ಧನ್ವಂತರಿ ಜಯಂತಿಯಂದು ಧನ್ವಂತರಿ ಉತ್ಸವ

ಆಪ್ತ ನ್ಯೂಸ್ ಯಲ್ಲಾಪುರ:
ಎಲ್ಲಾ ರೋಗಬಾಧೆಗಳು ನಿವಾರಣೆಯಾಗಲಿ, ರಾಷ್ಟ್ರಕ್ಕೆ ಕ್ಷೇಮವಾಗಲಿ ಎನ್ನುವ ಸಂಕಲ್ಪದೊಂದಿಗೆ ಭಾರದ್ವಾಜಾಶ್ರಮ ಭಟ್ರಕೇರಿಯಲ್ಲಿ ಧನ್ವಂತರಿ ಜಯಂತಿಯಂದು ಧನ್ವಂತರಿ ಉತ್ಸವ ನೆರವೇರಿತು.
30 ವೈದಿಕರಿಂದ ಧನ್ವಂತರಿ ಹವನ ಹಾಗೂ 25 ಮಾತೆಯರಿಂದ ಸಂಪೂರ್ಣ ಭಗವದ್ಗೀತಾ ಪಾರಾಯಣಗಳು ನಡೆದವು.
ಇದೇ ಸಂದರ್ಭದಲ್ಲಿ ಭೂಮಿಪೂಜೆ,ವೃಕ್ಷಪೂಜೆಯೊಂದಿಗೆ ನಕ್ಷತ್ರವೃಕ್ಷಾರೋಪಣ ಕಾರ್ಯಕ್ರಮ ನೆರವೇರಿತು.
ಧನ್ವಂತರಿ ಜಯಂತಿಯ ಮಹತ್ವವನ್ನು ಆಚರಣೆಯ ವಿಧಾನವನ್ನೂ ವಿದ್ವಾನ ಮಹೇಶ ಭಟ್ಟ ಇಡಗುಂದಿ ಇವರು ತಿಳಿಸಿದರು.ಇವರೇ ರಚಿಸಿದ ಧನ್ವಂತರಿ ಅಷ್ಟಕ ಲೋಕಾರ್ಪಣೆಗೊಂಡಿತು.ನಿವೃತ್ತ ಪಾಚಾರ್ಯರಾದ ಡಾ.ಕೋಮಲಾ ಭಟ್ಟ ಶಿರಸಿ ಇವರು ನಕ್ಷತ್ರವೃಕ್ಷಾರೋಪಣಕ್ಕೆ ಚಾಲನೆ ನೀಡಿ ವೃಕ್ಷಾರೋಪಣದ ಮಹತ್ವ ತಿಳಿಸಿದರು.ಸೇರಿದ್ದ ನೂರಾರು ಭಕ್ತರು ಧನ್ವಂತರಿ ಮಹಾವಿಷ್ಣುವನ್ನು ಪ್ರಾರ್ಥಿಸಿದರು.
What's Your Reaction?






