LPG ಗ್ಯಾಸ್ ಮೇಲಿನ ಗಾದೆಗಳು 🤣
LPG ಗ್ಯಾಸ್ ಮೇಲಿನ ಗಾದೆಗಳು: 🤣
ಇರಾನ್ ಮೇಲೆ ಅಮೆರಿಕ ದಾಳಿ ಮಾಡಿದ ನಂತರ ಹಲವು ದೇಶಗಳಲ್ಲಿ ಎಲ್‌ಪಿಜಿ ಗ್ಯಾಸ್ ಸಮಸ್ಯೆ ತಲೆದೋರಿದೆ. ಭಾರತದಲ್ಲಿಯೂ ಕೂಡ ಎಲ್‌ಪಿಜಿ ಸಮಸ್ಯೆ ತೀವ್ರವಾಗಿದೆ. ದರ ಹೆಚ್ಚಳ, ಸಿಲಿಂಡರ್ ಅಲಭ್ಯತೆ ಹೀಗೆ ಹಲವು ಸಮಸ್ಯೆಗಳು ಕಾಡುತ್ತಿವೆ. ಎಲ್‌ಪಿಜಿ ಕುರಿತಂತೆ ಇದೀಗ ಹಲವು ಗಾದೆಗಳೇ ಹುಟ್ಟಿಕೊಂಡಿದೆ. ತಮಾಷೆಯ ಕೆಲವು ಗಾದೆಗಳು ಇಲ್ಲಿದೆ ನೋಡಿ
1. ತುಂಬಿದ ಸಿಲಿಂಡರ್ ತುಳುಕುವುದಿಲ್ಲ
2. ಗ್ಯಾಸಿಗೊಂದು ಕಾಲ, ಸೌದೆಗೊಂದು ಕಾಲ
3. ಸೌದೆಯಲ್ಲಿ ಹೋದ ಮಾನ, ಗ್ಯಾಸ್ ಕೊಟ್ಟರೂ ಬಾರದು!
4. ಸೌದೆಗೆ ವರುಷ, ಗ್ಯಾಸಿಗೆ ನಿಮಿಷ
5. ಅಲ್ಪನಿಗೆ ಸಿಲಿಂಡರ್ ಸಿಕ್ಕಿದ್ರೆ ತಿಂಗಳ ಬೆಳಕಲ್ಲಿ ಗ್ಯಾಸ್ ಬಿಟ್ನಂತೆ!
6. ಗ್ಯಾಸ್ ಬೆಳ್ಳಿ, ಸೌದೆ ಬಂಗಾರ
7. ಸೌದೆಗೆ ಚೆಲ್ಲಾಟ, ಗ್ಯಾಸಿಗೆ ಪ್ರಾಣಸಂಕಟ
8. ಸೌದೆಯಿದ್ದವನು ಬಾಳಿಯಾನು
9. ಗ್ಯಾಸ್ ಸುಳ್ಳಾದರೂ ಸೌದೆ ಸುಳ್ಳಾಗದು
10. ಯಾರದ್ದೋ ಗ್ಯಾಸ್, ಎಲ್ಲಮ್ಮನ ಜಾತ್ರೆ!
What's Your Reaction?
Like
0
Dislike
0
Love
0
Funny
0
Angry
0
Sad
0
Wow
0