ಚೀನಾದಲ್ಲಿ ನಡೆದಿತ್ತೇ ತಾಷ್ಕೆಂಟ್ ರೀತಿಯ ಮಹಾಸಂಚು! ಪುಟಿನ್ ಮಾಡಿದ ಆ ಕಾರ್ಯಕ್ಕೆ ಹೇಳಲೇಬೇಕು ಸಲಾಂ!!
ತಾಷ್ಕೆಂಟ್ ಘಟನೆ ಭಾರತೀಯರಿಗೆಲ್ಲ ನೆನಪಿದೆ. ತಾಷ್ಕೆಂಟ್ ಘಟನೆಯಲ್ಲಿ ಭಾರತದ ಧೀಮಂತ ಪ್ರಧಾನಿ ಲಾಲ್ ಬಹಾದೂರ್ ಶಾಸ್ತ್ರೀ ಅವರನ್ನು ಕಳೆದುಕೊಂಡಿದ್ದು ನೆನಪಿನಲ್ಲೇ ಇದೆ. ಇಂತದ್ದೇ ಒಂದು ಮಹಾಸಂಚು ಚೀನಾದಲ್ಲಿ ನಡೆದಿತ್ತೇ ಎನ್ನುವ ಚರ್ಚೆಯೊಂದು ಇದೀಗ ಮುನ್ನೆಲೆಗೆ ಬಂದಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ರಕ್ಷಣೆ ಮಾಡಿದರೇ? ಎನ್ನುವ ಮಾತುಗಳೂ ಕೇಳಿ ಬಂದಿದೆ
ಆಪ್ತ ವಿಶೇಷ:
ತಲೆ ಬರಹ ನೋಡಿ ಹೌಹಾರಬೇಡಿ!
ಇಂತದ್ದೊಂದು ಮಹಾ ಸಂಚಿನ ಕುರಿತು ಇದೀಗ ಚರ್ಚೆ ನಡೆಯುತ್ತಿದೆ.
ತಾಷ್ಕೆಂಟ್ ಘಟನೆ ಭಾರತೀಯರಿಗೆಲ್ಲ ನೆನಪಿದೆ. ತಾಷ್ಕೆಂಟ್ ಘಟನೆಯಲ್ಲಿ ಭಾರತದ ಧೀಮಂತ ಪ್ರಧಾನಿ ಲಾಲ್ ಬಹಾದೂರ್ ಶಾಸ್ತ್ರೀ ಅವರನ್ನು ಕಳೆದುಕೊಂಡಿದ್ದು ನೆನಪಿನಲ್ಲೇ ಇದೆ. ಇಂತದ್ದೇ ಒಂದು ಮಹಾಸಂಚು ಚೀನಾದಲ್ಲಿ ನಡೆದಿತ್ತೇ ಎನ್ನುವ ಚರ್ಚೆಯೊಂದು ಇದೀಗ ಮುನ್ನೆಲೆಗೆ ಬಂದಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಪ್ರಧಾನಿ ನರೇಂದ್ರ ಮೋದಿ ಅವರನ್ನು ರಕ್ಷಣೆ ಮಾಡಿದರೇ? ಎನ್ನುವ ಮಾತುಗಳೂ ಕೇಳಿ ಬಂದಿದೆ
ಈ ಕುರಿತು ಮೀರಾ ಶರ್ಮ ಎನ್ನುವವರು ಬರೆದಿರುವುದು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.!
ಜಗತ್ತಿನ ಅಂಗಳದಲ್ಲಿ ರಾಜಕೀಯ ಹೆಜ್ಜೆಗಳು ಯಾವಾಗ ಬದಲಾಗುತ್ತವೆ ಎನ್ನುವುದು ಹೇಳಲು ಕಷ್ಟ. ಇತಿಹಾಸವನ್ನು ಬರೆಯುವ, ಇತಿಹಾಸವನ್ನು ಬದಲಾಯಿಸುವ ಅನೇಕ ಘಟನೆಗಳು ಅಂತರರಾಷ್ಟ್ರೀಯ ರಾಜತಾಂತ್ರಿಕ ವೇದಿಕೆಯಲ್ಲಿ ಸಂಭವಿಸುತ್ತವೆ.
