ಹೊನ್ನಾವರದಲ್ಲಿ ನ.೪ ಕ್ಕೆ ಗ್ರೀನ್ ಕಾರ್ಡ ಪ್ರಮುಖರ ಶಿಬಿರ
ಆಪ್ತ ನ್ಯೂಸ್ ಹೊನ್ನಾವರ:
ಸ್ಥಳೀಯ ನಾಮಧಾರಿ ಕಲ್ಯಾಣ ಮಂಟಪದಲ್ಲಿ ನ.೪ ಮುಂಜಾನೆ ೧೦ ಗಂಟೆಗೆ ಹೊನ್ನಾವರ ತಾಲೂಕಿನ ಗ್ರೀನ್ ಕಾರ್ಡ ಪ್ರಮುಖರ ತರಬೇತಿ ಶಿಬಿರ ಸಂಘಟಿಸಲು ನಿರ್ಧರಿಸಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ತಿಳಿಸಿದ್ದಾರೆ.
ಶಿಬಿರದಲ್ಲಿ ಅರಣ್ಯ ಕಾಯ್ದೆ ೬೪ ಎ ಅಡಿಯಲ್ಲಿ ಜರುಗುತ್ತಿರುವ ಒಕ್ಕಲೆಬ್ಬಿಸುವ ವಿಚಾರಣೆ ಕುರಿತು, ಇತ್ತೀಚಿನ ಅರಣ್ಯ ಭೂಮಿ ಹಕ್ಕಿಗೆ ಸಂಭAಧಿಸಿ ಕಾನೂನು ಅಂಶಗಳ ಕುರಿತು, ನಿರಾಸಕ್ತ ಗ್ರೀನ್ ಕಾರ್ಡ ಪ್ರಮುಖರ ಪಟ್ಟಿಯನ್ನು ಪ್ರಕಟಿಸುವುದು , ಜಿ ಪಿ ಎಸ್ ಮೇಲ್ಮನವಿ ಸ್ವೀಕೃತಿಯ ಪ್ರತಿಯ ಮಾಹಿತಿ ನೀಡುವುದು, ಮುಂತಾದ ವಿಷಯಗಳ ಕುರಿತು ಶಿಬಿರದಲ್ಲಿ ಚರ್ಚಿಸಲಾಗುವುದೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಹತ್ವಪೂರ್ಣವಾದ ಶಿಬಿರಕ್ಕೆ ಗ್ರೀನ್ ಕಾರ್ಡ ಪ್ರಮುಖರು ಗುರುತಿನ ಪತ್ರದೊಂದಿಗೆ ಹಾಜರಿರಲು ಅಧ್ಯಕ್ಷ ರವೀಂದ್ರ ನಾಯ್ಕ ಕೋರಿದ್ದಾರೆ.
ಐಡಿ ನಂಬರ್:
ಹೊನ್ನಾವರ ತಾಲೂಕಿನ ಸಾಲ್ಕೋಡ್ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಅಂದು ನ.೪ ಮಂಗಳವಾರ ಮದ್ಯಾಹ್ನ ೨ ಗಂಟೆಗೆ ಸಾಲ್ಕೋಡ್ ಗ್ರಾಮ ಪಂಚಾಯತ ವ್ಯಾಪ್ತಿಯ ಅರಣ್ಯವಾಸಿಗಳಿಗೆ ಗುರುತಿನ ಪತ್ರಕ್ಕೆ ಐಡಿ ನಂಬರ್ ಮತ್ತು ಜಿಪಿಎಸ್ ಮೇಲ್ಮನವಿ ಸ್ವೀಕೃತಿ ಪ್ರತಿಯನ್ನು ಗ್ರಾಮ ಪಂಚಾಯತಿಯ ಕಾರ್ಯಾಲಯದ ಹತ್ತಿರ ವಿತರಿಸಲಾಗುವುದೆಂದು ಅಧ್ಯಕ್ಷ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



