10 ದಿನಗಳ ಉದ್ಯಮಶೀಲತಾಭಿವೃದ್ಧಿ ತರಬೇತಿ ಕಾರ್ಯಕ್ರಮ
ಆಪ್ತ ನ್ಯೂಸ್ ದಾಂಡೇಲಿ:
ನಗರದ ಸಾಫ್ಟೆಕ್ ಕಂಪ್ಯೂಟರ್ ಶಿಕ್ಷಣ ಸಂಸ್ಥೆ ಹಾಗೂ ಧಾರವಾಡದ ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್) ಮತ್ತು ದಾಂಡೇಲಿಯ ಈಶ್ವರಿ ಫೌಂಡೇಶನ್ ಇವರ ಸಹಯೋಗದಲ್ಲಿ 10 ದಿನಗಳ ಉದ್ಯಮಶೀಲತಾಭಿವೃದ್ಧಿ ತರಬೇತಿ ಕಾರ್ಯಕ್ರಮಕ್ಕೆ ಸಾಫ್ಟೆಕ್ ಶಿಕ್ಷಣ ಸಂಸ್ಥೆಯಯೂನಿಯನ್ ಬಿಲ್ಡಿಂಗ್ ಸಭಾಂಗಣದಲ್ಲಿ ಚಾಲನೆ ನೀಡಲಾಯಿತು.
18 ರಿಂದ 50 ವರ್ಷದೊಳಗಿನ ಮಹಿಳೆಯರು ಮತ್ತು ಪುರುಷರು ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಹೆಚ್ಚಿನ ವಿವರಣೆಗಳಿಗೆ ಸಿಡಾಕ್ ಸಂಸ್ಥೆಯ ಸಾಮಾಜಿಕ ಜಾಲತಾಣಗಳಿಗೆ ಭೇಟಿ ನೀಡಬಹುದಾಗಿದೆ. ಈ ತರಬೇತಿ ಕಾರ್ಯಕ್ರಮವು ನ.೧೦ ರಿಂದ ನ.೨೦ ರವರೆಗೆ ಸಾಫ್ಟೆಕ ಸಂಸ್ಥೆಯ ಭವನದಲ್ಲಿ ನಡೆಯಲಿದೆ ಎಂದು ಸಾಫ್ಟ್ಕೆಕ ಶಿಕ್ಷಣ ಸಂಸ್ಥೆಯ ಸಯ್ಯದ್ ಇಸ್ಮಾಯಿಲ್ ತಂಗಳ ಹೇಳಿದರು.
ಕಾರ್ಯಕ್ರಮ ಉದ್ಘಾಟಕರಾಗಿ ಸಮಾಜ ಸೇವಕ ಗೋವಿಂದ ಪಾರೀಖ್ ಭಾಗವಹಿಸಿ ಶುಭ ಹಾರೈಸಿದರು. ಕಾರವಾರದ ಸಿಡಾಕ್ ಉಪ ನಿರ್ದೇಶಕ ಶಿವಾನಂದ ಎಲಿಗಾರ ಮತ್ತು ಈಶ್ವರಿ ಫೌಂಡೇಷನ್ ಮುಖ್ಯಸ್ತರಾದ ಕಲ್ಪನಾ ಪಾಟೀಲ ಉಪಸ್ಥಿತರಿದ್ದರು. ಶಿವರಾಜ ಕೆಳವಿ ಉದ್ಯಮಶೀಲತಾಭಿವೃದ್ಧಿ ತರಬೇತಿ ಕುರಿತು ಉಪನ್ಯಾಸ ನೀಡಿದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



