ನವಂಬರ್ 01ರಂದು ರಾಣಿ ಅಬ್ಬಕ್ಕ ಪ್ರತಿಮೆ ಲೋಕಾರ್ಪಣೆ
ಆಪ್ತ ನ್ಯೂಸ್ ಮೂಡುಬಿದ್ರೆ:
ಬೆದ್ರದ ಮಣ್ಣಿನ ಮಗಳು, ಉಳ್ಳಾಲದ ರಾಣಿ ಅಬ್ಬಕ್ಕ ವಸಾಹತುಶಾಹಿಗಳ ವಿರುದ್ದ ಹೋರಾಡಿದ ತುಳುನಾಡಿನ ಧೀರ ಮಹಿಳೆ. ದಿಟ್ಟತನದ ಪ್ರತೀಕವಾದ ರಾಣಿ ಅಬ್ಬಕ್ಕ ಮೂಲತಃ ಬೆದ್ರದ ಮಣ್ಣಿನವಳು ಎಂಬುದು ಮೂಡುಬಿದ್ರೆಯ ಜನತೆಗೆ ಒಂದು ಹೆಮ್ಮೆ. ಈ ನಿಟ್ಟಿನಲ್ಲಿ ಬೆದ್ರದ ಜವನೆರ್ ಬೆದ್ರ ಫೌಂಡೇಶನ್(ರಿ) ವೀರ ರಾಣಿ ಅಬ್ಬಕ್ಕ'ಳಿಗೆ ಬೆದ್ರದ ಮಣ್ಣಿನಲ್ಲಿ ಗೌರವ ಸಲ್ಲಿಸಬೇಕು ಎಂಬ ನಿಟ್ಟಿನಲ್ಲಿ ಹಲವಾರು ರೀತಿಯಲ್ಲಿ ಕಾರ್ಯಕ್ರಮ, ಪತ್ರ ಚಳುವಳಿಗಳನ್ನು ಆರಂಭಿಸಿ ಮೂಡುಬಿದ್ರೆಯಲ್ಲಿ ಅಬ್ಬಕ್ಕ'ಳ ಪ್ರತಿಮೆಯನ್ನು ನಿರ್ಮಾಣ ಮಾಡುವಲ್ಲಿ ಯಶಸ್ವಿಯಾಗಿತ್ತು. ಸದ್ಯ ಈ ಹಿಂದೆ ನಿರ್ಮಿಸಿದ ಪ್ರತಿಮೆಯ ಬದಲಾಗಿ ಹೊಸ ಹಾಗೂ ಹಿರಿದಾದ ಪ್ರತಿಮೆಯನ್ನು ಚೌಟರ ಅರಮನೆಯ ಮುಂಭಾಗದಲ್ಲಿ ನಿರ್ಮಿಸಲು ಮುಂದಾಗಿತ್ತು, ಈಗಾಗಲೇ ಅದರ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು ಕನ್ನಡ ರಾಜ್ಯೋತ್ಸವದ ಶುಭದಿನವಾದ ನವಂಬರ್ ೦೧ ರಂದು ಅಬ್ಬಕ್ಕ ಕಿರು ಉದ್ಯಾನವನದಲ್ಲಿ ನಿರ್ಮಿಸಿರುವ ನೂತನ ಪ್ರತಿಮೆಯನ್ನು ಲೋಕಾರ್ಪಣೆಗೊಳಿಸಲು ಸಜ್ಜಾಗಿದೆ
ನವಂಬರ್ ೦೧ ರಂದು ಜಿಲ್ಲಾ ಉಸ್ತುವಾರಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರಾಗಿರುವ ದಿನೇಶ್ ಗುಂಡೂರಾವ್ ಅವರು ಗಣ್ಯರ ಹಾಗೂ ಸ್ವಾಮಿಜಿಗಳ ಸಮ್ಮುಖದಲ್ಲಿ ಈ ಪ್ರತಿಮೆಯನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಈ ವಿಶೇಷ ಕಾರ್ಯಕ್ರಮದಲ್ಲಿ ಡಾ ಸ್ವಸ್ತೀ ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಚಾರ್ಯವರ್ಯ ಮಹಾಸ್ವಾಮೀಜಿ ಜೈನ ಮಠ ಮೂಡುಬಿದ್ರಿ, ಕುಲದೀಪ್ ಎಂ, ಚೌಟರ ಅರಮನೆ, ಅನುವಂಶಿಕ ಆಡಳಿತ ಮೊಕೇಸ್ತರರು ಶ್ರೀ ಕ್ಷೇತ್ರ ಪುತ್ತಿಗೆ ಹಾಗೂ ಮತ್ತಿತರ ಗಣ್ಯರು ಭಾಗಿಯಾಗಲಿದ್ದಾರೆ ಎಂದು ಜವನೆರ್ ಬೆದ್ರ ಫೌಂಡೇಶನ್'ನ ಪ್ರಮುಖರು ತಿಳಿಸಿದ್ದಾರೆ. ಈ ಮೂಲಕ ಚೌಟ ಮನೆತನದ ಒರ್ವ ಧೀರ ಮಹಿಳೆಗೆ ಮತ್ತೊಂದು ಗೌರವ ಸಲ್ಲಿಸಲು ಸಜ್ಜಾಗಿದೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



