ಕಣಜ ಹುಳು ಕಚ್ಚುವ ಮೊದಲು ಕ್ರಮ ಕೈಗೊಳ್ಳಿ

Oct 26, 2025 - 18:45
 0  49
ಕಣಜ ಹುಳು ಕಚ್ಚುವ ಮೊದಲು ಕ್ರಮ ಕೈಗೊಳ್ಳಿ

ಆಪ್ತ ನ್ಯೂಸ್ ದಾಂಡೇಲಿ:
ತಾಲೂಕಿನ ಕೋಗಿಲಬನ್ ಗ್ರಾಮದ ಮನೆಯೊಂದರ ಹಿತ್ತಲಿನಲ್ಲಿ ತೆಂಗಿನ ಮರಕ್ಕೆ ಕಣಜ ಹುಳುಗಳು ಗೂಡು ಕಟ್ಟಿಕೊಂಡಿದ್ದು, ಅಕ್ಕಪದ ಜನರು ಆತಂಕದಲ್ಲಿಯೇ ಕಾಲ ಕಳೆಯುವಂತಾಗಿದೆ.
ಅಪಾಯಕಾರಿ ಗುಣ ಲಕ್ಷಣಗಳನ್ನು ಹೊಂದಿರುವ ಈ ಕಣಜ ಹುಳುಗಳು ದಾಳಿ ಮಾಡಿದರೆ ವ್ಯಕ್ತಿ ಅಸ್ವಸ್ಥನಾಗಬಹುದು, ಇಲ್ಲವೇ ದಾಳಿಗೊಳಗಾದ ವ್ಯಕ್ತಿಯ ಮೃತ್ಯು ಸಂಭವಿಸಲು ಬಹುದಾಗಿದ್ದು ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.
ಇಂತಹ ಅಪಾಯಕಾರಿ ಕಣಜ ಹುಳುಗಳ ಸಮಸ್ಯೆ ನಿವಾರಣೆ ಮಾಡಲು ಗ್ರಾಮ ಪಂಚಾಯತಿ  ವತಿಯಿಂದ ಅರಣ್ಯ ಇಲಾಖೆಯ ವೀರ್ನೋಲಿ ವಿಭಾಗಕ್ಕೆ ಕರೆ ಮಾಡಿ ಸಮಸ್ಯೆ ತಿಳಿಸಿದರೂ ಕೂಡ ಅರಣ್ಯ ಇಲಾಖೆಯ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದು ಗ್ರಾಮದ ನಿವಾಸಿ ಸುಧೀರ್ ಶೆಟ್ಟಿ ಅವರು ಆಕ್ರೋಶ ವ್ಯಕ್ರಪಡಿಸಿದ್ದಾರೆ. 
ಅವಘಡ ಸಂಭವಿಸುವ ಮೊದಲು ವೀರ್ನೋಲಿ ವಿಭಾಗದ ಅರಣ್ಯಾಧಿಕಾರಿಗಳು ಎಚ್ಚೆತ್ತು, ಹುಳುಗಳ ನಿವಾರಣೆಗೆ ಸೂಕ್ತ ಕ್ರಮ ಜರುಗಿಸಬೇಕೆಂದು ಅವರು ಒತ್ತಾಯಿಸಿದ್ದಾರೆ

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0