ಮೀನು ಮಾರಾಟ ಮಾಡುತ್ತಿದ್ದ ಮಹಿಳೆಯಿಂದ ಹಣ ಕಿತ್ತು ಓಡಿದ ಕಳ್ಳ!!
ಆಪ್ತ ನ್ಯೂಸ್ ಶಿರಸಿ:
ನಗರದ ಹುಸರಿ ರಸ್ತೆಯಲ್ಲಿರುವ ಕಸ್ತೂರಬಾ ನಗರದ ಕ್ರಾಸ್ ಬಳಿ ಮೀನು ಮಾರಾಟ ಮಾಡುತ್ತಿದ್ದ ಮಹಿಳೆಯಿಂದ ಹಣ ಕದ್ದು ಪರಾರಿಯಾದ ಘಟನೆ ನಡೆದಿದೆ.
ಗೀತಾ ಅಂಬಿಗ ಎಂಬುವರು ಮೀನು ಮಾರಾಟ ಮಾಡಿ ಬಂದ ಹಣವನ್ನು ಸಣ್ಣ ಚೀಲದಲ್ಲಿ ಹಾಕಿ ಅದನ್ನು ಸೊಂಟದಲ್ಲಿಟ್ಟುಕೊಂಡಿದ್ದರು. ಅಪರಿಚಿತನೊರ್ವ ಮೀನು ಖರೀದಿಸುವ ನೆಪದಲ್ಲಿ ಅವಳಲ್ಲಿದ್ದ ಹಣ ಕಿತ್ತು ಅಲ್ಲಿಂದ ಪರಾರಿಯಾದನೆಂದು ಹೇಳಲಾಗಿದೆ.
What's Your Reaction?
Like
0
Dislike
1
Love
0
Funny
0
Angry
0
Sad
0
Wow
0