ಕಳೆದ ತಿಂಗಳು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು SCO (ಶಾಂಘೈ ಸಹಕಾರ ಸಂಸ್ಥೆ) ಯಲ್ಲಿ ಪಾಲ್ಗೊಂಡಿರುವುದು ಎಲ್ಲರಿಗೂ ತಿಳಿದೇ ಇದೆ. ಆ ವೇಳೆ ನಡೆದ ಘಟನೆಯೊಂದು ಎಲ್ಲರನ್ನು ಹುಬ್ಬೇರಿಸಿತ್ತು.
SCO (ಶಾಂಘೈ ಸಹಕಾರ ಸಂಸ್ಥೆ) ನಡುವೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪ್ರಧಾನಿ ನರೇಂದ್ರ ಮೋದಿಯವರಿಗೆ ವೈಯಕ್ತಿಕವಾಗಿ ಕರೆ ಮಾಡಿ ತಮ್ಮ ಕಾರಿನಲ್ಲಿ ಅವರೊಂದಿಗೆ ಬರುವಂತೆ ವಿನಂತಿಸಿಕೊಂಡರು. ಇದು ಬಹುತೇಕ ಅಚ್ಚರಿಯ ನಡೆಯಾಗಿತ್ತು.
ವಿಶ್ವದ ಅತ್ಯಂತ ಪ್ರಭಾವಿ ಶಕ್ತಿಗಳಲ್ಲಿ ಒಬ್ಬರಾದ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ವಾಸ್ತವ್ಯ ಮಾಡಿದ್ದ ಹೋಟೆಲ್ ಹೊರಗೆ ಸುಮಾರು 15 ನಿಮಿಷಗಳ ಕಾಲ ಕಾರಿನಲ್ಲಿಯೇ ಕಾಯುತ್ತಿದ್ದರು. ಯಾವುದೇ ದೇಶದ, ಅದರಲ್ಲಿಯೂ ವಿಶ್ವದ ಪ್ರಭಾವಿ ದೇಶದ ಅಧ್ಯಕ್ಷರಾದವರು ಹೀಗೆ ಮಾಡುವುದು ಸಾಧ್ಯವೇ ಇಲ್ಲ. ಆದರೂ ಪುಟಿನ್ ಹೀಗೆ ಮಾಡಿದರು ಎಂದರೆ ಅದಕ್ಕೇನೋ ಬಲವಾದ ಕಾರಣವೆ ಇರಬೇಕು!
SCO ನಂತಹ ಸಭೆಗಳನ್ನು ನಿಮಿಷದಿಂದ ನಿಮಿಷಕ್ಕೆ ನಿಗದಿಪಡಿಸಲಾಗುತ್ತದೆ, ಆದರೆ ಪುಟಿನ್ ಅವರ ನಡವಳಿಕೆಯು ನಿರ್ದಿಷ್ಟ ಉದ್ದೇಶ ಅಥವಾ ಸಂಕೇತವನ್ನು ಸೂಚಿಸುವಂತೆ ತೋರುತ್ತದೆ. ಯಾವುದೊ ಮಾಹಿತಿ ಪಡೆದ ಪುಟಿನ್ ಈ ರೀತಿ ಮಾಡಿದರು ಎನ್ನುವ ಮಾತುಗಳು ಇದೀಗ ಅಂತಾರಾಷ್ಟ್ರೀಯ ರಾಜಕೀಯ ವಲಯದಿಂದ ಕೇಳಿ ಬಂದಿದೆ. ಇಷ್ಟೇ ಅಲ್ಲ, ಪುಟಿನ್ ಅವರ ಕಾರು 30 ನಿಮಿಷಗಳ ಕಾಲ ಮೋದಿ ಅವರು ಇದ್ದ ಹೋಟೆಲ್ ಬಳಿ ಇತ್ತು. ಪ್ರತಿಯೊಂದು ಸಮಯದಲ್ಲಿಯೂ ಶಿಷ್ಟಾಚಾರವೇ ಮುಖ್ಯವಾಗಿರುವಾಗ ಇಂತಹ ನಡವಳಿಕೆಗಳು ಏನೋ ವಿಶೇಷ ಅಥವಾ ಇನ್ಯಾವುದೋ ಘಟನೆಗಳ ಬಗ್ಗೆ ಸಾಕಷ್ಟು ಪ್ರಶ್ನೆಗಳನ್ನು ಎಬ್ಬಿಸುತ್ತವೆ.
