ಕೆಡಿಸಿಸಿ ಬ್ಯಾಂಕಿನ ಆಡಳಿತ ಮಂಡಳಿ ಚುನಾವಣೆ: 2 ನಾಮಪತ್ರಗಳು ತಿರಸ್ಕೃತ
ಪ್ರತಿಷ್ಠೆಯ ಕಣವಾಗಿರುವ ಕೆಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ಚುನಾವಣೆಗೆ ಸಂಬಂಧಿಸಿದಂತೆ 2 ನಾಮಪತ್ರಗಳು ತಿರಸ್ಕೃತಗೊಂಡಿದ್ದು, 44 ಅಭ್ಯರ್ಥಿಗಳ ನಾಮಪತ್ರ ಅಂಗೀಕಾರಗೊಂಡಿದೆ.

ಆಪ್ತ ನ್ಯೂಸ್ ಶಿರಸಿ:
ಪ್ರತಿಷ್ಠೆಯ ಕಣವಾಗಿರುವ ಕೆಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ಚುನಾವಣೆಗೆ ಸಂಬಂಧಿಸಿದಂತೆ 2 ನಾಮಪತ್ರಗಳು ತಿರಸ್ಕೃತಗೊಂಡಿದ್ದು, 44 ಅಭ್ಯರ್ಥಿಗಳ ನಾಮಪತ್ರ ಅಂಗೀಕಾರಗೊಂಡಿದೆ.
ಭಟ್ಕಳ ಮತ ಕ್ಷೇತ್ರದ ಮಾದೇವ ಗೋವಿಂದ ನಾಯ್ಕ ನಾಮಪತ್ರ ತಿರಸ್ಕಾರಗೊಂಡಿದ್ದರಿಂದ ಕೆಡಿಸಿಸಿ ಬ್ಯಾಂಕ ಆಡಳಿತ ಮಂಡಳಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಮಂಕಾಳ ವೈದ್ಯ ಬಹುತೇಕವಾಗಿ ಅವಿರೋದವಾಗಿ ಆಯ್ಕೆಯಾಗಿದ್ದಾರೆ ಎನ್ನಲಾಗುತ್ತಿದೆ.
ರಾಜ್ಯದ ಪ್ರತಿಷ್ಟಿತ ಮದ್ಯವರ್ತಿ ಬ್ಯಾಂಕ್ ಗಳಲ್ಲೊಂದಾಗಿರುವ ಉತ್ತರಕನ್ನಡ ಜಿಲ್ಲೆಯ ಕೆಡಿಸಿಸಿ ಬ್ಯಾಂಕಿನ ಆಡಳಿತ ಮಂಡಳಿಗೆ ಅಕ್ಟೋಬರ 25 ರಂದು ಚುನಾವಣೆ ನಿಗದಿ ಪಡಿಸಲಾಗಿದ್ದು ಈ ಬ್ಯಾಂಕಿನ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ಆಯ್ಕೆ ಬಯಸಿ 46 ಅಭ್ಯರ್ಥಿಗಳಿಂದ 87 ನಾಮಪತ್ರ ಸಲ್ಲಿಕೆಯಾಗಿತ್ತು.
ನಾಮಪತ್ರ ಪರಿಶೀಲನೆ ಮಾಡಿದ ಎಸಿ ಕು.ಕಾವ್ಯರಾಣಿ ಇವರು 2 ನಾಮಪತ್ರಗಳನ್ನು ತಿರಸ್ಕಾರಮಾಡಿದ್ದರಿಂದ 44 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಂತಾಗಿದೆ.
ಗಡಿಹಿತ್ಲು ಹಾಗೂ ಮಾದೇವ ನಾಯ್ಕ ನಾಮಪತ್ರ ತಿರಸ್ಕೃತ
ಸಿದ್ದಾಪುರ ಮತ ಕ್ಷೇತ್ರದಿಂದ ನಾಮಪತ್ರ ಸಿಲ್ಲಿಸಿದ್ದ ವಿವೇಕ ಭಟ್ ಗಡಿಹಿತ್ಲ ಹಾಗು ಭಟ್ಕಳ ಮತ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದ ಮಾದೇವ ಗೋವಿಂದ ನಾಯ್ಕ ಇವರ ನಾಮಪತ್ರ ತಿರಸ್ಕ್ರತಗೊಂಡಿದೆ.
ನಾಳೆ (ಅ,19) ನಾಮಪತ್ರ ಹಿಂಪಡೆಯುವ ದಿನವಾಗಿದ್ದು, ಯಾರೆಲ್ಲ ನಾಮಪತ್ರ ವಾಪಾಸ್ ಪಡೆಯುತ್ತಾರೆ ಎನ್ನುವುದು ಬಹಳ ಕುತೂಹಲವನ್ನು ಹುಟ್ಟುಹಾಕಿದೆ. ನಾಮಪತ್ರ ವಾಪಾಸ್ ಪಡೆಯುವಂತೆ ತೆರೆಮರೆಯ ಕಸರತ್ತು ಕೂಡ ಶುರುವಾಗಿದೆ.
What's Your Reaction?






