ಚಪ್ಪಲಿಯಲ್ಲೇ ಅಡಗಿದ್ದ ಹಾವು! ಆಸ್ಪತ್ರೆಗೆ ದಾಖಲಾದ ಮಹಿಳೆ
ಆಪ್ತ ನ್ಯೂಸ್ ಸುಳ್ಯ:
ಚಪ್ಪಲಿ ಧರಿಸುವಾಗ ಎಚ್ಚರ ವಹಿಸಬೇಕು ಅನ್ನೋದಕ್ಕೆ ಈ ಘಟನೆ ಸಾಕ್ಷಿ. ಚಪ್ಪಲಿಯೊಳಗೆ ಅವಿತುಕೊಂಡಿದ್ದ ಹಾವು ಕಚ್ಚಿ ಮಹಿಳೆಯೊಬ್ಬರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಘಟನೆ ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮ ವ್ಯಾಪ್ತಿಯ ಕೊಳ್ಳಾರು ಎಂಬಲ್ಲಿ ನಡೆದಿದೆ.
ವಿನುತಾ ಹಾವು ಕಡಿತಕ್ಕೊಳಗಾದ ಮಹಿಳೆ. ವಿನುತಾ, ಬೆಳಗಿನ ಜಾವ ಮನೆಯ ಹೊರಗೆ ಇರಿಸಲಾಗಿದ್ದ ಚಪ್ಪಲಿಯನ್ನು ಧರಿಸಿದ್ದಾರೆ. ಈ ವೇಳೆ ಚಪ್ಪಲಿಯ ಒಳಗೆ ಅವಿತು ಕೊಂಡಿದ್ದ ಹಾವು ಅವರ ಗಮನಕ್ಕೆ ಬಂದಿರಲಿಲ್ಲ.
ಹಾವು ಕಚ್ಚಿದ ತಕ್ಷಣ ಅವರನ್ನು ಸುಳ್ಯದ ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಇದೀಗ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
What's Your Reaction?
Like
0
Dislike
0
Love
1
Funny
0
Angry
0
Sad
0
Wow
0



