ಹಳಿಯಾಳ ಮಾರ್ಕೆಟಿಂಗ್ ಸೊಸೈಟಿ ಅಧ್ಯಕ್ಷರಾಗಿ ಶ್ರೀನಿವಾಸ ಘೋಟ್ನೇಕರ ಅವಿರೋಧ ಆಯ್ಕೆ
ಪ್ರತಿಷ್ಠಿತ ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘ ( ಮಾರ್ಕೆಟಿಂಗ್ ಸೊಸೈಟಿಯ ) ನೂತನ ಅಧ್ಯಕ್ಷರಾಗಿ ಹಳಿಯಾಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಯುವ ನಾಯಕರಾದ ಶ್ರೀನಿವಾಸ ಘೋಟ್ನೇಕರ ಹಾಗೂ ಉಪಾಧ್ಯಕ್ಷರಾಗಿ ಹರಿದಾಸ ಬೋಬ್ಲಿ ಅವಿರೋಧವಾಗಿ ಆಯ್ಕೆಯಾದರು.

ಆಪ್ತ ನ್ಯೂಸ್ ಹಳಿಯಾಳ:
ಇಲ್ಲಿನ ಪ್ರತಿಷ್ಠಿತ ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘ ( ಮಾರ್ಕೆಟಿಂಗ್ ಸೊಸೈಟಿಯ ) ನೂತನ ಅಧ್ಯಕ್ಷರಾಗಿ ಹಳಿಯಾಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಯುವ ನಾಯಕರಾದ ಶ್ರೀನಿವಾಸ ಘೋಟ್ನೇಕರ ಹಾಗೂ ಉಪಾಧ್ಯಕ್ಷರಾಗಿ ಹರಿದಾಸ ಬೋಬ್ಲಿ ಅವಿರೋಧವಾಗಿ ಆಯ್ಕೆಯಾದರು.
ಸಂಘದ ಕಛೇರಿಯಲ್ಲಿ ನಡೆದ ಅಧ್ಯಕ್ಷ - ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆಯಲ್ಲಿ ಸರ್ವಾನುಮತದಿಂದ ಹಳಿಯಾಳ ಸಾಮಾನ್ಯ ಕ್ಷೇತ್ರದಿಂದ ಅವಿರೋಧವಾಗಿ ಆಯ್ಕೆಯಾಗಿದ್ದ ಶ್ರೀನಿವಾಸ ಘೋಟ್ನೇಕರ ಅವರನ್ನು ನೂತನ ಅಧ್ಯಕ್ಷರನ್ನಾಗಿ ಹಾಗೂ ಯಡೋಗಾ ಸೇವಾ ಸಹಕಾರಿ ಸಂಘದಿಂದ ಮಾರ್ಕೆಟಿಂಗ್ ಸೊಸೈಟಿಯ ನಿರ್ದೇಶಕರಾಗಿ ಆಯ್ಕೆಯಾಗಿದ್ದ ಹರಿದಾಸ ಬೋಬ್ಲಿ ಅವರನ್ನು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಚುನಾವಣಾಧಿಕಾರಿಗಳು ಅಧಿಕೃತವಾಗಿ ಘೋಷಿಸಿದರು.
ಈ ಪ್ರತಿಷ್ಠಿತ ಮಾರ್ಕೆಟಿಂಗ್ ಸೊಸೈಟಿಯನ್ನು ಬೆಳೆಸುವ ಜವಾಬ್ದಾರಿ ನೂತನವಾಗಿ ಆಯ್ಕೆಯಾದ ಅಧ್ಯಕ್ಷ - ಉಪಾಧ್ಯಕ್ಷ ಹಾಗೂ ಎಲ್ಲ ನಿರ್ದೇಶಕರ ಮೇಲಿದ್ದು. ಮುಂದೆ ಯಾರು ಆರೋಪ ಮಾಡದಂತೆ ಜವಾಬ್ದಾರಿಯುತವಾಗಿ ಸೊಸೈಟಿಯ ಪ್ರಗತಿಗಾಗಿ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಿ ಅಲ್ಲದೆ ಹಿರಿಯರು ಸ್ಥಾಪಿಸಿದ ಸಂಸ್ಥೆಯನ್ನು ಉಳಿಸಿ ಬೆಳೆಸುವ ಕಾರ್ಯ ಪಕ್ಷಾತೀತವಾಗಿ ಪ್ರಾಮಾಣಿಕತೆಯಿಂದ ಎಲ್ಲ ನಿರ್ದೇಶಕರು ಹಾಗೂ ರೈತರ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿ ಎಂದು ಮಾಜಿ ವಿ.ಪ ಸದಸ್ಯರು, ಬಿಜೆಪಿ ನಾಯಕರಾದ ಎಸ್.ಎಲ್.ಘೋಟ್ನೇಕರ ಹಾಗೂ ಮಾಜಿ ಶಾಸಕರಾದಸುನೀಲ್ ಹೆಗಡೆ ಅವರು ಸಂದೇಶ ನೀಡಿ ಶುಭ ಹಾರೈಸಿ, ಅಭಿನಂದಿಸಿದರು.
ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ಶ್ರೀನಿವಾಸ ಘೋಟ್ನೇಕರ ಅವರು ಮಾತನಾಡಿ ನಮ್ಮ ತಂದೆ, ಮಾಜಿ ವಿ.ಪ ಸದಸ್ಯರು, ಕೆ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕರಾದ ಎಸ್.ಎಲ್.ಘೋಟ್ನೇಕರ ಹಾಗೂ ಮಾಜಿ ಶಾಸಕರಾದ ಸುನೀಲ್ ಹೆಗಡೆ ಅವರ ಮಾರ್ಗದರ್ಶನದಲ್ಲಿ ಎಲ್ಲ ನಿರ್ದೇಶಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸೊಸೈಟಿಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವುದಾಗಿ ಭರವಸೆ ನೀಡಿ, ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಹಾಗೂ ಮಂಡಲ ಪದಾಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು, ಮುಂತಾದ ಸೊಸೈಟಿಗಳ ನಿರ್ದೇಶಕರು, ಪಕ್ಷದ ಮುಖಂಡರು, ಕಾರ್ಯಕರ್ತರು, ರೈತ ಬಾಂಧವರು ಹಾಗೂ ಸೊಸೈಟಿಯ ಸಿಬ್ಬಂದಿ ವರ್ಗದವರು ಇದ್ದರು.
What's Your Reaction?






