ರಾಜ್ಯೋತ್ಸವ ಸಂಭ್ರಮದಲ್ಲಿ ಸರ್ಕಾರಿ ಅಧಿಕಾರಿಗಳ ವಿರುದ್ಧ ಹರಿಹಾಯ್ದ ಶರದ್ ಗುರ್ಜರ

Nov 2, 2025 - 19:19
 0  17
ರಾಜ್ಯೋತ್ಸವ ಸಂಭ್ರಮದಲ್ಲಿ ಸರ್ಕಾರಿ ಅಧಿಕಾರಿಗಳ ವಿರುದ್ಧ ಹರಿಹಾಯ್ದ ಶರದ್ ಗುರ್ಜರ

ಆಪ್ತ ನ್ಯೂಸ್ ಜೋಯಿಡಾ:

ತಾಲೂಕಿನ ರಾಮನಗರದಲ್ಲಿ ಸಂಭ್ರಮ ಸಡಗರ ಗಳ ನಡುವೆ 70ನೇ ಕನ್ನಡ ರಾಜ್ಯೋತ್ಸವವನ್ನು ಎಲ್ಲ ಭಾಷಿಕರು ಸೇರಿ ಆಚರಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಕಾರ್ಯಕ್ರಮ ದಲ್ಲಿ ಬಾಗವಹಿಸಿ ಮಾತನಾಡಿದ  ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಶರದ್ ಗುರ್ಜರ ಇಂದು ರಾಜ್ಯೋತ್ಸವದಲ್ಲಿ ಬಾಗವಹಿಸಿ ಸಂಭ್ರಮ ಪಡುವ ವೇಳೆಯಲ್ಲಿ ಸರಕಾರದ ಸಂಬಳ ಪಡೆಯುವ ಸರಕಾರಿ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಕಾಣುತ್ತಿಲ್ಲ ಅಲ್ಲದೇ ಕೆಲವು ಶಿಕ್ಷಕರು ಕಾರ್ಯಕ್ರಮ ಮುಗಿಯುವ ಮೊದಲೇ ಜಾಗಕಾಲಿ ಮಾಡುತ್ತಿರುವುದು ಬೇಸರದ ಸಂಗತಿ ಪ್ರತಿ ತಿಂಗಳೂ ಲಕ್ಷದವರೆಗೆ ಸಂಬಳ ಪಡೆಯುತ್ತಿದ್ದರೂ ರಾಜ್ಯದ ನುಡಿ ಹಬ್ಬಕ್ಕೆ ವರ್ಷದಲ್ಲಿಒಂದು ದಿನ ಸೇವೆ ಮಾಡಲು ಮನಸ್ಸು ಇಲ್ಲದ ಈ ಅಧಿಕಾರಿ ಗಳಿಂದ ಜನ ಸೇವೆ ಹೇಗಾದಿತು, ಎಂದು ಜನರು ವಿಚಾರಿಸ ಬೇಕು ಯಾವ ಯಾವ ಸರಕಾರಿ ಅಧಿಕಾರಿಗಳು, ಶಿಕ್ಷಕರು ಇತರ ಸರಕಾರಿ ಸಿಬ್ಬಂದಿಗಳು ಇಂತ ರಾಜ್ಯೋತ್ಸವದ ಸಮಾರಂಭ ದಲ್ಲಿ ಬಾಗವಹಿ ಸದೇ ಅಗೌರವ ತೋರಿಸಿದ್ದಾರೆ ಅವರಿಗೆ ಸಂಬಂಧ ಪಟ್ಟ ಮೇಲುಸ್ತು ವಾರಿ ಸಮೀತಿ ಯವರು ಅಗತ್ಯ ಕ್ರಮ ಜರುಗಿಸಲು ಸರಕಾರಕ್ಕೆ ಸೂಚಿಸಬೇಕು ಎಂದು ಘರ್ಜಿಸಿದರು.

ಜೊತೆಗೆ ಯಾವುದೇ ಊರು ಅಭಿವೃದ್ಧಿ ಆಗಬೇಕಾದರೆ ಅಲ್ಲಿಗೆ ಬರುವ ಸರಕಾರಿ ನೌಕರರು ಆ ಕೆಲಸ ದಲ್ಲಿ ತೋರುವ ಶ್ರದ್ದೆ ಕೂಡ ಕಾರಣ ವಾಗುತ್ತದೆ ಎಂದು ಹೇಳುವ ಮೂಲಕ ಸೇರಿದ ಎರಡು ಸಾವಿರಕ್ಕೂ ಹೆಚ್ಚಿನ ಜನರಿಂದ ಭೇಷ್ ಅನಿಸಿಕೊಂಡರು.

ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶಿವಾಜಿ ಗೋಸಾವಿ ನಾಡಹಬ್ಬದ  ಕುರಿತು ಮಾತನಾಡಿ  ಇಂತ  ಸಮಾರಂಭಕ್ಕೆ ಸಹಕಾರ ನೀಡಿದ ಎಲ್ಲರನ್ನೂ ಸ್ಮರಿಸಿದರು.

ಊರಿನ ಎಲ್ಲ ಗಣ್ಯರೂ ಕಾರ್ಯಕ್ರಮದಲ್ಲಿ ಬಾಗವಹಿಸಿದ್ದಕ್ಕೆ ಅವರನ್ನುಮತ್ತು ವಿವಿಧ  ಸ್ದಬ್ದ ಚಿತ್ರಗಳಲ್ಲಿ ಭಾಗವಹಿಸಿದವರಿಗೆ ಕನ್ನಡ ಹಿರಿಮೆ ಪರಂಪರೆಗಳನ್ನು  ನೃತ್ಯ ಹಾಡುಗಳಿಂದ ತೋರಿಸಿದ ಮುದ್ಫು ಮಕ್ಕಳಿಗೆ ಸಭಿಕರಿಗೆ ಧನ್ಯವಾದ ಹೇಳಿದರು,

ಸೇನೆಯಲ್ಲಿ ಈ ವರ್ಷ ವೀರ ಮರಣ ಹೊಂದಿದ ಶಶಿಕಾಂತ್ ಬಾವಾ ಅವರ ವೇದಿಕೆಯಲ್ಲಿ ಅದ್ದೂರಿಯಾಗಿ ನಡೆದ ಕರ್ನಾಟಕ ರಾಜ್ಯೋತ್ಸವದಲ್ಲಿ ಕನ್ನಡ ನಾಡು ನುಡಿಯ ಬಗ್ಗೆ ವೀರ ಕನ್ನಡಿಗರ ಬಗ್ಗೆ ಗಣ್ಯರು ಮಾತನಾಡಿದರು.

ಕಾರ್ಯಕ್ರಮದ ಮೊದಲು ಸೇರಿದ ಸಾವಿರಾರು ವಿದ್ಯಾರ್ಥಿಗಳಿಗೆ ಉಪಹಾರ ನೀಡಿ ಸತ್ಕರಿಸಲಾಯಿತು. ನಂತರ ನಾಡದೇವಿಯ ಉದ್ದೂರಿ ಮೆರವಣಿಗೆ ನಡೆಸಿ. ಸಭೆಯೊಂದಿಗೆ ರಾಜ್ಯೋತ್ಸವ ಸಂಪನ್ನ ಗೊಂಡಿತು

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0