ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ರಾಜ್ಯಕ್ಕೆ ಶೇ. 94.1ರಷ್ಟು ರಿಸಲ್ಟ್; ಕರಾವಳಿ ಜಿಲ್ಲೆಗಳದ್ದೇ ಮೇಲುಗೈ!
ಆಪ್ತ ನ್ಯೂಸ್ ಬೆಂಗಳೂರು:
ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳ ಬಹುದಿನಗಳ ನಿರೀಕ್ಷೆಗೆ ತೆರೆ ಬಿದ್ದಿದೆ. 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷೆಯ ಫಲಿತಾಂಶವನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ಇಂದು ಅಧಿಕೃತವಾಗಿ ಬಿಡುಗಡೆ ಮಾಡಿದ್ದಾರೆ. ಈ ಬಾರಿ ರಾಜ್ಯದ ಒಟ್ಟಾರೆ ತೇರ್ಗಡೆ ಪ್ರಮಾಣ ಶೇ. 94.1 ರಷ್ಟಿದ್ದು, ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ.
ಜಿಲ್ಲಾವಾರು ಸಾಧನೆ: ನಂ. 1 ಸ್ಥಾನದಲ್ಲಿ ದಕ್ಷಿಣ ಕನ್ನಡ
ಫಲಿತಾಂಶದಲ್ಲಿ ಈ ಬಾರಿಯೂ ಕರಾವಳಿ ಜಿಲ್ಲೆಗಳ ಅಬ್ಬರ ಮುಂದುವರಿದಿದೆ.
-
ಪ್ರಥಮ ಸ್ಥಾನ: ದಕ್ಷಿಣ ಕನ್ನಡ (ಶೇ. 98.40)
-
ದ್ವಿತೀಯ ಸ್ಥಾನ: ಉಡುಪಿ (ಶೇ. 98.18)
-
ತೃತೀಯ ಸ್ಥಾನ: ಉತ್ತರ ಕನ್ನಡ (ಶೇ. 98.09)
-
ಕೊನೆಯ ಸ್ಥಾನ: ಯಾದಗಿರಿ (ಶೇ. 91.89) ಮತ್ತು ಚಾಮರಾಜನಗರ (ಶೇ. 91.89) ಜಿಲ್ಲೆಗಳು ಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿವೆ.
ಏಳು ವಿದ್ಯಾರ್ಥಿಗಳಿಗೆ 'ಪರ್ಫೆಕ್ಟ್ 625'!
ರಾಜ್ಯದ ಏಳು ಮಂದಿ ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಪಡೆಯುವ ಮೂಲಕ ಇತಿಹಾಸ ಬರೆದಿದ್ದಾರೆ. ಪೂರ್ಣ ಅಂಕ ಗಳಿಸಿದ ಸಾಧಕರು ಇಂತಿದ್ದಾರೆ:
-
ಭರತ್ (ದಾವಣಗೆರೆ)
-
ಬೃಂದಾ (ಚಿಕ್ಕಮಗಳೂರು)
-
ಧನುಷ್ (ಬೆಂಗಳೂರು ಉತ್ತರ)
-
ಪ್ರೀತಂ (ಉಡುಪಿ)
-
ಪ್ರಾರ್ಥನಾ (ಚಿಕ್ಕೋಡಿ)
-
ಸೌಜನ್ಯ (ವಿಜಯಪುರ)
-
ಸುಖದೇವ್ (ರಾಯಚೂರು)
ಲಿಂಗವಾರು ಫಲಿತಾಂಶ: ಹುಡುಗಿಯರದ್ದೇ ಹವಾ!
ಯಥಾಪ್ರಕಾರ ಈ ಬಾರಿಯೂ ಬಾಲಕಿಯರು ಬಾಲಕರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ತೇರ್ಗಡೆಯಾಗಿದ್ದಾರೆ.
-
ಬಾಲಕಿಯರು: ಶೇ. 96.18
-
ಬಾಲಕರು: ಶೇ. 91.94
ಅಂಕಿ-ಅಂಶಗಳ ನೋಟ:
ಪರೀಕ್ಷೆಗೆ ಹಾಜರಾದ 8 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಲ್ಲಿ ಒಟ್ಟು 7,24,794 ಮಕ್ಕಳು ಯಶಸ್ವಿಯಾಗಿ ತೇರ್ಗಡೆಯಾಗಿದ್ದಾರೆ. ಮಾರ್ಚ್ 18 ರಿಂದ ಏಪ್ರಿಲ್ 2ರ ವರೆಗೆ ರಾಜ್ಯಾದ್ಯಂತ ಪರೀಕ್ಷೆಗಳು ನಡೆದಿದ್ದವು.
ಫಲಿತಾಂಶ ವೀಕ್ಷಿಸುವುದು ಹೇಗೆ?
ವಿದ್ಯಾರ್ಥಿಗಳು ಈ ಕೆಳಗಿನ ಅಧಿಕೃತ ವೆಬ್‌ಸೈಟ್‌ಗಳಲ್ಲಿ ತಮ್ಮ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕ ನಮೂದಿಸಿ ಫಲಿತಾಂಶ ವೀಕ್ಷಿಸಬಹುದು:
ಡಿಜಿಟಲ್ ಸೌಲಭ್ಯ:
ಈ ಬಾರಿ ಮಂಡಳಿಯು ವಿಶೇಷ ಕ್ರಮ ಕೈಗೊಂಡಿದ್ದು, ಫಲಿತಾಂಶ ಪ್ರಕಟವಾದ ತಕ್ಷಣವೇ ಡಿಜಿಲಾಕರ್ (DigiLocker) ನಲ್ಲಿ ಅಧಿಕೃತ ಅಂಕಪಟ್ಟಿ ಲಭ್ಯವಾಗುವಂತೆ ಮಾಡಿದೆ. ಜೊತೆಗೆ ವಿದ್ಯಾರ್ಥಿಗಳ ನೋಂದಾಯಿತ ಮೊಬೈಲ್ ಸಂಖ್ಯೆಗೆ ಎಸ್‌ಎಂಎಸ್ ಮತ್ತು ವಾಟ್ಸಾಪ್ ಮೂಲಕವೂ ಫಲಿತಾಂಶ ರವಾನಿಸಲಾಗಿದೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0