ಕೆಡಿಸಿಸಿ ಚುನಾವಣೆ ಫಲಿತಾಂಶ: ಭರ್ಜರಿ ಜಯ ಸಾಧಿಸಿದ ಹಮ್ಮಣ್ಣ ನಾಯ್ಕ್
ಆಪ್ತ ನ್ಯೂಸ್ ಶಿರಸಿ:
ಕೆಡಿಸಿಸಿ ಬ್ಯಾಂಕ್ ಚುನಾವಣೆ ಫಲಿತಾಂಶ ಒಂದೊಂದಾಗಿ ಹೊರಬೀಳುತ್ತಿದ್ದು, ಶಿವರಾಂ ಹೆಬ್ಬಾರ್ ಬಣದ 10 ಜನ ಹಾಗೂ ಮಾಂಕಾಳ್ ವೈದ್ಯ ಬಣದ 3 ಜನರು ಜಯ ಸಾಧಿಸಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ. ಇನ್ನೂ ಮೂರು ಸ್ಥಾನಗಳ ಫಲಿತಾಂಶ ಬಾಕಿ ಇದೆ.
ಮುಂಡಗೋಡ ತಾಲೂಕಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮತಕ್ಷೇತ್ರದಿಂದ ಸ್ಪರ್ಧಿಸಿದ ಶಾಸಕ ಶಿವರಾಮ ಹೆಬ್ಬಾರ್ ಬಣದ ಹಿರಿಯ ಸಹಕಾರಿ ಧುರೀಣರಾದ ಎಚ್.ಎಂ.ನಾಯ್ಕ (ಹಮ್ಮಣ್ಣ ಮಹಾಬಲ ನಾಯ್ಕ) ಭರ್ಜರಿ ಜಯ ಸಾಧಿಸಿದ್ದಾರೆ.
ಎಚ್.ಎಂ.ನಾಯ್ಕ 8 ಮತ ಪಡೆದರೆ, ಅವರ ಪ್ರತಿಸ್ಪರ್ಧಿ ಎಲ್.ಟಿ.ಪಾಟೀಲ 5 ಮತ ಪಡೆದರು. ಎಚ್.ಎಮ್.ನಾಯ್ಕ ಅವರು ಕೆ.ಡಿ.ಸಿ.ಸಿ. ಬ್ಯಾಂಕ ನಿರ್ದೇಶಕರಾಗಿರುವುದು ಇದು ಮೂರನೇ ಬಾರಿ ಎನ್ನುವುದು ವಿಶೇಷ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
1



