ಕೆಡಿಸಿಸಿ ಚುನಾವಣೆ ಆರಂಭ : ರಂಗೇರುತ್ತಿದೆ ಎಪಿಎಂಸಿ ಅಂಗಣ
ಆಪ್ತ ನ್ಯೂಸ್ ಶಿರಸಿ:
ಶಾಸಕ ಶಿವರಾಂ ಹೆಬ್ಬಾರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಇವರ ನಡುವೆ ಪ್ರತಿಷ್ಠೆಯ ಕಣವಾಗಿ ಮಾರ್ಪಾಡಾಗಿರುವ ಕೆಡಿಸಿಸಿ ಬ್ಯಾಂಕ್ ಚುನಾವಣೆ ಇಂದು ನಡೆಯುತ್ತಿದ್ದು ಬಿಗಿ ಬಂದೋಬಸ್ತ್ ಮಾಡಲಾಗಿದೆ. ಜಿದ್ದಾಜಿದ್ದಿನ ಕಣವಾಗಿ ಮಾರ್ಪಾಡಾಗಿರುವ ಕೆಡಿಸಿಸಿ ಬ್ಯಾಂಕ್ ಚುನಾವಣೆ ಶುರುವಾಗಿದೆ.
ಕೆಡಿಸಿಸಿ ಬ್ಯಾಂಕಿನ ಪ್ರಧಾನ ಕಚೇರಿ ಶಿರಸಿಯ ಎಪಿಎಂಸಿ ಆವರಣದಲ್ಲಿದೆ. ಇಲ್ಲಿಯೇ ಮತದಾನ ನಡೆಯುತ್ತಿರುವುದರಿಂದ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಕೆಡಿಸಿಸಿ ಬ್ಯಾಂಕಿನ 100 ಮೀಟರ್ ಆವರಣದಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಪೋಲೀಸರ ಬಿಗಿಭದ್ರತೆ ಎಲ್ಲೆಡೆ ಇದ್ದು ಡಿವಾಯಸ್ಪಿ ಗೀತಾ ಪಾಟಿಲ್ ವಿಶೇಷ ನಿಗಾ ವಹಿಸಿದ್ದಾರೆ.
ಸಹಾಯಕ ಆಯುಕ್ತರು ಹಾಗು ಚುನಾವಣಾಧಿಕಾರಿಗಳಾದ ಕು.ಕಾವ್ಯರಾಣಿಯವರ ಚುನಾವಣಾ ಕಾರ್ಯ ಕೈಗೊಳ್ಳುತ್ತಿದ್ದಾರೆ. ಚುನಾವಣೆ ನಿಧಾನವಾಗಿ ರಂಗೇರುತ್ತಿದ್ದು, ಎಪಿಎಂಸಿ ಆವರಣದಲ್ಲಿ ಅಭ್ಯರ್ಥಿಗಳ ಬೆಂಬಲಿಗರು ತುಂಬಿಕೊಂಡಿದ್ದಾರೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
1



