ನವರಾತ್ರಿ ಅಂಗವಾಗಿ ಕಲೋಪಾಸನಾ ಕಾರ್ಯಕ್ರಮ

Oct 2, 2025 - 18:44
 0  8
ನವರಾತ್ರಿ ಅಂಗವಾಗಿ ಕಲೋಪಾಸನಾ ಕಾರ್ಯಕ್ರಮ

ಆಪ್ತ ನ್ಯೂಸ್ ಸಾಗರ: 

ನವರಾತ್ರಿ ಸಂದರ್ಭದಲ್ಲಿ ನೃತ್ಯ ಸಂಗೀತ ಸೇವೆ ದೇವಿಗೆ ಅತ್ಯಂತ ಪ್ರಿಯವಾದದ್ದು. ಮಾರಿಕಾಂಬಾ ದೇವಿ ಸನ್ನಿಧಿಯಲ್ಲಿ ಧಾರ್ಮಿಕ ಸೇವೆ ಜೊತೆ ಸಾಂಸ್ಕೃತಿಕ ಸೇವೆ ನಡೆಸಿ ಕಲಾವಿದರಿಗೆ ಸಹಕಾರ ನೀಡುತ್ತಿರುವುದು ಸ್ವಾಗತಾರ್ಹ ಸಂಗತಿ ಎಂದು ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟೀಲ್ ತಿಳಿಸಿದರು.
ಇಲ್ಲಿನ ಮಾರಿಕಾಂಬಾ ದೇವಿ ನ್ಯಾಸ ಪ್ರತಿಷ್ಟಾನದಿಂದ ನವರಾತ್ರಿ ಅಂಗವಾಗಿ ಐದು ದಿನಗಳ ಕಾಲ ಏರ್ಪಡಿಸಿದ್ದ ಕಲೋಪಾಸನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಜಾತ್ರೆ ಉತ್ಸವಗಳು ಕಲೆ ಸಾಹಿತ್ಯ ಸಂಸ್ಕೃತಿಯನ್ನು ಉಳಿಸುವ ಕೆಲಸ ಮಾಡುತ್ತದೆ. ನಾಡಿನ ಬೇರೆಬೇರೆ ಭಾಗದಿಂದ ಕಲಾವಿದರು ಬಂದು ಸಾಂಸ್ಕೃತಿಕ ಕಲೆ ನೀಡುವ ಮೂಲಕ ಸಂಸ್ಕೃತಿ ವಿನಿಮಯವಾಗುತ್ತದೆ. ಸಾಗರ ಅನೇಕ ಕಲೆಗಳಿಗೆ ಆಶ್ರಯತಾಣವಾಗಿದ್ದು, ಕಲಾವಿದರನ್ನು ಗೌರವಿಸಿಕೊಂಡು ಬಂದಿದೆ. ನವರಾತ್ರಿ ಮಾರಿಜಾತ್ರೆ ಸಂದರ್ಭದಲ್ಲಿ ಅನೇಕ ಕಲಾವಿದರು ಅದ್ವಿತಿಯ ಕಲಾಪ್ರದರ್ಶನ ನೀಡುತ್ತಾರೆ ಎಂದರು.
ಪ್ರತಿಷ್ಟಾನದ ಅಧ್ಯಕ್ಷ ಕೆ.ಎನ್.ನಾಗೇಂದ್ರ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಭಾವನಾ ಸಂತೋಷ್, ಮಧುಮಾಲತಿ ಲಲಿತಮ್ಮ, ಸುಂದರಸಿಂಗ್, ಗಿರಿಧರ ರಾವ್, ನಾಗೇಂದ್ರ ಕುಮಟಾ, ಲೋಕೇಶಕುಮಾರ್ ಇನ್ನಿತರರು ಹಾಜರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0