ನೌಕರಿ ಕೊಡಿಸುವುದಾಗಿ ವಂಚನೆ: ದೂರು ದಾಖಲು

Nov 2, 2025 - 12:16
 0  37
ನೌಕರಿ ಕೊಡಿಸುವುದಾಗಿ ವಂಚನೆ: ದೂರು ದಾಖಲು

ಆಪ್ತ ನ್ಯೂಸ್ ಯಲ್ಲಾಪುರ: 
ಜಲ ಸಂಪನ್ಮೂಲ ಇಲಾಖೆಯಲ್ಲಿ ನೌಕರಿ ಕೊಡಿಸುವುದಾಗಿ ಹೇಳಿ ವ್ಯಕ್ತಿಯೊಬ್ಬ ೮.70 ಲಕ್ಷ ರೂ ವಂಚಿಸಿದ ಬಗ್ಗೆ ಯಲ್ಲಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ.
ಆರೋಪಿತ ಕೆಂಚಪ್ಪ ಗ್ಯಾನಪ್ಪ ಹಂಚಿನಾಳ ಸಿಂದನೂರು ಈತ ಜಲಸಂಪನ್ಮೂಲ ಇಲಾಖೆಯಲ್ಲಿ ನೌಕರಿ ಕೊಡಿಸುವುದಾಗಿ ಹೇಳಿ, ತಾಲೂಕಿನ ಶ್ರೀನಾಥ ಶ್ರೀಕಾಂತ ಕಳಸ ಕಳಚೆ, ರವಿ ತಮ್ಮಣ್ಣ ಗೌಡ ಕಳಚೆ, ಗಜಾನನ ಈಶ್ವರ ಪಟಗಾರ ಅರಬೈಲ್, ಪ್ರಭಾಕರ ವಿಶ್ವೇಶ್ವರ ಗೌಡ ಕಳಚೆ, ಶ್ವೇತಾ ಸುಭಾಸ ಮರಾಠಿ ತಳಕೆಬೈಲ್, ರಾಮಚಂದ್ರ ರಾಧಾಕೃಷ್ಣ ಕೊಡಕಣಿ ವಜ್ರಳ್ಳಿ, ಗೌರೀಶ ಮೋಹನ ಮರಾಠಾ ಮಾವಿನಮನೆ ಇವರಿಂದ ಕಳೆದ ವರ್ಷ ನವೆಂಬರ್ 3 ರಿಂದ ಮಾರ್ಚ 28 ರ ಅವಧಿಯಲ್ಲಿ ಒಟ್ಟೂ 8.70 ಲಕ್ಷ ರೂ ಹಣ ಪಡೆದು ನೌಕರಿ ಕೊಡಿಸದೇ ವಂಚಿಸಿದ್ದಾನೆಂದು ಯಲ್ಲಾಪುರ ಠಾಣೆಯಲ್ಲಿ ದೂರು ನೀಡಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0