ಆಪ್ತ ನ್ಯೂಸ್ ಶಿರಸಿ:
ಶಿರಸಿ ತಾಲೂಕಿನ ಸುಧಾಪುರ ಕ್ಷೇತ್ರದ ಸೋಂದಾ ಜಾಗೃತ ವೇದಿಕೆಗೆ ಇಂದಿರಾ ಪ್ರಿಯದರ್ಶಿನಿ ಪರಿಸರ ಪ್ರಶಸ್ತಿಯನ್ನುಹುಬ್ಬಳ್ಳಿ ನೆಹರು ಮೈದಾನದಲ್ಲಿ ಪ್ರಧಾನ ಮಾಡಲಾಯಿತು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಯಶಸ್ವಿಯಾಗಿ ೫೦ ವರ್ಷಗಳನ್ನು ಪೂರೈಸಿದ ಹಿನ್ನಲೆಯಲ್ಲಿ ಮಂಡಳಿಯ ಸುವರ್ಣ ಮಹೋತ್ಸವದ ಸವಿ ನೆನಪಿಗೆ ಈ ಪ್ರಶಸ್ತಿ ನೀಡಲಾಗಿದ್ದು. ಉತ್ತರ ಕನ್ನಡ ಜಿಲ್ಲೆಯಲ್ಲಿ ಪರಿಸರ ಸಂರಕ್ಷಣೆ ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಿದ ಬಗ್ಗೆ ಸಂಸ್ಥೆಯನ್ನು ಗುರುತಿಸಿ ಪ್ರಶಸ್ತಿ ನೀಡಲಾಗಿದೆ.
ಧಾರವಾಡ-ಗದಗ-ಉತ್ತರಕನ್ನಡ ಜಿಲ್ಲೆಗಳನ್ನು ಕೂಡಿಸಿ ಒಂದೇ ವೇದಿಕೆಯಲ್ಲಿ ೩ ಜಿಲ್ಲೆಗಳ ಪ್ರಶಸ್ತಿ ನೀಡಲಾಗಿದೆ.
೧೯೯೫ರಲ್ಲಿ ಶ್ರೀಮದ್ ಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ ಗಂಗಾಧರೇAದ್ರ ಸರಸ್ವತಿ ಮಹಾಸ್ವಾಮಿಗಳು ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ ಇವರ ಗೌರವಾಧ್ಯಕ್ಷತೆಯಲ್ಲಿ ಪ್ರಾರಂಭವಾದ ಸಂಸ್ಥೆ, ಐತಿಹಾಸಿಕ ಗುಡಿ-ಗೋಪುರಗಳ ಸಂರಕ್ಷಣೆಯೊAದಿಗೆ ಪರಿಸರ ಉಳಿವಿಗೆ ಜಲ ಮೂಲಗಳ ರಕ್ಷಣೆ ಮಾಡುತ್ತಿದೆ.
*ಸುಧಾಪುರ ಕ್ಷೇತ್ರದಲ್ಲಿಯ ಎರಡು ಬೃಹತ್ ದೇವಾಲಯಗಳಾದ ಶ್ರೀ ಶಂಕರ ನಾರಾಯಣ ಹಳೆಯೂರು ಮತ್ತು ಶ್ರೀ ವೆಂಕಟರಮಣ ದೇವಳ ಮುತ್ತಿನಕೆರೆ ಇವುಗಳ ಸಂಪೂರ್ಣ ಜೀರ್ಣೊದ್ದಾರದೊಂದಿಗೆ ಉಳಿದ ಐದು ದೇವಾಲಯಗಳ ರಕ್ಷಣೆಯೊಂದಿಗೆ ಸ್ವಚ್ಚತೆಯನ್ನು ಸ್ಥಳೀಯರ ಸಹಕಾರದಿಂದ ನಿಯಮಿತವಾಗಿ ಮಾಡಲಾಗುತ್ತಿದೆ.
*ಇಲ್ಲಿಯ ಬೃಹತ್ ಮುಂಡಿಗೆ ಕೆರೆಯನ್ನು ಪಕ್ಷಿಧಾಮ ಎಂದು ಘೋಷಣೆ ಮಾಡಿಸಿ ಅಳಿವಿನಂಚಿನಲ್ಲಿರುವ ಮುಂಡಿಗೆ ಸಸ್ಯಗಳ ಸಂರಕ್ಷಣೆ ಮಾಡಲಾಗಿದೆ. ಅಲ್ಲದೇ ಪಕ್ಷಿಗಳ ಸಂತಾನಾಭಿವೃದ್ದಿ ಸ್ಥಾನವನ್ನು ಉಳಿಸುವಲ್ಲಿ ಸತತ ಪ್ರಯತ್ನ ಮಾಡಿದ್ದೇವೆ.
*ಶಾಲಾ ಮಕ್ಕಳಿಗೆ ಪಕ್ಷಿ ವೀಕ್ಷಣೆಯೊಂದಿಗೆ ಪರಿಸರ ಪ್ರಜ್ಞೆ ಬೆಳೆಸುತ್ತಿದ್ದೇವೆ.