ನಂತರ ನರೇಂದ್ರ ಮೋದಿ ಅವರು ಪುಟಿನ್ ಅವರ ಕಾರಿನಲ್ಲಿ ಶೃಂಗ ಸಭೆಗೆ ತೆರಳಿದರು. ಆ ಸಂದರ್ಭದ ಫೋಟೋಗಳು ವೈರಲ್ ಆದವು. ಕಾರಿನಲ್ಲಿ ಇಬ್ಬರು ನಾಯಕರು ವಿಶ್ವದ ಘಟನೆಗಳ ಬಗ್ಗೆ ಚರ್ಚೆ ನಡೆಸಿದರು ಎನ್ನುವುದೆಲ್ಲ ವರದಿಯಾದವು. ಅಸಾಮಾನ್ಯ ಘಟನೆ ಎಂದೇ ಮಾಧ್ಯಮಗಳಲ್ಲಿ ವರದಿಯಾಯಿತು. ಆದರೆ ಇದರ ಬೆನ್ನಲ್ಲೇ ತೆರೆ ಮರೆಯ ಹಿಂದೆ ಇನ್ನೇನೋ ನಡೆದಿತ್ತು ಎನ್ನುವುದನ್ನು ಬಲವಾಗಿ ತಿಳಿಸುತ್ತಿದೆ.
ಕಾರಿನಲ್ಲಿ ಮೋದಿ ಹಾಗೂ ಪುಟಿನ್ ಅವರು ಕುಳಿತಿದ್ದ ಫೋಟೋವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅವರ ಮುಖಗಳಲ್ಲಿ ಆಳವಾದ, ಚಿಂತನಶೀಲ ಗಂಭೀರತೆ ಸ್ಪಷ್ಟವಾಗಿ ಕಾಣುತ್ತದೆ. ಇನ್ನು ವಿಶೇಷ ಅಂದರೆ ಶೃಂಗ ಸಭೆಯಲ್ಲಿ ಪಾಲ್ಗೊಂಡ ನಂತರ ಪ್ರಧಾನಿ ಮೋದಿ ತಾವು ವಾಸ್ತವ್ಯ ಮಾಡಿದ್ದ ಆ ಹೋಟೆಲ್‌ಗೆ ಹಿಂತಿರುಗಲೇ ಇಲ್ಲ.
ಮರುದಿನ ನಡೆದ ವಿಚಾರ ಸಂಕಿರಣದಲ್ಲಿ, ಪ್ರಧಾನಿ ಮೋದಿ ಅವರು ತಮಾಷೆ ಮಾಡುತ್ತಲೇ, "ನೀವು ಯಾರಿಗಾಗಿ ಚಪ್ಪಾಳೆ ತಟ್ಟುತ್ತಿದ್ದೀರಿ? ನಾನು ಹೋಗಿದ್ದಕ್ಕೋ ಅಥವಾ ನಾನು ಸುರಕ್ಷಿತವಾಗಿ ಹಿಂತಿರುಗಿದ್ದಕ್ಕೋ?" ಎಂದು ಕೇಳಿದರು. ಇದು ಆ ಕ್ಷಣದಲ್ಲಿ ತಮಾಷೆಯ ಮಾತುಗಳು ಅಥವಾ ಸರಳವಾಗಿ ಹೇಳಿದರು ಎನ್ನಿಸಿಕೊಂಡರೂ ಆ ನಂತರದಲ್ಲಿ ಇದರ ಹಿಂದಿರುವ ಗೂಢಾರ್ಥದ ಕುರಿತು ಚರ್ಚೆಗಳಿಗೆ ಕಾರಣವಾಗಿದೆ. ಆ ದಿನ, ಆ ಕ್ಷಣ ಹೋಟೆಲಿನಲ್ಲಿ ಏನೋ ನಡೆಯುವುದಿತ್ತು, ಯಾರೋ ಏನೋ ಮಾಡಲಿದ್ದರು, ಆದರೆ ಪುಟಿನ್ ಅಂದು ಅದನ್ನು ತಪ್ಪಿಸಿದರು ಎನ್ನುವ ರೀತಿಯಲ್ಲಿ ಮಾತುಗಳು ಹರಿದಾಡಲಾರಂಭಿಸಿದೆ.
