ಯಲ್ಲಾಪುರ ತಾಲೂಕಿನ ರಸ್ತೆ ಅಭಿವೃದ್ಧಿಗೆ ಅನುದಾನ ಮಂಜೂರು: ಶುರುವಾಯ್ತು ಕ್ರೆಡಿಟ್‌ ವಾರ್

Dec 13, 2025 - 22:40
 0  31
ಯಲ್ಲಾಪುರ ತಾಲೂಕಿನ ರಸ್ತೆ ಅಭಿವೃದ್ಧಿಗೆ ಅನುದಾನ ಮಂಜೂರು: ಶುರುವಾಯ್ತು ಕ್ರೆಡಿಟ್‌ ವಾರ್

ಆಪ್ತ ನ್ಯೂಸ್ ಯಲ್ಲಾಪುರಃ

ನಂದೊಳ್ಳಿ ಅಣಲಗಾರ ಹಾಗೂ ಹಿತ್ಲಕಾರಗದ್ದೆ  ಮಾಗೋಡ ರಸ್ತೆಗೆ ೯.೯ ಕೋಟಿ ರೂ ಅನುಧಾನ ಮಂಜೂರಿಯಾದ ಬಗ್ಗೆ ಗ್ರುಪ್ ಗಳಲ್ಲಿ ಹಾಗೂ ಮಾದ್ಯಮಗಳಲ್ಲಿ ಹರಿದಾಡಿದ ಸುದ್ದಿ ಭಾರೀ ಚರ್ಚೆಯನ್ಬು ಹುಟ್ಟುಹಾಕಿದೆ. ವಿಶೇಷವಾಗಿ ನಂದೊಳ್ಳಿ ಅಣಲಗಾರ್ ಭಾಗದಲ್ಲಿ ಈ ಚರ್ಚೆ ನಡೆಯುತ್ತಿದೆ.‌

ಈ ರಸ್ತೆಗಳೇನೋ ಹದಗೆಡುವುದಕ್ಕೆ ಬಾಕಿ ಇಲ್ಲ. ಜನ ಹೈರಾಣಾಗಿದ್ದಾರೆ. ರಸ್ತೆ ಆಗಲೇ ಬೇಕಿತ್ತು ಎನ್ನುವುದು ಸಾರ್ವಜನಿಕರ ಕೂಗೇ ಆಗಿತ್ತು. ಅಂತೂ ಸರಕಾರದಿಂದ ಮಂಜೂರಿಯ ಸುತ್ತೋಲೆಯೊಂದು‌ ಕೂಡಾ ಹೊರಬಿದ್ದಿದೆ. ಕ್ಷೇತ್ರದ ಶಾಸಕರು ತಮ್ಮ ವಿಶೇಷ ಪ್ರಯತ್ನ ಮತ್ತು‌ ಕೋರಿಕೆಯ ಮೇರೆಗೆ ಮುಖ್ಯಮಂತ್ರಿ, ಲೋಕೋಪಯೋಗಿ ಮಂತ್ರಿಗಳು ಮಂಜೂರಿ‌ಮಾಡಿದ್ದಾಗಿ ಹೇಳಿದ್ದಾರೆ.  ಶಾಸಕರು ಈ ಕಾರಣಕ್ಕೆ ಮುಖ್ಯಮಂತ್ರಿಗಳನ್ನು ಹಾಗೂ ಸರಕಾರವನ್ನು  ಅಭಿನಂದಿಸಿದ್ದಾರೆ. ಆದರೆ ಈ ಸಂಗತಿ ವಿವಿಧ ಮಾಧ್ಯಮ ಮತ್ತು ಜಾಲತಾಣ ಗ್ರುಪ್ ಗಳಲ್ಲಿ ಬರುತ್ತಿದ್ದಂತೆ ಕ್ಷೇತ್ರಕ್ಕೆ ರಸ್ತೆ ತರಬೇಕಾದವರು ಶಾಸಕರೇ ಸರಿ. ಆದರೆ ಈ ಮಂಜೂರಿಯ ಹಿಂದೆ ಜನಪ್ರತಿನಿಧಿಯಲ್ಲದವರೊಬ್ಬರ ಉನ್ನತ ಸ್ಥಾನದಲ್ಲಿದ್ದವರಾಗಿದ್ದವರು ತಮ್ಮೂರಿನ ಬಗ್ಗೆ ಇರುವ ಕಾಳಜಿಗೆ ತಮ್ಮ ಪ್ರಯತ್ನ ಬಳಸಿ‌ಮಾಡಿದ್ದಾರೆನ್ನುವ ಮಾತು ಪುಂಖಾನುಪುಂಖವಾಗಿ ಹರಿದಾಡುತ್ತಿದೆ.

