ಚಾಕುವಿನಿಂದ ಇರಿದು ಮಹಿಳೆಯ ಹತ್ಯೆ: ಆರೋಪಿ ರಫೀಕ್ ನಾಪತ್ತೆ: ನಾಳೆ ಯಲ್ಲಾಪುರ ಬಂದ್?
ಆಪ್ತ ನ್ಯೂಸ್ ಯಲ್ಲಾಪುರ:
ಮುಸ್ಲಿಂ ತರುಣನೊಬ್ಬ ಹಿಂದೂ ಮಹಿಳೆಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ ಘಟನೆ ಯಲ್ಲಾಪುರ ಪಟ್ಟಣದ ಕಾಳಮ್ಮನಗರದಲ್ಲಿ ಶನಿವಾರ ಹಾಡುಹಗಲೇ ನಡೆದಿದೆ.
ಕಾಳಮ್ಮನಗರದ ರಂಜಿತಾ ಬನ್ಸೊಡೆ (30) ಕೊ*ಲೆಯಾದ ಮಹಿಳೆ. ಕಾಳಮ್ಮ ನಗರದ ರಫೀಕ್ ಯಳ್ಳೂರ ಎಂಬಾತ ಈಕೆಯ ಕುತ್ತಿಗೆಗೆ ಚಾಕುವಿನಿಂದ ತಿವಿದು ಅಲ್ಲಿಂದ ಪರಾರಿಯಾಗಿದ್ದಾನೆ. ಗಾಯಗೊಂಡು ನರಳುತ್ತಿದ್ದ ಮಹಿಳೆಯನ್ನು ಸ್ಥಳಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಸಾಗಿಸುತ್ತಿರುವ ಸಂದರ್ಭದಲ್ಲಿ ಮಾರ್ಗಮಧ್ಯೆ ಆಕೆ ಉಸಿರುಬಿಟ್ಟಿದ್ದಾಳೆ.
ಈ ದುರ್ಘಟನೆಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲವಾದರೂ ರಫಿಕ್ ಆಕೆಯನ್ನು ಪೀಡಿಸುತ್ತಿದ್ದು ಈಕೆ ಈತನ ವರ್ತನೆಯನ್ನು ತಿರಸ್ಕರಿಸುತ್ತಿದ್ದದುದೇ ಇರಬಹುದೆನ್ನಲಾಗಿದೆ. ಈತ ಈಕೆಗೆ ಪೀಡಿಸುತ್ತಿದ್ದ ಎಂಬುದನ್ನು ಸ್ಥಳಿಯರು ಹೇಳುತ್ತಿದ್ದಾರೆ. ಹಿಂದೂ ಸಮಾಜದ ತಂಡ ಪೋಲಿಸ್ ಠಾಣೆಗೆ ಜಮಾಯಿಸಿ ಮುಸ್ಲಿಂ ಹುಡುಗನನ್ನು ಬಂಧಿಸುವಂತೆ ಆಗ್ರಹಿಸುತ್ತಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು, ಓಡಿಹೋದ ರಫೀಕ್ ಗಾಗಿ ಶೋಧ ನಡೆಸುತ್ತಿದ್ದಾರೆ.
ರಫಿಕ್ ನನ್ನು ಬಂಧಿಸುವರೆಗೂ ಠಾಣೆಯಿಂದ ಹೊರಬೀಳುವುದಿಲ್ಲ ಎಂದು ವಿವಿಧ ಹಿಂದೂ ಸಂಘಟನೆಗಳ ಪ್ರಮುಖರು ಪಟ್ಟುಹಿಡಿದು ಕುಳಿತಿದ್ದಾರೆ. ಎಸ್.ಪಿ ಸ್ಥಳಕ್ಕೆ ಭೇಟಿ ನೀಡಿದ್ದು ಅವರ ಬಳಿಯೇ ಈ ಒತ್ತಾಯವನ್ನು ಮಾಡಿದ್ದಾರೆ. ಕೊಲೆಯಾಗಿ ಎರಡು ಮೂರು ತಾಸು ಆದರೂ ಕೊಲೆಗೆ ಸಂಬಂದಿಸಿದಂತೆ ಆರೋಪಿಯನ್ನು ಬಂಧಿಸಿಲ್ಲ. ತಲೆ ಮರೆಸಿಕೊಂಡಿರುವ ಆತನನ್ನು ಬಂಧಿಸಿ ಅಥವಾ ಆತನ ಕುಟುಂಬದವರನ್ನು ಬಂಧಿಸಿದರೆ ಆತ ಎಲ್ಲಿದ್ದಾನೆಂಬುದು ಹೊರಬೀಳುತ್ತದೆ. ಅವನ ಮನೆಗಾದರೂ ಪೋಲಿಸರು ಭೇಟಿ ನೀಡಿದ್ದಾರಾ ಎಂದು ಕಠುವಾಗಿ ಪ್ರಶ್ನಿಸಿದ್ದಾರೆ.
ಪ್ರಮೋದ ಹೆಗಡೆ, ಪ್ರಸಾದ ಹೆಗಡೆ, ಅನಂತ ಗಾಂವ್ಕಾರ್ ,ರಾಮಕೃಷ್ಣ ಗಿರೀಶ ಭಾಗ್ವತ್ ಸೇರಿದಂತೆ ಹಲವರು ಠಾಣೆಯಲ್ಲಿ ಠಿಕಾಣಿ ಹೂಡಿದ್ದಾರೆ.
ರವಿವಾರ ಯಲ್ಲಾಪುರ ಬಂದ್ ಗೆ ಕರೆ ನೀಡಲು ಹಿಂದೂ ಸಂಘಟನೆಗಳು ನಿರ್ಧರಿಸುತ್ತಿವೆ.
What's Your Reaction?
Like
0
Dislike
0
Love
0
Funny
0
Angry
2
Sad
1
Wow
0



