ಹೇರೂರಿನಲ್ಲಿ ಸಂಘ ಪಥ 'ಸಂಚಲನ'
ಆಪ್ತ ನ್ಯೂಸ್ ಹೇರೂರು:
ಸಿದ್ದಾಪುರ ತಾಲೂಕಿನ ಹೆರೂರಿನಲ್ಲಿ ನಡೆದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗಣವೇಷಧಾರಿಗಳ ಪಥ ಸಂಚಲನ ನಡೆಯಿತು. ಸುಮಾರು 900 ಕ್ಕೂ ಹೆಚ್ಚಿನ ಗಣವೇಷಧಾರಿಗಳು ಪಾಲ್ಗೊಂಡು ಶಿಸ್ತುಬದ್ಧವಾದ ಪಥ ಸಂಚಲನ ನಡೆಸಿದರು. ಮಳೆಯ ನಡುವೆಯೂ ನಡೆದ ಪಥ ಸಂಚಲನಕ್ಕೆ ಗ್ರಾಮಸ್ಥರು ಹೂ ಪ್ರೋಕ್ಷಣೆಮಾಡುವ ಮೂಲಕ ಭವ್ಯವಾದ ಸ್ವಾಗತ ನೀಡಿದರು.
ನಂತರ ನಡೆದ ಕಾರ್ಯಕ್ರಮದಲ್ಲಿ ವಿಶ್ವ ಹಿಂದು ಪರಿಷತ್ತಿನ ಕೇಂದ್ರೀಯ ಕಾರ್ಯದರ್ಶಿ ಗೋಪಾಲ ನಾಗರಕಟ್ಟೆ ಸಭಿಕರನ್ನುದ್ದೇಶಿಸಿ ಮಾತನಾಡಿದರು.
ಆರಂಭದಲ್ಲಿ ಸಂಘವನ್ನ ಅಪಹಾಸ್ಯ ಮಾಡಿದ್ದರು, ಮಕ್ಕಳನ್ನ ಸೇರಿಸಿಕೊಂಡು ಆಟ ಅಡಿಸಿದರೆ ದೇಶಕ್ಕೆ ಏನು ಒಳ್ಳೆಯದು ಆಗತ್ತೇ ಅಂತ ಕೇಳಿದ್ದರು, ಗಣವೇಶ ಧರಿಸಿ ಸಂಚಲನ ಮಾಡಿದರೆ ದೇಶಪ್ರೇಮ ಬೆಳೆಯತ್ತಾ ಅಂತ ಪ್ರಶ್ನೆ ಮಾಡಿದ್ದರು. ಸಂಘ ಈ ಹಂತ ದಾಟಿದ ಮೇಲೆ ವಿರೋಧ ಮಾಡಿದರು ಮತ್ತು ಸುಳ್ಳು ಆರೋಪ ಹೊರಿಸಿ ನಿಷೇಧ ಹೇರಿದರು. ಆದರೂ ಸಂಘವನ್ನು ಹತ್ತಿಕ್ಕಲಿಕ್ಕೆ ಆಗಲಿಲ್ಲ ಎಂದರು. ವಿರೋಧದ ಈ ಎರಡನೇ ಮಜಲು ದಾಟಿದ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಸಮಾಜವೇ ಇಂದು ಸ್ವೀಕಾರ ಮಾಡಿದೆ. ಲಕ್ಷಕ್ಕೂ ಮೀರಿ ಸ್ಥಾನಗಳನ್ನು ಸಂಘ ತಲುಪಿದೆ. ದೇಶೋವಿಶಾಲ ಸಂಘಕಾರ್ಯ ಬೆಳೆದಿದೆ. ಒಂದು ಕರೆ ಕೊಟ್ಟಿದ್ದಕ್ಕೆ ಮಂಡಲ-ಮಂಡಲಗಳಲ್ಲಿ ವಿಜಯ ದಶಮಿ ಉತ್ಸವ ಆಗಿದೆ. ಹಿಂದೆ ಸ್ವಯಂಸೇವಕರ ಪಥ ಸಂಚಲನ ನೋಡುತ್ತಾ ಇದ್ದವರು ಇಂದು ತಾವೇ ಗಣವೇಷ ಧರಿಸಿ ಹೆಜ್ಜೆ ಹಾಕಿದ್ದಾರೆ - ಸಮಾಜ ಇಂದು ಸಂಘವನ್ನು ಅಪ್ಪಿಕೊಂಡಿದೆ ಎಂಬುದಕ್ಕೆ ತಾಲೂಕು - ತಾಲೂಕುಗಳಲ್ಲಿ ನಡೆಯುತ್ತಿರುವ ಸಂಚಲನ ಸಾಕ್ಷಿಯಾಗುತ್ತಿದೆ ಎಂದು ಅವರು ಹೇಳಿದರು.
ಹಿಂದೂ ಸಮಾಜದಲ್ಲಿ ಆತ್ಮಾಭಿಮಾನ ವೃದ್ಧಿ ಅಗಲಿಕ್ಕೆ ಸಂಘ ಕಾರಣವಾಗಿದೆ ಎಂದು ಹೇಳಿದರು. ಜುಬಿಲಿ ಆಚರಣೆ ನಮ್ಮ ಉದ್ದೇಶವೇ ಆಗಿಲ್ಲ, 25-50-100ನೇ ವರ್ಷ ಆಚರಣೆ ನಮ್ಮ ಗುರಿಯಲ್ಲ ಎಂದು ಸಂಘ ಸ್ಥಾಪಕ ಪೂಜನೀಯ ಡಾಕ್ಟರ್ ಹೆಡಗೆವಾರ್ ಹೇಳಿದ್ದರು, ಬದಲಾಗಿ ದೇಶದ ಪರಮ ವೈಭವದ ದಿನಗಳನ್ನು ನೋಡುವ ದೃಷ್ಟಿ ಆರೆಸ್ಸೆಸ್ ನದು ಎಂದರು. ನಾವೆಲ್ಲರೂ ಹಿಂದೂ ನಾವೆಲ್ಲರೂ ಒಂದು ಎನ್ನುವ ಭಾವ ಬಿತ್ತಿ, ಸಮರಸ ಸಮಾಜ ನಿರ್ಮಾಣವನ್ನು ಸಂಘ ಮಾಡುತ್ತಿದೆ ಎಂದು ಹೇಳಿದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



