ಮಹಿಳೆಗೆ ಕತ್ತಿಯಿಂದ ಇರಿತ: ಪ್ರಕರಣ ದಾಖಲು
ಆಪ್ತ ನ್ಯೂಸ್ ಮೂಡುಬಿದಿರೆ:
ಪಾಲಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ವರ್ಣಬೆಟ್ಟುವಿನಲ್ಲಿ ಯುವಕನೋರ್ವ ಮಹಿಳೆಗೆ ಕತ್ತಿಯಿಂದ ಇರಿದ ಪರಿಣಾಮವಾಗಿ ಮಹಿಳೆ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಶನಿವಾರ ನಡೆದಿದೆ.
ವರ್ಣಬೆಟ್ಟುವಿನ ಕೆರೆಕೋಡಿ ನಿವಾಸಿ ನವೀನ್ ಅವರ ಪತ್ನಿ ಸಂಜೀವಿ (ನಯನಾ ನಾಯ್ಕ್) ಇರಿತಕ್ಕೊಳಗಾದ ಎಂದು ಮಹಿಳೆ ಎಂದು ಗುರುತಿಸಲಾಗಿದ್ದು ಅವರ ತಲೆ, ಕೈ ಮತ್ತು ಕಾಲುಗಳಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ.
ರಾಮ್ ಮೋಹನ ನಗರ ನಿವಾಸಿ ರಾಜೇಶ್ ನಾಯ್ಕ್ ಎಂಬ ಯುವಕ ಕೃತ್ಯ ಎಸಗಿದ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ನಡೆದ ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ. ಅವರು ಆರೋಪಿ ರಾಜೇಶ್ ನಾಯ್ಕ್‌ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
1



