ಕರ್ನಾಟಕ ಸಾರಿಗೆಯ ಕನ್ನಡ ರಥದ ಈ ವೀಡಿಯೋ ಭರ್ಜರಿ ವೈರಲ್‌ ಆಯ್ತು

Nov 21, 2025 - 11:43
 0  23
ಕರ್ನಾಟಕ ಸಾರಿಗೆಯ ಕನ್ನಡ ರಥದ ಈ ವೀಡಿಯೋ ಭರ್ಜರಿ ವೈರಲ್‌ ಆಯ್ತು

ಆಪ್ತ ನ್ಯೂಸ್‌ ಶಿರಸಿ:

https://youtube.com/shorts/WcRkDMv40ME?feature=share

ಕನ್ನಡ ಭುವನೇಶ್ವರಿಯ ಸುಂದರ ಮೂರ್ತಿಯನ್ನು ಹೊಂದಿದ್ದ ಈ ಕೆಂಪು ಬಸ್ಸು, ಕನ್ನಡದ ಸುಂದರ ಹಾಡುಗಳನ್ನು ಹಾಕಿಕೊಂಡು, ಸುಂದರವಾಗಿ ಸಿಂಗರಿಸಿಕೊಂಡು ಶರವೇಗದಿಂದ ಬರುತ್ತಿದ್ದರೆ, ಬಸ್ಸಿನೊಳಗಿದ್ದವರಿಗೆ ಅದೇನೋ ಸಂಭ್ರಮ, ಅಷ್ಟೇ ಅಲ್ಲ, ರಸ್ತೆಯಲ್ಲಿ ಓಡಾಡುತ್ತಿದ್ದವರೂ ವಿಸ್ಮಯ, ಬೆರಗಿನಿಂದ ನೋಡುತ್ತಿದ್ದರು.
ಹಾವೇರಿಯಿಂದ ಶಿರಸಿಗೆ ಇಂದು ಮುಂಜಾನೆ ಬಂದ ಕರ್ನಾಟಕ ಸಾರಿಗೆ ಬಸ್ಸು ತನ್ನ ವಿಶೇಷ ಸಿಂಗಾರದಿಂದ ಎಲ್ಲರ ಮನಸ್ಸು ಸೆಳೆಯಿತು.
ಇಡಿಯ ಬಸ್ಸಿಗೆ ಹೂವಿನ ಸಿಂಗಾರ ಮಾಡಲಾಗಿತ್ತು, ಕನ್ನಡಕ್ಕಾಗಿ ಕೈಯೆತ್ತಿ, ಕನ್ನಡಕ್ಕಾಗಿಯೇ ಸಾಧನೆ ಮಾಡಿದ ಸಾಧಕರ ಫೋಟೋಗಳನ್ನು ಬಸ್ಸಿನ ಹೊರಭಾಗದಲ್ಲಿ ಹಾಕಲಾಗಿತ್ತು. ಬಸ್ಸಿನ ಒಳಗಂತೂ ಕನ್ನಡದ ಕಂಪನ್ನು ಸಾರುವ ಹಲವು ಕವಿ-ಸಾಲುಗಳಿದ್ದವು.
ಇವೆಲ್ಲವುಗಳಿಗೂ ಮೆರಗು ಎನ್ನುವಂತೆ ಕನ್ನಡದ ಜ್ಞಾನಪೀಠ ಪುರಸ್ಕೃತ ಕವಿಗಳ ಪುಸ್ತಕಗಳನ್ನು ಬಸ್ಸಿನಲ್ಲಿ ಇಡಲಾಗಿತ್ತು. ಪ್ರತಿ ಆಸನಗಳಿಗೂಿ ಕನ್ನಡದ ಸುಂದರ ಸಂದೇಶದ ಚಿತ್ರಗಳನ್ನು ಹಾಕಲಾಗಿತ್ತು. ಕನ್ನಡ ಭುವನೇಶ್ವರಿಯ ಸುಂದರ ಮೂರ್ತಿ ಬಸ್ಸಿನ ಎದುರು ವಿರಾಜಮಾನವಾಗಿತ್ತು.
ಚಾಲಕ ಹಾಗೂ ನಿರ್ವಾಹಕರುಗಳೂ ಕೂಡ ಕನ್ನಡ ಬಾವುಟವನ್ನು ಧರಿಸಿ ಕನ್ನಡ ಸಾಲುಗಳನ್ನು ಹೇಳಿ ಪ್ರಯಾಣಿಕರ ಜೊತೆ ಸಂವಹನ ನಡೆಸುತ್ತಿದ್ದುದು ಎಲ್ಲರ ಗಮನ ಸೆಳೆಯಿತು.

ಈ ಬಸ್ಸಿನ ಸುಂದರ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡಿ, ವೈರಲ್‌ ಆಗುತ್ತಿದೆ. ಆ ವೀಡಿಯೋ ತುಣುಕು ನಿಮ್ಮೆದುರಿಗಿದೆ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ, ನೀವೂ ಆ ಬಸ್‌ ಹಾಗೂ ಅದರ ಸಿಂಗಾರವನ್ನು ನೋಡಿ:
https://youtube.com/shorts/WcRkDMv40ME?feature=share

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0