮಿಸುತ್ತಿದ್ದಾರೆ. ಹಸಿದ ಮಕ್ಕಳಿಗೆ ಶಾಲೆಯಲ್ಲಿ ಬೆಳಗಿನ ಉಪಹಾರವನ್ನು ಆರಂಭಿಸಿಕೊಂಡು ಬಂದವರು.ಅನಾಥ ಮಕ್ಕಳನ್ನು ರಕ್ಷಣೆ ಮಾಡುವ ಮೂಲಕ ಮಾನವೀಯತೆ ತೋರಿದ್ದಾರೆ.
ಗಣಪತಿ ಗಲ್ಲಿ ಶಾಲೆಯಲ್ಲಿ ವಿದ್ಯಾಗಮ ಕಲಾ ಮಂದಿರ ನಿರ್ಮಾತೃ:
ಕೋವಿಡ್ ಸಮಯದಲ್ಲಿ 3 ಲಕ್ಷ. ರೂ ಸ್ವಂತ ಖರ್ಚಿನಿಂದ "ವಿದ್ಯಾಗಮ ಕಲಾ ಮಂದಿರ "ವನ್ನು ಶಾಲೆಗೆ ನಿರ್ಮಿಸಿ ಕೊಟ್ಟು ಮಾದರಿಯಾಗಿದ್ದಾರೆ.ಶಾಲೆಗೆ ಬೇಕಾದ ಧ್ವನಿವರ್ಧಕ,ಸಿಸಿ ಕ್ಯಾಮೆರಾ,ಗಣಕಯಂತ್ರ,ಸೇರಿದಂತೆ ಮಕ್ಕಳ ಕಲಿಕೆಗೆ ಬೇಕಾದ ಕಲಿಕೋಪಕರಣಗಳನ್ನು ಸ್ವತಃ ಸ್ವಂತ ಖರ್ಚಿನಿಂದ ಶಾಲೆಗೆ ನೀಡಿ ಮಕ್ಕಳ ಉತ್ತಮ ಕಲಿಕೆಗೆ ನೆರವಾಗಿದ್ದಾರೆ.ಇವರು ಸೇವೆ ಸಲ್ಲಿಸಿದ ಶಾಲೆಗಳನ್ನು ಮಾದರಿಯಾಗಿಸಿದ್ದಾರೆ. ರಾಷ್ಟ್ರಪ್ರೇಮ ಜಾಗೃತಿ ಯೋಧರ ಬಗ್ಗೆ ಮಕ್ಕಳಿಗೆ ತಿಳಿಸುವದು ಇವರ ನೆಚ್ವಿನ ಸಂಗತಿಯಾಗಿದೆ.ಹಲವಾರು ಯೋಧರನ್ನು ಶಾಲೆಗೆ ಕರೆಯಿಸಿ ಪ್ರೇರಣೆ ನೀಡಿಸಿದ್ದಾರೆ.ಇವರಿಗೆ ದೊರೆತ
ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಯ ಮೊತ್ತವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸಮರ್ಪಣೆ ಮಾಡಿ ಕಾಳಜಿ ತೋರಿದವರು. ರಾಮಚಂದ್ರ ನಾಯ್ಕ್ ಅವರಿಗೆ ದೊರೆತ ರಾಜ್ಯಪ್ರಶಸ್ತಿ ಇನ್ನಷ್ಟು ಅವರ ಗೌರವವನ್ನು ಹೆಚ್ಚಿಸಿದೆ.ವಿಶ್ರಾಂತ ಜೀವನಕ್ಕೆ ಕಾಲಿಡಲು ಮುಂದಾಗುತ್ತಿರುವ ಸಂದರ್ಭದಲ್ಲಿಬದೊರೆತ ಈ ಗೌರವ ಅವರನ್ನು ಪುಳಕಿತಗೊಳಿಸಿದೆ.ಮಕ್ಕಳೊಂದಿಗೆ ಮುಂದೆಯೂ ನನ್ನ ಚಡುವಟಿಕೆ ಬದುಕು ಇರುತ್ತದೆ ಎನ್ನುತ್ತಾರೆ.
ಮುಖ್ಯಮಂತ್ರಿಗಳಿಂದ ಸೆ ೫ ಶನಿವಾರ ಪ್ರಶಸ್ತಿಯನ್ನು ಪಡೆದುಕೊಳ್ಳಲಿದ್ದಾರೆ ರಾಮಚಂದ್ರ ನಾಯ್ಕ್ ರವರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0