ಮುತ್ಮುರ್ಡ್‌ನಲ್ಲಿ ಕಾಣಿಸಿಕೊಂಡ ಬೃಹತ್ ಹೆಬ್ಬಾವು; ನಾಯಿಗಳ ಬೊಗಳುವಿಕೆಗೆ ನವಿಲು ಬಿಟ್ಟು ಓಟ!

Sep 22, 2026 - 20:18
 0  316
ಮುತ್ಮುರ್ಡ್‌ನಲ್ಲಿ ಕಾಣಿಸಿಕೊಂಡ ಬೃಹತ್ ಹೆಬ್ಬಾವು; ನಾಯಿಗಳ ಬೊಗಳುವಿಕೆಗೆ ನವಿಲು ಬಿಟ್ಟು ಓಟ!

ಆಪ್ತ ನ್ಯೂಸ್ ಸಿದ್ದಾಪುರ:

ತಾಲೂಕಿನ ಕಾನಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುತ್ಮುರ್ಡ್ ಗ್ರಾಮದ ತೋಟವೊಂದರಲ್ಲಿ ಬೃಹತ್ ಹೆಬ್ಬಾವು ಕಾಣಿಸಿಕೊಂಡಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ತೋಟದಲ್ಲಿ ಹೆಬ್ಬಾವು ನವಿಲೊಂದನ್ನು ನುಂಗುತ್ತಿದ್ದ ವೇಳೆ ಸ್ಥಳೀಯರ ಗಮನಕ್ಕೆ ಬಂದಿದೆ. ಹೆಬ್ಬಾವನ್ನು ಕಂಡ ನಾಯಿಗಳು ಜೋರಾಗಿ ಬೊಗಳಲು ಆರಂಭಿಸಿವೆ. ನಾಯಿಗಳ ಬೊಗಳುವಿಕೆ ಕೇಳಿ ಬೆದರಿದ ಹೆಬ್ಬಾವು ನವಿಲನ್ನು ಬಿಟ್ಟು ಸ್ಥಳದಿಂದ ಓಡಿಹೋಗಿದೆ ಎನ್ನಲಾಗಿದೆ.

ಸ್ಥಳೀಯರ ಪ್ರಕಾರ, ಕಳೆದ ಹಲವು ದಿನಗಳಿಂದ ಈ ಭಾಗದಲ್ಲಿ ಹೆಬ್ಬಾವುಗಳ ಸಂಚಾರ ಕಂಡುಬರುತ್ತಿದೆ. ಮುತ್ಮುರ್ಡ್ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ನಾಲ್ಕಕ್ಕೂ ಹೆಚ್ಚಿನ ಹೆಬ್ಬಾವುಗಳು ಇರುವ ಸಾಧ್ಯತೆಯಿದೆ ಎಂಬ ಅಭಿಪ್ರಾಯವನ್ನು ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ.

ಹೆಬ್ಬಾವುಗಳ ಓಡಾಟದಿಂದಾಗಿ ತೋಟಗಳಿಗೆ ತೆರಳುವಾಗ ಹಾಗೂ ರಾತ್ರಿ ವೇಳೆ ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ.

ಈ ಭಾಗದಲ್ಲಿ ಪದೇಪದೇ ಹೆಬ್ಬಾವುಗಳು ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಂಡು, ಜನವಸತಿ ಪ್ರದೇಶಗಳ ಸಮೀಪ ಸಂಚರಿಸುತ್ತಿರುವ ಹೆಬ್ಬಾವುಗಳನ್ನು ಸುರಕ್ಷಿತವಾಗಿ ರಕ್ಷಿಸಿ ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 1
Wow Wow 0