ರಾಷ್ಟ್ರಮಟ್ಟದಲ್ಲಿ ಉತ್ತರ ಕನ್ನಡದ ಗೌರವ ಹೆಚ್ಚಿಸಿದ  S.D.M. ವಿದ್ಯಾರ್ಥಿನಿ ಶ್ರೀನಿಕಾ ಅಂಬಿಗ!

Jan 5, 2026 - 16:14
 0  34
ರಾಷ್ಟ್ರಮಟ್ಟದಲ್ಲಿ ಉತ್ತರ ಕನ್ನಡದ ಗೌರವ ಹೆಚ್ಚಿಸಿದ  S.D.M. ವಿದ್ಯಾರ್ಥಿನಿ ಶ್ರೀನಿಕಾ ಅಂಬಿಗ!
ಆಪ್ತ ನ್ಯೂಸ್‌ ಹೊನ್ನಾವರ:
 
 
ಈ ಬಾರಿ "ಭಾರತೀಯ ನೌಕಾ ಅಕಾಡೆಮಿ" , ಕೇರಳ ರಾಜ್ಯದ ಕಣ್ಣೂರಿನ ಎಜ್ಹಿಮಲಾದಲ್ಲಿ \ಡಿಸೆಂಬರ್ 15 ರಿಂದ 26 ರವರೆಗೆ ಆಯೋಜಿಸಲಾದ "ಅಖಿಲ ಭಾರತ ವಾರ್ಷಿಕ ತರಬೇತಿ ಶಿಬಿರದಲ್ಲಿ"  ಹೊನ್ನಾವರ ತಾಲ್ಲೂಕಿನ ಎಸ್‌ಡಿಎಮ್ ಪದವಿ ಕಾಲೇಜು ವಿದ್ಯಾರ್ಥಿನಿ ಕುಮಾರಿ ಶ್ರೀನಿಕಾ ಎಸ್. ಅಂಬಿಗ ಭಾಗವಹಿಸಿ ಅಮೋಘ ಸಾಧನೆ ತೋರಿದ್ದಾರೆ.
 
ತರಬೇತಿ ಶಿಬಿರದಲ್ಲಿ ರಾಷ್ಟ್ರಾದ್ಯoತ ಸುಮಾರು 300  ಆಯ್ದ NCC ಕೆಡೆಟ್ ಗಳು ಭಾಗವಹಿಸಿದ್ದರು. ಉತ್ತರ ಕನ್ನಡದಿಂದ 4 - NCC ವಿದ್ಯಾರ್ಥಿಗಳಲ್ಲಿ ಕುಮಾರಿ ಶ್ರೀನಿಕಾ ಅಂಬಿಗ ಒಬ್ಬರಾಗಿದ್ದದ್ದು ವಿಶೇಷ ಮತ್ತು ಹೆಮ್ಮೆಯ ಸಂಗತಿ. ಕರ್ನಾಟಕ ಮತ್ತು ಗೋವಾ ಡೈರೆಕ್ಟ್ ರೇಟ್ ನಿಂದ ಒಟ್ಟು 26 ವಿದ್ಯಾರ್ಥಿಗಳಿದ್ದರು.
 
"ವಿವಿಧ ರಾಜ್ಯಗಳ ಸಂಸ್ಕೃತಿಗಳ ವಿನಿಮಯ ಮತ್ತು ತರಬೇತಿಯ ಮೂಲಕ ಪರಸ್ಪರ ಅರಿವನ್ನು ವೃದ್ಧಿಸುವುದು " ಶಿಬಿರದ ಉದ್ಧೇಶ ಆಗಿದ್ದು ವಿದ್ಯಾರ್ಥಿಗಳಲ್ಲಿ ಶಿಸ್ತು, ದೇಶಭಕ್ತಿ ಮತ್ತು ನಾಯಕತ್ವದ ಗುಣಗಳನ್ನು ಬೆಳೆಸುವ ಗುರಿಯನ್ನು ಹೊಂದಿದೆ. 
 