ಇದೆಲ್ಲ ಆ ಕಡೆ ಇರಲಿ, ಈ ಘಟನೆ ನಡೆದ ಎಷ್ಟೋ ದಿನಗಳ ನಂತರ ನಮ್ಮದೇ ಪಕ್ಕದ ದೇಶ ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿರುವ ಪ್ರತಿಷ್ಠಿತ ಹೋಟೆಲ್‌ನಲ್ಲಿ ಅಮೆರಿಕದ ಹಿರಿಯ ವಿಶೇಷ ಪಡೆಗಳ ಅಧಿಕಾರಿಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಅದರ ಬೆನ್ನಲ್ಲಿಯೇ ಅಮೆರಿಕ ರಾಯಭಾರ ಕಚೇರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸ್ಥಳೀಯ ಪೊಲೀಸರಿಗೆ ತಿಳಿಸುವ ಮೊದಲೇ ಶವವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡು ತೆರಳಿರುವುದಾಗಿ ವರದಿಯಾಗಿದೆ.
ಅಸಹಜ ಸಾವುಗಳು ಸಂಭವಿಸಿದಾಗ ನಡೆಯುವಂತಹ ಮರಣೋತ್ತರ ಪರೀಕ್ಷೆ ನಡೆಯಲಿಲ್ಲ. ಜೊತೆಗೆ ಸಾರ್ವಜನಿಕ ತನಿಖೆ ಕೂಡ ನಡೆಯಲಿಲ್ಲ ಎನ್ನುವುದು ವಿಶೇಷ. ಯಾವ ಕಾರಣಕ್ಕಾಗಿ ಇಷ್ಟೆಲ್ಲ ಗೌಪ್ಯತೆ? ಅಷ್ಟೆಲ್ಲ ಅರ್ಜೆಂಟ್ ಆಗಿ ರಾಜತಾಂತ್ರಿಕ ಪ್ರಕ್ರಿಯೆ ಕೈಗೊಳ್ಳಲು ಅಂತದ್ದೇನು ಕಾರಣ ಇರಬಹುದು? ಹೀಗೆ ಹಲವು ಪ್ರಶ್ನೆಗಳು ಎದ್ದಿವೆ.
ಇದರ ಬೆನ್ನಲ್ಲಿಯೇ ವಿಶೇಷಕರು ಹಲವು ಸಂಗತಿಗಳ ಕುರಿತು ವಿಶ್ಲೇಷಣೆ ನಡೆಸುತ್ತಿದ್ದಾರೆ. ಈಗ ಮೊದಲಿನ ವಿಷಯಕ್ಕೆ ಬರೋಣ. ಈ SCO ಶೃಂಗಸಭೆ ಯಾರು ಆಯೋಜಿಸಿದರು? ಚೀನಾ. SCO ಶೃಂಗಸಭೆ ನಡೆದಿದ್ದು ಎಲ್ಲಿ? ಅದೂ ಚೀನಾದಲ್ಲಿ. ಅಲ್ಲಿ ಏನಾದರೂ ಅಹಿತಕರ ಘಟನೆ ನಡೆದಿದ್ದರೆ ಏನಾಗುತ್ತಿತ್ತು? ಸಹಜವಾಗಿಯೇ ಚೀನಾ ಹೊಣೆಗಾರನಾಗುತ್ತಿತ್ತು. ಆರೋಪ ಯಾರ ಮೇಲೆ ಬರುತ್ತಿತ್ತು? ಚೀನಾ ಮೇಲೆ ಬರುತ್ತಿತ್ತು. ಹೀಗೆ ಆರೋಪ ಬಂದ ನಂತರ ಏನಾಗುತ್ತಿತ್ತು? ಅದಕ್ಕೂ ಉತ್ತರ ಸರಳ. ಇಷ್ಟು ಆದ ನಂತರ ಲಾಭ ಯಾರಿಗೆ ಆಗುತ್ತಿತ್ತು ಅಂತೀರಾ? ಉತ್ತರ ನಿಮಗೆ ಬಿಟ್ಟಿದ್ದು!
೧೯೬೬ ರಲ್ಲಿ ತಾಷ್ಕೆಂಟ್‌ನಲ್ಲಿ ಆಗಿನ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ನಿಗೂಢ ಮರಣ ಹೊಂದಿದ್ದು ನಮಗೆ ಇನ್ನು ಮರೆತಿಲ್ಲ. ಆಗ ತಾಷ್ಕೆಂಟ್‌ನಲ್ಲಿ ರಷ್ಯಾ ಆಡಳಿತ ಇದ್ದ ಕಾರಣ ಇಂದಿಗೂ ಶಾಸ್ತ್ರೀ ಹತ್ಯೆ ಹಿಂದೆ ರಷ್ಯಾ ಇದೆ, ಕೆಜಿಬಿ (ರಷ್ಯಾ ಗುಪ್ತಚರ ಸಂಸ್ಥೆ) ಇದೆ ಎನ್ನುವ ಆರೋಪಗಳಿವೆ. ಈಗ ಅಂತಹ ಘಟನೆ ನಡೆದರೆ ಖಂಡಿತವಾಗಿಯೂ ಅದರ ಆರೋಪ ಚೀನಾ ಮೇಲೆ ಬರುತ್ತಿತ್ತು. ಆದರೆ ಅಲ್ಲಿ ಆಗಿದ್ದೆ ಬೇರೆ!
