ಉತ್ತರಕನ್ನಡ ಜಿಲ್ಲಾ 25 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ ರೋಹಿದಾಸ ನಾಯ್ಕ
ಆಪ್ತ ನ್ಯೂಸ್ ದಾಂಡೇಲಿ:
ದಾಂಡೇಲಿಯಲ್ಲಿ ಡಿಸೆಂಬರ 13, 14, 15 ರಂದು ನಡೆಯಲಿರುವ ಉತ್ತರಕನ್ನಡ ಜಿಲ್ಲಾ 25 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ ಕುಮಟಾದ ರೋಹಿದಾಸ ನಾಯ್ಕ ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್. ವಾಸರೆ ತಿಳಿಸಿದ್ದಾರೆ.
ಈ ಬಗ್ಗೆ ಕಸಾಪ ಜಿಲ್ಲಾ ಕಾರ್ಯಕಾರಿ ಸಮಿತಿ ಸಭೆಯ ನಂತರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ದಾಂಡೇಲಿಯಲ್ಲಿ ಮಂಗಳವಾರ ನಡೆದ ಜಿಲ್ಲಾ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸಮ್ಮೇಳನಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು. ಮುಂಡಗೋಡ ಕಸಾಪ ಅಧ್ಯಕ್ಷ ವಸಂತ ಕೊಣಸಾಲಿ ಸೂಚಿಸಿದರು. ಹೊನ್ನಾವರ ಅಧ್ಯಕ್ಷ ಎಸ್.ಎಚ್. ಗೌಡ ಅನುಮೋದಿಸಿದರು. ಅಂತಿಮವಾಗಿ ಸಭೆಯಲ್ಲಿ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಯಿತೆಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಕಸಾಪ ಕಾರ್ಯದರ್ಶಿ ಪಿ.ಆರ್. ನಾಯ್ಕ, ಜಾರ್ಜ್ ಫರ್ನಾಂಡೀಸ್, ಕೋಶಾಧ್ಯಕ್ಷ ಮುರ್ತುಜಾ ಹುಸೇನ, ಆನೆ ಹೊಸುರ, ಜಿಲ್ಲಾ ಸಮಿತಿ ಸದಸ್ಯರಾದ ಎಸ್.ಜಿ. ಬಿರಾದರ, ಪಿ.ಎಮ್. ಮುಕ್ರಿ, ಜಯಶೀಲ ಆಗೇರ, ಕಸಾಪ ತಾಲೂಕು ಘಟಕಗಳ ಅಧ್ಯಕ್ಷರಾದ ನಾರಾಯಣ ನಾಯ್ಕ, ದಾಂಡೇಲಿ, ಸುಮಂಗಲಾ ಅಂಗಡಿ, ಹಳಿಯಾಳ, ರಾಮಾ ನಾಯ್ಕ, ಕಾರವಾರ, ಗೋಪಾಲಕೃಷ್ಣ ನಾಯಕ, ಅಂಕೋಲಾ, ವಸಂತ ಕೊಣಸಾಲಿ, ಮುಂಡಗೋಡ, ಸುಬ್ರಹ್ಮಣ್ಯ ಭಟ್, ಯಲ್ಲಾಪುರ, ಸುಬ್ರಾಯ ಭಟ್, ಬಕ್ಕಳ ಶಿರಸಿ, ಗಂಗಾಧರ ನಾಯಕ, ಭಟ್ಕಳ, ಎಸ್.ಎಚ್. ಗೌಡ, ಹೊನ್ನಾವರ, ಪ್ರಮೋದ ನಾಯ್ಕ, ಕುಮಟಾ, ಚಂದ್ರಶೇಖರ ಕುಂಬ್ರಿಗದ್ದೆ ಸಿದ್ದಾಪುರ ಮುಂತಾದವರಿದ್ದರೆಂದು ವಾಸರೆ ತಿಳಿಸಿದರು
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



