ಗಾಂಜಾ ಸೇವಿಸಿದ ಇಬ್ಬರು ಯುವಕರ ಬಂಧನ

Dec 15, 2025 - 11:46
 0  53
ಗಾಂಜಾ ಸೇವಿಸಿದ ಇಬ್ಬರು ಯುವಕರ ಬಂಧನ
ಆಪ್ತ ನ್ಯೂಸ್‌ ಶಿರಸಿ:

ಗಾಂಜಾ ಸೇವಿಸಿದ ಬಗ್ಗೆ ವೈದ್ಯಕೀಯ ಪರೀಕ್ಷೆ ದೃಢಪಟ್ಟ ಹಿನ್ನಲೆಯಲ್ಲಿ ಶಿರಸಿ ನಗರ ಪೊಲೀಸರು ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದಾರೆ.
ಶಿರಸಿಯ ರೋಶನ್ ಪ್ರದೀಪ್ ಪಾಲೇಕರ, ರಾಘವೇಂದ್ರ ದಿನೇಶ್ ಮಹೇಂದ್ರಕರ್ ಬಂಧಿತ ಆರೋಪಿಗಳಾಗಿದ್ದಾರೆ. ಶಿರಸಿ ಶಹರದ ಲಿಂಗದಕೋಣ ರಸ್ತೆಯಲ್ಲಿ ಗಾಂಜಾ ಅಮಲು ಪಧಾರ್ಥ ಸೇವನೆ ಮಾಡಿರುವ ಸಂಶಯದ ಮೇಲೆ ವಶಕ್ಕೆ ಪಡೆದು ನಗರದ ಪಂಡಿತ ಸಾರ್ವಜನಿ‌ಕ ಆಸ್ಪತ್ರೆ ಯಲ್ಲಿ ವೈಧ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದ್ದರಿಂದ ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉತ್ತರಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ  ದೀಪನ್ ಎಂ ಎನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಜಿ ಕೃಷ್ಣಮೂರ್ತಿ,ಜಗದೀಶ್ ಎಂ,ಹಾಗೂ ಶಿರಸಿ ಉಪವಿಭಾಗದ ಡಿಎಸ್ಪಿ ಶ್ರೀಮತಿ ಗೀತಾ ಪಾಟೀಲ್ ,ವೃತ್ತ ನಿರೀಕ್ಷಕರಾದ ಶಶಿಕಾಂತ ವರ್ಮಾ ಮಾರ್ಗದರ್ಶನದಲ್ಲಿ ಶಿರಸಿ ‌ನಗರ ಪೊಲೀಸ್ ಠಾಣೆ ಪಿಎಸ್ಐ  ನಾಗಪ್ಪ.ಬಿ , ನಾರಾಯಣ ರಾಠೋಡ್ ರವರ ನೇತೃತ್ವದಲ್ಲಿ ಸಿಬ್ಬಂದಿಗಳಾದ , ಸದ್ದಾಂ ಹುಸೇನ್ ಸಾಬ್, ಹನುಮಂತ ಮಾಕಪುರ, ಚನ್ನಬಸಪ್ಪ ಕ್ಯಾರಕಟ್ಟಿ, ಸುನಿಲ್, ತುಕಾರಾಮ ಬಿ, ನಜೀರ್ , ಪ್ರಶಾಂತ್, ಸುದರ್ಶನ ನಾಯ್ಕ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0