ಪಾಶ್ಚಿಮಾತ್ಯ ಶಕ್ತಿಗಳು ಅಮೇರಿಕಾದ ಸಿಐಎ ಜತೆ ಸೇರಿ "ತಾಷ್ಕೆಂಟ್ " ಮಾದರಿಯ ಯೋಜನೆ ರೂಪಿಸಿತ್ತು ಎನ್ನಲಾಗುತ್ತಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನೇ ಗುರಿಯಾಗಿ ಇರಿಸಿಕೊಳ್ಳಲಾಗಿತ್ತು ಎಂದೂ ಹೇಳಲಾಗುತ್ತಿದೆ. ಆದರೆ ರಷ್ಯಾದ ಎಫ್‌ಎಸ್‌ಬಿ (ಹಿಂದೆ ಕೆಜಿಬಿ) ಮತ್ತು ಭಾರತದ ರಾ ಒಟ್ಟಾಗಿ ಈ ಪಿತೂರಿಯನ್ನು ವಿಫಲಗೊಳಿಸಿದವು ಎನ್ನುವ ಮಾತೂ ಕೇಳಿ ಬಂದಿದೆ. ಕೊನೆಯ ಕ್ಷಣದಲ್ಲಿ ರಾಜತಾಂತ್ರಿಕ ಬೆಳವಣಿಗೆಗಳು ನಡೆದು ಪಾಶ್ಚಿಮಾತ್ಯ ಶಕ್ತಿಗಳು ಹಾಗೂ ಸಿಐಎ ಕಾರ್ಯಯೋಜನೆಯನ್ನು ಬುಡಮೇಲು ಮಾಡಿತು ಎನ್ನುವ ಮಾತುಗಳು ಕೇಳಿ ಬಂದಿದೆ.
ಅಧ್ಯಕ್ಷ ಪುಟಿನ್ ಅವರ ಈ ನಡೆಯಿಂದಾಗಿ ಭಾರತದ ನಾಯಕತ್ವವನ್ನು ಸಂಭಾವ್ಯ ಅಪಾಯದಿಂದ ರಕ್ಷಿಸಿತು ಎಂದು ವಿಶ್ಲೇಷಿಸಲಾಗುತ್ತಿದೆ. ಜಾಗತಿಕ ರಾಜಕೀಯವು ಹೊಸ ಸಮೀಕರಣಗಳ ಕಡೆಗೆ ಬದಲಾಗುತ್ತಿರುವುದು ಇದರಿಂದಾಗಿ ಗೋಚರವಾಗುತ್ತಿದೆ. ಭಾರತ ಮತ್ತು ರಷ್ಯಾ ನಡುವಿನ ಈ ನಂಬಿಕೆ ಆಧಾರಿತ ಸಂಬಂಧವು ಎಂದಿಗಿಂತಲೂ ಬಲವಾಗಿರುವುದನ್ನು ಇದು ಪ್ರತಿನಿಧಿಸುತ್ತದೆ.
ಒಟ್ಟಿನಲ್ಲಿ ಭಾರತೀಯರಿಗೆ ಎದುರಾಗಬಹುದಾಗಿದ್ದ ಆಘಾತವನ್ನು ರಷ್ಯಾ ಅಧ್ಯಕ್ಷರು ತಪ್ಪಿಸಿದರು ಎನ್ನಬಹುದು. ಇನ್ನೊಂದು ತಾಷ್ಕೆಂಟ್ ಘಟನೆಯನ್ನು ರಷ್ಯಾ ಹಾಗೂ ಭಾರತದ ಗುಪ್ತಚರ ಸಂಸ್ಥೆ ತಡೆಯಿತು ಎನ್ನಬಹುದು.
What's Your Reaction?
Like
3
Dislike
0
Love
0
Funny
0
Angry
1
Sad
0
Wow
0



