ಪಾಳಾದಲ್ಲಿ ಉರಗ ರಕ್ಷಕ ಸುನೀಲ್ ಹೊನ್ನಾವರರಿಗೆ ಸನ್ಮಾನ

ಆಪ್ತ ನ್ಯೂಸ್ ಮುಂಡಗೋಡ:
ಜಿಲ್ಲೆಯ ಪಾಳಾದ ಸಹಕಾರಿ (ಸೊಸೈಟಿ) ಸಂಘದ ವಾರ್ಷಿಕ ಮಹಾ ಸಭೆಯ ಸಂಘದ ಅಧ್ಯಕ್ಷ ಮಂಜುನಾಥ ಅಂದಣ್ಣನವರ ಅಧ್ಯಕ್ಷತೆಯಲ್ಲಿ ಇತ್ತಿಚಿಗೆ ನಡೆಯಿತು. ಈ ಸಂಘವು ೩೧-೩-೨೦೨೫ ಕ್ಕೆ ೧೬,೨೬,೫೨೪/- ರೂಪಾಯಿಗಳನ್ನು ಲಾಭಗಳಿಸಿದೆ ಎಂದು ಸೊಸೈಟಿಯ ಮುಖ್ಯ ಕರ‍್ಯನಿರ್ವಾಹಕ ಎಸ್ ಎಮ್ ಗೂತೆನವರ ಸಭೆಯಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಪಾಳಾ ಉಪವಲಯ ಅರಣ್ಯ ಅಧಿಕಾರಿ ಸುನಿಲ್ ಹೊನ್ನಾವರ ಮತ್ತು ದಂಪತಿಗಳು, ಅರಣ್ಯ ರಕ್ಷಕ ಮುತ್ತುರಾಜ ಹಳ್ಳಿಯವರನ್ನು ಸೊಸೈಟಿ ವತಿಯಿಂದ ಸನ್ಮಾನಿಸಿ ಇವರುಗಳು ಹಾವುಗಳ ಪ್ರಾಣವನ್ನು ರಕ್ಷಿಸುವುದರಿಂದ ಈ ಭಾಗದ ರೈತರ ಹೊಲಗದ್ದೆಗಳಲ್ಲಿ ಹಾವುಗಳ ಭಯವಿಲ್ಲದೆ ಕೃಷಿ ಚಟುವಟಿಕೆಗಳಲ್ಲಿ ರೈತರು ತೊಡಗಿಕೊಳ್ಳಲು ಸಹಾಯವಾಗಿದೆ, ಇವರ ಈ ಒಳ್ಳೆಯ ನಿಸ್ವಾರ್ಥ ಸೇವೆಯು ರೈತರ ಮೆಚ್ಚುಗೆಗೆ ಕಾರಣವಾಗಿದೆ ಇವರ ಈ ಸೇವೆಯನ್ನು ಗುರುತಿಸಿ ಸರ್ಕಾರವು ಇವರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಲು ಸಂಘದ (ಸೊಸೈಟಿ)ಯ ವಾರ್ಷಿಕ ಮಹಾ ಸಭೆಯಲ್ಲಿ ಠರಾಯಿಸಿ ಸರ್ಕಾರಕ್ಕೆ ಸಲ್ಲಿಸಲು ವಿನಂತಿಸಿದರು.
ಮುತ್ತುರಾಜ ಹಳ್ಳಿಯವರ ಮಾತನಾಡಿ “ಸುನಿಲ್ ಹೊನ್ನಾವರರವರು ಪಾಳಾ ಉಪವಲಯದಲ್ಲಿ ಅರಣ್ಯ ರಕ್ಷಣೆ ಜೊತೆಗೆ ಹಾವುಗಳನ್ನು ಯಾವ ರೀತಿಯಿಂದ ಹಿಡಿದು ರಕ್ಷಣೆ ಮಾಡಬೇಕೆಂಬ ಬಗ್ಗೆ ಮಾರ್ಗದರ್ಶನ ಮತ್ತು ಕಲೆಯನ್ನು ಕಲಿಸಿರುತ್ತಾರೆ” ಎಂದರು.
ಈ ಸಂದರ್ಭದಲ್ಲಿ ಸೊಸೈಟಿ ಉಪಾಧ್ಯಕ್ಷ ಮದರಸಾಬ ಮನೀಯಾರ್ ನಿರ್ದೇಶಕರುಗಳಾದ ಸುರೇಶ ಸುಬಾಂಜಿ, ಅಮಾನುಲ್ಲಾ ಎಮ್ ಮೈದು ಹಾಗೂ ಸಂಘದ ಎಲ್ಲ ನಿರ್ದೇಶಕರುಗಳು ಊರಿನ ಹಿರಿಯರುಗಳಾದ ವೀರಭದ್ರ ಗೌಡ ಪಾಟೀಲ್, ಬಸವನಗೌಡ್ರು ಮತ್ತು ಪಾಳಾ/ಓಣಿಕೇರಿ ಗ್ರಾ.ಪಂ ವ್ಯಾಪ್ತಿಯ ನೂರಾರು ರೈತರು ಪಾಲ್ಗೊಂಡಿದ್ದರು.
What's Your Reaction?