*ಜಲ ಮೂಲಗಳ ರಕ್ಷಣೆ ಬೃಹತ್ ಕೆರೆಗಳಲ್ಲೊಂದಾದ ಮುತ್ತಿನಕೆರೆಯನ್ನು ೨೦೦೯ರಲ್ಲಿ ಹೂಳೆತ್ತಿಸಲಾಗಿದ್ದು ೨೦೨೨ ರಲ್ಲಿ ಹುಳಸೆಹೊಂಡದ ಕೆರೆಯ ಏರಿಯನ್ನು ಭಾಗಶಃ ಕಲ್ಲು ಚಪ್ಪಡಿ ಅಳವಡಿಸಿ ವ್ಯವಸ್ಥೆ ಮಾಡಲಾಗಿದೆ ಹಾಗೆಯೇ ೨೦೨೪ ರಲ್ಲಿ ಹಳೇಯೂರು ಶಂಕರ ನಾರಾಯಣ ದೇವಳದ ಕಲ್ಯಾಣಿ ರಕ್ಷಣೆ ಕಾರ್ಯ ಪ್ರಾರಂಭಿಸಿದ್ದೇವೆ.
*ಕೃಷಿ ಪರಿಸರ ಉಳಿಸುವಲ್ಲಿ ಮಕ್ಕಳಿಗೆ, ಯುವಕರು-ಯುವತಿಯರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಜಾಗೃತಿ ಮೂಡಿಸುತ್ತಿದ್ದೇವೆ.
*ಮುಂಡಿಕೆ ಕೆರೆ ಪಕ್ಷಿಧಾಮದ ಪರಿಸರದಲ್ಲಿ ನವೆಂಬರ್ ತಿಂಗಳಲ್ಲಿ ಆಮೆಗಳು ಮೊಟ್ಟೆ ಇಡುವಾಗ ಅವುಗಳ ರಕ್ಷಣೆ ನೀಡುವ ಕಾರ್ಯ ಮಾಡುತ್ತಿದ್ದೇವೆ.
*ಪ್ರತಿನಿತ್ಯ ರೈತರಿಗೆ ಹವಾ ಮೂನ್ಸೂಚನೆಯನ್ನು ೨೦೧೫ ರಿಂದಾ ದೈನಂದಿನ ಮಳೆ ಮಾಹಿತಿಯನ್ನು ನಿಖರವಾಗಿ ನೀಡಲಾಗುತ್ತಿದೆ.
*ಸೋಂದಾ ಗ್ರಾಮಪಂಚಾಯತ್‌ದ ಜೀವ ವೈವಿದ್ಯತಾ ಮಂಡಳಿಯಲ್ಲಿ ವೇದಿಕೆಯ ಸದಸ್ಯರು ಸಕ್ರಿಯವಾಗಿ ಪಾಲ್ಗೊಂಡು ಅಗತ್ಯ ಮಾರ್ಗದರ್ಶನ ಮಾಡುತ್ತಿದ್ದಾರೆ.
*ಸುಧಾಪುರ ಕ್ಷೇತ್ರದ ಸರ್ವತೋಮುಖ ಅಭಿವೃದ್ದಿಯಲ್ಲಿ ವೇದಿಕೆಯ ಸಹಭಾಗಿತ್ವವನ್ನು ಗಮನಿಸಿ ಈ ಪ್ರಶಸ್ತಿಯನ್ನು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಶ್ರೀ ಪಿ.ಎಂ ನರೇಂದ್ರಸ್ವಾಮಿಯವರು ಹಾಗೂ ಯಲ್ಲಾಪುರ-ಮುಂಡಗೋಡ ಶಾಸಕ ಶ್ರೀ ಶಿವರಾಮ ಹೆಬ್ಬಾರರು ಕೂಡಿ ಪ್ರಶಸ್ತಿ ಪ್ರಧಾನ ಮಾಡಿದ್ದು, ಇದು ೧೦ ಸಾವಿರ ರೂ ಗಳೊಂದಿಗೆ ಪ್ರಶಸ್ತಿ ಫಲಕ ಹಾಗೂ ಅಭಿನಂದನಾ ಪತ್ರ ಹೊಂದಿರುತ್ತದೆ.
ಈ ವೇಳೆಯಲ್ಲಿ ವೇದಿಕೆಯ ಕಾರ್ಯಾಧ್ಯüಕ್ಷ ರತ್ನಾಕರ ಹೆಗಡೆ ಬಾಡಲಕೊಪ್ಪ ಪ್ರಶಸ್ತಿ ಸ್ವೀಕರಿಸಿದ್ದು, ವೇದಿಕೆಯ ಪದಾಧಿಕಾರಿಗಳಾದ, ಕಾರ್ಯದರ್ಶಿ ಶ್ರೀಧರ ಹೆಗಡೆ ಗುಡ್ಡೇಮನೆ, ಕೋಶಾಧ್ಯಕ್ಷ ರಮೇಶ ಶಾಸಿ,್ತç ಸ್ವರ್ಣವಲ್ಲೀ ಸದಸ್ಯರಾದ ಮಹಾಬಲೇಶ್ವರ ಹೆಗಡೆ ಬಂಧೀಸರ ಗಂಗಾಧರ ಪರಾಂಜಪೆ ಉಪಸ್ಥಿತರಿದ್ದರು.