ಶಿಬಿರದಲ್ಲಿ  ಬೋಟ್ ಪುಲ್ಲಿಂಗ್, ಬೋಟ್ ರಿಗ್ಗಿoಗ್, ಫೈರಿಂಗ್, ಸೆಮಾಫೋರ್, ಡ್ರಿಲ್, ಕಲ್ಚರಲ್ ಸಾಂಗ್  ಮತ್ತು ಡ್ಯಾನ್ಸ್ ಸ್ಪರ್ಧೆಗಳು ನಡೆದಿದ್ದವು.
 
ಎನ್. ಸಿ. ಸಿ.  ಸೇನೆ, ನೌಕಾಪಡೆ ಮತ್ತು ವಾಯುಪಡೆಯನ್ನು ಒಳಗೊಂಡಿದ್ದು, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಮೂಲಭೂತ ಮಿಲಿಟರಿ ತರಬೇತಿ ಮತ್ತು ಸಾಹಸ ಚಟುವಟಿಕೆಗಳನ್ನು ನೀಡುತ್ತದೆ.
 
ಹೊನ್ನಾವರದ  ಮೊಳ್ಕೋಡ್ ಗ್ರಾಮದ ಶ್ರೀಧರ್ ಅಂಬಿಗ ಮತ್ತು ಸುಮಿತ್ರಾ ಅಂಬಿಗ ಇವರ ಪುತ್ರಿಯಾದ ಶ್ರೀನಿಕಾ ಅಂಬಿಗ ಕಾಲೇಜಿನಲ್ಲಿ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿಯೂ ಚುರುಕು ಸ್ವಭಾವದವರಾಗಿದ್ದಾರೆ.

 
ಕರಾಟೆಯಲ್ಲಿಯೂ ಶ್ರೀನಿಕಾ ಚಾಂಪಿಯನ್ !
ಹೊನ್ನಾವರದಲ್ಲಿ ನವೆಂಬರ್- 11-2025 ರಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ 18+ ವಿಭಾಗದಲ್ಲಿ ಕುಮಿತೆಯಲ್ಲಿ ಪ್ರಥಮ ಸ್ಥಾನ, ಮತ್ತು ಕಥಾ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದು ನಿಜಕ್ಕೂ ಶ್ಲಾಘನೀಯ.ಕರಾಟೆ ತರಬೇತುದಾರರಾದ ಪ್ರಭಾಕರ್ ಗೌಡ ಇವರು ಶ್ರೀನಿಕಾಗೆ ತರಬೇತಿ ನೀಡಿದ್ದರು. 
 
ಎನ್. ಸಿ. ಸಿ. ಸಂಬಂಧ ಮತ್ತು ಇತರ ಸಾಧನೆ ಕುರಿತು ಶ್ರೀನಿಕಾ ಅಂಬಿಗ ಇವರನ್ನು  ತರಬೇತಿ ನೀಡಿದ ಲೆಫ್ಟಿನೆಂಟ್ ಸಂತೋಷ್ ಗುಡಿಗಾರ್  (ಅಸೋಸಿಯೇಟ್ ಎನ್. ಸಿ. ಸಿ.ಆಫೀಸರ್) ಕಾಲೇಜಿನ  ಪ್ರೊಫೆಸರ್  ಡಿ. ಎಲ್.ಹೆಬ್ಬಾರ್,
ಪ್ರಾಂಶುಪಾಲರಾದ  ಜಿ. ಎನ್.ಭಟ್  ಶಿಕ್ಷಕರು ಮತ್ತು ಆಡಳಿತ ಮಂಡಳಿಯವರು ಅಭಿನಂದಿಸಿದ್ದಾರೆ.

What's Your Reaction?

Like Like 0
Dislike Dislike 1
Love Love 0
Funny Funny 0
Angry Angry 0
Sad Sad 0
Wow Wow 1