ನಿಯಂತ್ರಣ ತಪ್ಪಿದ ದೋಣಿ: 31 ಮಂದಿ ಮೀನುಗಾರರನ್ನು ರಕ್ಷಿಸಿದ ಕೋಸ್ಟ್ ಗಾರ್ಡ್

Oct 26, 2025 - 17:33
 0  3
ನಿಯಂತ್ರಣ ತಪ್ಪಿದ ದೋಣಿ: 31 ಮಂದಿ ಮೀನುಗಾರರನ್ನು ರಕ್ಷಿಸಿದ ಕೋಸ್ಟ್ ಗಾರ್ಡ್

ಆಪ್ತ ನ್ಯೂಸ್ ಮಂಗಳೂರು:
ಸ್ಟಿಯರಿಂಗ್ ಗೇರ್ ದೋಷದಿಂದಾಗಿ ನಿಯಂತ್ರಣ ತಪ್ಪಿದ್ದ ದೋಣಿಯಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ 31 ಮಂದಿ ಮೀನುಗಾರರನ್ನು ಕೋಸ್ಟ್ ಗಾರ್ಡ್ ಕಾರ್ಯಾಚರಣೆ ನಡೆಸಿ ರಕ್ಷಣೆ ನಡೆಸಿದೆ.
ಗೋವಾ ಮೂಲದ ಐಎಫ್‌ಬಿ ಸಂತ್‌ ಆಂಟನ್-I ಮೀನುಗಾರಿಕಾ ದೋಣಿ ಮಂಗಳೂರಿನ ಕರಾವಳಿಯಿಂದ ಸುಮಾರು 100 ನಾಟಿಕಲ್ ಮೈಲು (ಸುಮಾರು 185 ಕಿ.ಮೀ) ದೂರದ ಸಮುದ್ರದಲ್ಲಿ 11 ದಿನಗಳಿಂದ ತೇಲಾಡುತ್ತಿತ್ತು.
ಪ್ರತಿಕೂಲ ಹವಾಮಾನ ಪರಿಸ್ಥಿತಿಯ ಮಧ್ಯೆಯೂ, ಐಸಿಜಿಎಸ್‌ ಕಸ್ತೂರ್ಬಾ ಗಾಂಧಿ ನೌಕೆ, ಕೊಚ್ಚಿಯಿಂದ ಕರಾವಳಿ ರಕ್ಷಕ ದಳದ ಡೊರ್ನಿಯರ್ ವಿಮಾನ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಸಿದೆ.
ಅ.25ರಂದು ಕರಾವಳಿ ರಕ್ಷಕ ದಳದ ಸಿಬಂದಿಗಳು ತಾಂತ್ರಿಕ ಮತ್ತು ಲಾಜಿಸ್ಟಿಕ್ ನೆರವು ನೀಡಿದ್ದಾರೆ. ಸ್ಟೀರಿಂಗ್ ದೋಷ ಸರಿಪಡಿಸಿ,ಹೊನ್ನಾವರ ಮೀನುಗಾರಿಕಾ ಬಂದರಿಗೆ ಎಳೆದು ತರುವಲ್ಲಿ ಯಶಸ್ವಿಯಾಗಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0