ಶಿರಸಿಯಲ್ಲಿ ‘ವಿಶೇಷ ಯುವ ಸಂಗೀತೋತ್ಸವ’
ಆಪ್ತ ನ್ಯೂಸ್ ಶಿರಸಿ:
ಬೆಂಗಳೂರಿನ ಸಪ್ತಕ ಸಂಸ್ಥೆಯಿಂದ ಅಪರೂಪದ ವಿಶೇಷ ಯುವ ಸಂಗೀತೋತ್ಸವವನ್ನು ಮಾರ್ಚ್ 15ರಂದು ಸಂಜೆ 4 ಗಂಟೆಗೆ ನಗರದ ರಂಗಧಾಮದ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕ ಜಿ.ಎಸ್.ಹೆಗಡೆ ತಿಳಿಸಿದ್ದಾರೆ.
ಈ ಕುರಿತು ಪ್ರಕಟನೆ ನೀಡಿರುವ ಅವರು, ಅಂದಿನ ಕಾರ್ಯಕ್ರಮದಲ್ಲಿ ಬೆಂಗಳೂರಿನ ಯುವ ಗಾಯಕ ಅನಿರುದ್ಧ ಐತಾಳ್ ಗಾಯನ ಕಾರ್ಯಕ್ರಮ ನೀಡಲಿದ್ದಾರೆ. ಅವರಿಗೆ ತಬಲಾದಲ್ಲಿ ಯೋಗೀಶ್ ಭಟ್ಟ ಹಾಗೂ ಹಾರ್ಮೋನಿಯಂನಲ್ಲಿ ಭರತ್ ಹೆಗಡೆ ಸಂಗತ ನೀಡಲಿದ್ದಾರೆ.
ಬಳಿಕ ಮುಂಬಯಿಯ ಖ್ಯಾತ ತಬಲಾ ಕಲಾವಿದ ಯಶವಂತ ವೈಷ್ಣವ್ ಅವರ ತಬಲಾ ಸೋಲೋ ಕಾರ್ಯಕ್ರಮ ನಡೆಯಲಿದ್ದು, ಅವರಿಗೆ ಹಾರ್ಮೋನಿಯಂ ಲೆಹರಾದಲ್ಲಿ ವರ್ಗಾಸರದ ಅಜಯ ಹೆಗಡೆ ಸಹಕಾರ ನೀಡಲಿದ್ದಾರೆ.
ಬೆಂಗಳೂರಿನ ಸಿದ್ದಾರ್ಥ ಬೆಳ್ಮಣ್ಣು ಗಾಯನ ಕಾರ್ಯಕ್ರಮ ಕೂಡ ನಡೆಯಲಿದ್ದು, ಅವರಿಗೆ ತಬಲಾದಲ್ಲಿ ಯೋಗೀಶ್ ಭಟ್ಟ ಹಾಗೂ ಹಾರ್ಮೋನಿಯಂನಲ್ಲಿ ಭರತ್ ಹೆಗಡೆ ಸಾತ್ ನೀಡಲಿದ್ದಾರೆ.
ಸಂಗೀತಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಸಪ್ತಕ ಸಂಸ್ಥೆಯ ಜಿ.ಎಸ್. ಹೆಗಡೆ ಮನವಿ ಮಾಡಿದ್ದಾರೆ.
*****
ಸಪ್ತಕ ಸಂಸ್ಥೆ ಪ್ರಾರಂಭದಿಂದಲೂ ವಿಭಿನ್ನ, ವಿಶೇಷ, ವಿಷಯಾತ್ಮಕ ಕಾರ್ಯಕ್ರಮ ನೀಡುವದರಲ್ಲಿ ಮುಂದು. ಈ ಯುವ ಸಂಗೀತೋತ್ಸವ ಅದಕ್ಕೆ ಸಾಕ್ಷಿಯಾಗಲಿದೆ.
-ಜಿ.ಎಸ್. ಹೆಗಡೆ, ಸಪ್ತಕ
What's Your Reaction?
Like
0
Dislike
0
Love
0
Funny
0
Angry
0
Sad
0
Wow
0