ತಾಲೂಕಿನಲ್ಲಿ ಬಹುತೇಕ ರಸ್ತೆಗಳು ಹದಗೆಟ್ಟಿವೆ. ಆದರೆ ಈ ಮಧ್ಯೆ ಈ ಎರಡೇ ರಸ್ತೆಗಳಿಗೆ ಅನುಧಾನ ಬಂದಿರುವುದು ಈ ಚರ್ಚೆ ಮತ್ತು‌ ಪ್ರಶ್ನೆಗಳಿಗೆ ಕಾರಣವಾಗಿದೆ. ಹಾಗಂತ ಶಾಸಕರಿಗೆ ಹೀಗೆ ವಿಶೇಷ ಅನುಧಾನ ತರುವ ಸಾಮರ್ಥ್ಯವಿದೆ ಎಂಬುದು ಎಲ್ಲರು ತಿಳಿದ ವಿಷಯವೇ ಆಗಿದೆ. ಆದರೆ ಈ ರಸ್ತೆಗಳಿಗೆ ಅನುಧಾನದ ಹಿಂದೆ ಏನೋ‌ ಅಡಗಿದೆ ಎಂಬುದಂತೂ ಸತ್ಯ. ಏನಿದ್ದರೂ ಕ್ಷೇತ್ರದಲ್ಲಿ ಸರಕಾರದ ಅನುಧಾನ ಹೇಗೂ ಬರಲಿ ,ಬಂದಾಗ ಅದರ ಕ್ರೆಡಿಟ್ ಸಲ್ಲುವುದು ಶಾಸಕರಿಗೆ ಎಂಬುದರಲ್ಲಿ ಎರಡು‌ಮಾತಿಲ್ಲ. ಶಾಸಕರು ಸಾಕಷ್ಟು ಅನುಧಾನ ಕ್ಷೇತ್ರಕ್ಕೆ ತಂದಿದ್ದಾರೆ. ನೀರಾವರಿ ಸೇರಿದಂತೆ ರಸ್ತೆಗಳಿಗೆ ಅನುಧಾನ ತಂದಿದ್ದಾರೆ .ಆ ಸಂದರ್ಭಗಳಲ್ಲಿ  ಆಗದ ಚರ್ಚೆ ಈಗೇಕೆ ಅಣಲಗಾರ ಮಾಗೋಡ ರಸ್ತೆ ಅನುಧಾನ ಮಂಜೂರಿ ಸಂದರ್ಭಕ್ಕೆ ಶುರುವಾಯ್ತು ಎನ್ನುವುದು ವಿಶೇಷ. ಶಾಸಕರ ಜೊತೆಗೂಡಿ ಅಥವಾ ಶಾಸಕರೂ ಅವರ ಜೊತೆಗೂಡಿ ಅನುಧಾನ ಮಂಜೂರಿ ಮಾಡಿಸಿರಬಹುದು.ಒಟ್ಟಿನಲ್ಲಿ ಸಂಪೂರ್ಣ ಚಿಂದಿ ಚಿಂದಿಯಾದ ಈ ರಸ್ತೆಗಳಿಗೆ ಅನುಧಾನ ಸಿಕ್ಕಿದ್ದು ಆ ಭಾಗದ ನಿತಗಯ ಸಂಚಾರಿಗರ ಸುದೈವವೇ ಸರಿ.
 ಸಮರ್ಪಕ ಕಾಮಗಾರಿಯಾಗಿ ಶಾಸಕರ ಹೆಸರೂ ಉಳಿಯುವಂತಾಗಬಹುದೆಂಬ ಆಶಯವೂ ಜನರದ್ದು. ರಸ್ತೆ ಅನುದಾನ ವಿಷಯದ ಕ್ರೆಡಿಟ್ ವಾರ್ ಮಾತ್ರ ಜಾಲತಾಣದಲ್ಲಿ ಹೆಬ್ವಾರ್ ಬಣ ಮತ್ತು ಬಿಜೆಪಿ ನಡುವೆ ನಡೆಯುತ್ತಲೇ ಇದೆ.ಆದರೆ ಏನಿದ್ದರೂ ಈ ಹಿಂದೆ ಮಾಡಿ ತಿಂಗಳೊಪ್ಪಿತ್ತಿಗೆ ಕಿತ್ತೆದ್ದು ಹೋದಂತ ರಸ್ತೆಯಾಗದೇ ಆದಷ್ಟು ಉತ್ತಮ ರಸ್ತೆಯಾಗಲಿ.ಕ್ರೇಡಿಟ್ ಯಾರಿಗೆ ಎನ್ನುವದಕ್ಕಿಂತ ಜನರು ಬೆನ್ನುಹುರಿ ಕಾದುಕೊಂಡು ಹೋಗುವಂತಾಗಲಿ.ನಾವು ರಸ್ತೆ ಆಯ್ತು ಆಗುತ್ತದೆ ಎಂದಷ್ಟೇ ಖುಷಿ‌ಪಡುತ್ತೇವೆ.ನಮಗೆ ಕ್ರೆಡಿಟ್ ವಾರೂ ಬೇಡ,ರಾಜಕೀಯವೂ ಬೇಡ, ನಮಗೆ‌ಒಳ್ಳೆಯ ಗುಣಮಟ್ಟದ ರಸ್ತೆ ಬೇಕೆನ್ನುವುದು ಈ ರಸ್ತೆಯಲ್ಲಿ ನಿತ್ಯ  ತಿರುಗಿ ಹೈರಾಣಾಗಿ ಸುಸ್ತಾದ  ಸಾರ್ವಜನಿಕರ‌ ಮಾತಾಗಿದೆ

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0