ಬೈಕ್–ಸ್ಕೂಟರ್ ಡಿಕ್ಕಿ: ಬಾಲಕ ಸ್ಥಳದಲ್ಲೇ ಸಾವು; ತಾಯಿ, ಇಬ್ಬರು ವಿದ್ಯಾರ್ಥಿಗಳು ಗಂಭೀರ
ಆಪ್ತ ನ್ಯೂಸ್ ಕಾರವಾರ:
ಕಾರವಾರ ಆರ್‌ಟಿಒ ಕಚೇರಿ ಎದುರು ಗುರುವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 15 ವರ್ಷದ ಚಿರಜೀವ ಬ್ರಹ್ಮಾನಂದ ಕುಂಜಿ (ವಾಸ: ಮಾಜಾಳಿ) ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಪಘಾತದಲ್ಲಿ ಚಿರಜೀವನ ತಾಯಿ ಶ್ರೇಯಾ ಹಾಗೂ ಬುಲೆಟ್ ಬೈಕ್ ಮೇಲೆ ಪ್ರಯಾಣಿಸುತ್ತಿದ್ದ ಕಾರವಾರ ಮೆಡಿಕಲ್ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ.
ಘಟನೆ ವಿವರ:
ರಾತ್ರಿ ಸುಮಾರು 8.30ರ ವೇಳೆಗೆ, ರಾಷ್ಟ್ರೀಯ ಹೆದ್ದಾರಿಯ ಸಮೀಪದ ಸರ್ವೀಸ್ ರಸ್ತೆಯಲ್ಲಿ ಘಟನೆ ನಡೆದಿದೆ. ಮೆಡಿಕಲ್ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಬುಲೆಟ್ ಬೈಕ್‌ನಲ್ಲಿ ನಗರ ದಿಕ್ಕಿಗೆ ಬರುತ್ತಿದ್ದ ವೇಳೆ, ಎದುರುಗಡೆಯಿಂದ ಬಂದ ಸ್ಕೂಟರ್‌ಗೆ ತೀವ್ರ ವೇಗವಾಗಿ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದಿದ್ದಾರೆ,
ಸ್ಕೂಟರ್‌ನಲ್ಲಿ ಚಿರಜೀವ ಮತ್ತು ಅವರ ತಾಯಿ ಶ್ರೇಯಾ ಪ್ರಯಾಣಿಸುತ್ತಿದ್ದರು. ಡಿಕ್ಕಿಯ ರಭಸಕ್ಕೆ ಚಿರಜೀವ ತಲೆಗೆ ಭಾರಿ ಪೆಟ್ಟಾಗಿದ್ದು, ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.
ಗಂಭೀರ ಗಾಯಗೊಂಡ ಮೂವರು ಆಸ್ಪತ್ರೆಗೆ
ಚಿರಜೀವನ ತಾಯಿ ಹಾಗೂ ಬೈಕ್ ಸವಾರರಾದ ಇಬ್ಬರು ವಿದ್ಯಾರ್ಥಿಗಳನ್ನು ತಕ್ಷಣ ಸ್ಥಳೀಯರು ಮತ್ತು ಪೊಲೀಸರು ಕಾರವಾರದ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಪೊಲೀಸ್ ತನಿಖೆ
ಕಾರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಧಿಕ ವೇಗ ಮತ್ತು ನಿರ್ಲಕ್ಷ್ಯ ಸವಾರಿ ಈ ಅಪಘಾತಕ್ಕೆ ಕಾರಣವೆಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಮುಂದಿನ ತನಿಖೆ ಪೊಲೀಸರು ಕೈಗೊಂಡಿದ್ದಾರೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



