ಜೂನಿಯರ್ ಶಟಲ್ ಬ್ಯಾಡ್ಮಿಂಟನ್: ಭಾರತ ತಂಡಕ್ಕೆ ಸಾಗರದ ವಿಭವ ಆಯ್ಕೆ

ಆಪ್ತ ನ್ಯೂಸ್ ಸಾಗರ:
ಹರಿಯಾಣದ ಪಂಚಕುಲದಲ್ಲಿ ನಡೆದ ರಾಷ್ಟ್ರಮಟ್ಟದ ಜೂನಿಯರ್ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ೧೫ ವರ್ಷದೊಳಗಿನ ವಿಭಾಗದ ಡಬಲ್ಸ್ ನಲ್ಲಿ ಸಾಗರದ ವಿಭವ ಹಾಗೂ ದಾವಣಗೆರೆ ಮೂಲದ ರಕ್ಷಾ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಸಾಗರದ ಈರ್ವರು ಬಾಲಕಿಯರೂ ಸೇರಿ ರಾಜ್ಯದ ೧೨ ಮಕ್ಕಳು ಮುಂದಿನ ತಿಂಗಳು ಚೀನಾದಲ್ಲಿ ನಡೆಯಲಿರೋ ಬ್ಯಾಡ್ಮಿಂಟನ್ ಏಷ್ಯಾ ಜೂನಿಯರ್ ಚಾಂಪಿಯನ್ ಶಿಪ್ ೨೦೨೫ರಲ್ಲಿ ಭಾಗವಹಿಸುವ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ. ಇಬ್ಬರು ಬಾಲಕಿಯರು ಸಾಗರದ ಡಿಲೈಟ್
ಸಾಗರದ ಡಿ ಲೈಟ್ ಬ್ಯಾಡ್ಮಿಂಟನ್ ಅಕಾಡೆಮಿಯ ಎಸ್. ದೀಪಕ್‌ರಿಂದ ತರಬೇತಿ ಪಡೆಯುತ್ತಿರುವ ವಿಭವ ಹೆಗ್ಗೋಡಿನ ರಾಘವೇಂದ್ರ ಮತ್ತು ವಸುಂದರ ದಂಪತಿ ಪುತ್ರಿ. ಅವರು ಶಿವಪ್ಪನಾಯಕ ನಗರದ ಪ್ರಜ್ಞಾ ಭಾರತಿ ಪ್ರೌಢಶಾಲೆಯಲ್ಲಿ ೯ನೇ ತರಗತಿ ಓದುತ್ತಿದ್ದಾರೆ.
ಇವರ ಸಾಧನೆಗೆ ಮೆಚ್ಚುಗೆಯ ಮಹಾಪೂರ ಹರಿದುಬರುತ್ತಿದೆ. ವಿಭವಾರ ಸಾಧನೆಗೆ ಶಾಸಕ ಗೋಲಾಪಕೃಷ್ಣ ಬೇಳೂರು ಶುಭಕೋರಿದ್ದಲ್ಲದೆ, ಆಕೆಯ ಮನೆಗೆ ತೆರಳಿ, ಪೋಷಕರಿಗೆ ಸನ್ಮಾನಿಸಿದರು. ಆಕೆಗೆ ಅಭಿನಂದನೆ ಸಲ್ಲಿಸಿ, ಮುಂದಿನ ದಿನದಲ್ಲಿ ಇನ್ನೂ ಹೆಚ್ಚಿನದ್ದನ್ನು ಸಾಧಿಸು ಎಂದು ಹಾರೈಸಿರು. ತಾಲೂಕಿನ ಹಿರಿಯ ಬ್ಯಾಡ್ಮಿಟನ್ ಕ್ರೀಡಾಪಟು ಶ್ರೀಧರ್ ಮಾತನಾಡಿ, ದೇಶ ಹಾಗೂ ಅಂತಾರಾಷ್ಟಿçÃಯ ಮಟ್ಟದಲ್ಲಿ ಇನ್ನೂ ಹೆಚ್ಚಿನದ್ದನ್ನು ಸಾಧಿಸಲಿ ಎಂದು ಹಾರೈಸಿದ್ದಾರೆ.
ತಮ್ಮ ಶಿಷ್ಯೆ ಸಾಧನೆಗೆ ಕೋಚ್ ದೀಪಕ್ ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲದೆ, ಇನ್ನೂ ಹೆಚ್ಚಿನದ್ದನ್ನು ಸಾಧಿಸುವ ಶಕ್ತಿ ಸಿಗಲಿ ಎಂದು ಹಾರೈಸಿದರು.
What's Your Reaction?






