ಅಕ್ರಮವಾಗಿ ಶ್ರೀಗಂಧ ಕೆತ್ತನೆ: ಓರ್ವ ಆರೋಪಿ ಬಂಧನ

20.5 ಕೆ.ಜಿ. ಶ್ರೀಗಂಧ ವಶ; ಮತ್ತೊಬ್ಬ ಆರೋಪಿ ತಲೆಮರೆ

Sep 5, 2026 - 13:35
 0  112
ಅಕ್ರಮವಾಗಿ ಶ್ರೀಗಂಧ ಕೆತ್ತನೆ: ಓರ್ವ ಆರೋಪಿ ಬಂಧನ

ಆಪ್ತ ನ್ಯೂಸ್ ಶಿರಸಿ:

ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಶ್ರೀಗಂಧದ ತುಂಡುಗಳನ್ನು ಕೆತ್ತನೆ ಮಾಡುತ್ತಿದ್ದ ಆರೋಪದ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಓರ್ವ ಆರೋಪಿಯನ್ನು ಬಂಧಿಸಿರುವ ಘಟನೆ ತಾಲೂಕಿನ ಬೊಮ್ಮನಳ್ಳಿ ಗ್ರಾಮದಲ್ಲಿ ನಡೆದಿದೆ.

ಬೊಮ್ಮನಳ್ಳಿ ಗ್ರಾಮದ ಅರಣ್ಯ ಸರ್ವೆ ನಂ. 325ರಲ್ಲಿ ಶ್ರೀಗಂಧದ ತುಂಡುಗಳನ್ನು ಅಕ್ರಮವಾಗಿ ಕೆತ್ತನೆ ಮಾಡಲಾಗುತ್ತಿದೆ ಎಂಬ ಮಾಹಿತಿ ಆಧರಿಸಿ ಅರಣ್ಯ ಇಲಾಖೆ ಸಿಬ್ಬಂದಿ ಶುಕ್ರವಾರ ಕಾರ್ಯಾಚರಣೆ ನಡೆಸಿದರು. ಈ ವೇಳೆ ಅಡೆಗದ್ದೆ ಗ್ರಾಮದ ಕೊಪ್ಪ ನಿವಾಸಿ ಮಾರುತಿ ಫಕೀರಪ್ಪ ಓಲೇಕಾರ (38) ಎಂಬಾತನನ್ನು ಬಂಧಿಸಲಾಗಿದ್ದು, ಆತನಿಂದ 20.5 ಕೆ.ಜಿ. ಶ್ರೀಗಂಧವನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತ ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.

ಶಿರಸಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ್ ಹೆಚ್. ಸೂರ್ಯವಂಶಿ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅಮಿತ್‌ಕುಮಾರ ಚವ್ಹಾಣ ಅವರ ಮಾರ್ಗದರ್ಶನದಲ್ಲಿ, ಶಿರಸಿ ವಲಯ ಅರಣ್ಯಾಧಿಕಾರಿ ಭವ್ಯ ನಾಯ್ಕ ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ.

ಪ್ರಕರಣದಲ್ಲಿ ಮತ್ತೊಬ್ಬ ಆರೋಪಿ ಎನ್ನಲಾಗಿರುವ ಶಿರಸಿ ತಾಲೂಕಿನ ಮುರಕಿಕೊಡ್ಲು ನಿವಾಸಿ ವಿನಾಯಕ ಮರಾಠಿ (40) ತಲೆಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ಅರಣ್ಯ ಇಲಾಖೆ ತನಿಖೆ ಮುಂದುವರಿಸಿದೆ.

ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿ ವಿಶ್ವನಾಥ ಅರಬಗೊಂಡ, ಅರಣ್ಯ ಪಾಲಕರಾದ ಸಂತೋಷಕುಮಾರ ರಾಥೋಡ, ಪುಂಡಲೀಕ ತಾವರಖೇಡ ಸೇರಿದಂತೆ ಅರಣ್ಯ ಇಲಾಖೆ ಸಿಬ್ಬಂದಿ ಭಾಗವಹಿಸಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 1
Angry Angry 1
Sad Sad 1
Wow Wow 0