ಮತ್ತೇ ನೋಟೀಸ್, ಆತಂಕದಲ್ಲಿ ಅತಿಕ್ರಮಣದಾರರು: ಒಕ್ಕಲೆಬ್ಬಿಸುವುದಾದರೇ, ನಮ್ಮನ್ನು ಕರೆದುಕೊಂಡು ಹೋಗಿ ಸಾಕಲಿ - ಸಂತ್ರಸ್ಥರ ನೋವಿನ ಮಾತು.
ಆಪ್ತ ನ್ಯೂಸ್ ಸಿದ್ದಾಪುರ:
ತಲೆ, ತಲಾಂತರದಿಂದ ಸಾಗುವಳಿ ಮಾಡಿದ ಅರಣ್ಯ ಭೂಮಿಯಿಂದ ಒಕ್ಕಲೆಬ್ಬಿಸುತ್ತಾರೆೆ ಅಂತ ಅಂದಮೇಲೆ, ನಮಗೆ ವಯಸ್ಸು ಆಗಿದೆ, ನಮ್ಮ ಭೂಮಿ ಅಲ್ಲಾ, ನಮ್ಮ ಜೀವ ಸಹಿತ ತೆಗೆದುಕೊಂಡು ಹೋಗಲಿ. ಹೇಗಿದ್ದರೂ ನಮಗೆ ಈ ಭೂಮಿ ಮೇಲೆ ಬದುಕಲು ಅವಕಾಶವಿಲ್ಲ ಅಂತ ಆಯಿತು ಎಂಬ ನೋವಿನ ಮಾತು ಒಕ್ಕಲೆಬ್ಬಿಸಲು ನೀಡದ ನೋಟಿಸ್ ಗೆ ಅರಣ್ಯವಾಸಿಯ ವಿಷಾದದ ಮಾತು.
ವಲಯ ಅರಣ್ಯಾಧಿಕಾರಿ ಕಛೇರಿ ಕ್ಯಾದಗಿ ವಲಯದಿಂದ ಕ್ಯಾದಗಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾವಿನಕೊಡ ಗ್ರಾಮದ ರಾಮಚಂದ್ರ ತಿಮ್ಮ ನಾಯ್ಕ ಬಿಳ್ಳುಮನೆ ಅವರಿಗೆ ಸಾಗುವಳಿ ಕ್ಷೇತ್ರದಿಂದ ಒಕ್ಕಲೆಬ್ಬಿಸಬೇಕೆಂಬ ನೋಟಿಸ್ ಬಂದಿರುವ ಹಿನ್ನಲೆಯಲ್ಲಿ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಪ್ರಧಾನ ಸಂಚಾಲಕ ಮಾಬ್ಲೇಶ್ವರ ನಾಯ್ಕ ಬೇಡ್ಕಣಿ ಅವರ ನೇತೃತ್ವದಲ್ಲಿ ಭೇಟಿ ಆದಾಗ ಅವರು ಮೇಲಿನಂತೆ ವಿಷಾದ ವ್ಯಕ್ತಪಡಿಸಿದರು.
ಜೀವನ ಪರ್ಯಂತ ಸಾಗುವಳಿ ಮಾಡಿದ ಕ್ಷೇತ್ರಕ್ಕೆ ಹಕ್ಕುದಾರ ಅಲ್ಲವೆಂದ ಮೇಲೆ ನನ್ನ ಜೀವ ಸಾಗುವಳಿ ಭೂಮಿಯಲ್ಲಿ ಇರಲು ಅರ್ಹತೆ ಇಲ್ಲದಂತಾಯಿತು. ಜೀವ ಅಸ್ಟೇ ಅಲ್ಲ ದೇಹವನ್ನು ತೆಗೆದುಕೊಂಡು ಹೋಗಲಿ ಅತ್ಯಂತ ದುಖಃದಿಂದ ನುಡಿದ ಮಾತುಗಳು ಇಂದಿನ ಅರಣ್ಯವಾಸಿಗಳ ಪರಿಸ್ಥಿತಿಗೆ ಉದಾಹರಣೆಯಾಗಿದೆ ಎಂದರೆ ತಪ್ಪಾಗಲಾರದು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ರಾಮಚಂದ್ರ ತಿಮ್ಮ ನಾಯ್ಕ ಬಿಳ್ಳುಮನೆ ಅವರು ಸಿದ್ದಾಪುರ ತಾಲೂಕಿನ ಮಾವಿನಕೊಡ್ ಗ್ರಾಮದ ಅರಣ್ಯ ಸರ್ವೇ ನಂ ೭೧ ರಲ್ಲಿ ಅನಾಧಿಕಾಲದಿಂದ ಮೂರು ಎಕರೆ ಪ್ರದೇಶವನ್ನು ಸಾಗುವಳಿ ಮಾಡಿಕೊಂಡು ಜೀವಿಸುತ್ತಿದ್ದರು. ಆದರೇ, ಕಾನೂನುಗಳ ಮಾಹಿತಿಯಿಂದ ಮತ್ತು ಮಾರ್ಗದರ್ಶನದ ಕೊರತೆಯಿಂದ ಅರಣ್ಯ ಕಾಯಿದೆ ಅಡಿಯಲ್ಲಿ ಅರಣ್ಯ ಇಲಾಖೆಯ ಪ್ರಾಧಿಕಾರದಲ್ಲಿ ಅನಧೀಕೃತ ಅರಣ್ಯ ಭೂಮಿ ಸಾಗುವಳಿದಾರರೆಂದು ತೀರ್ಮಾನಿಸಿ ಅವರನ್ನು ಒಕ್ಕಲೆಬ್ಬಿಸಲು ಆದೇಶವಾಗಿದ್ದು ಇರುತ್ತದೆ. ಈ ಹಿನ್ನಲೆಯಲ್ಲಿ ವಲಯ ಅರಣ್ಯ ಕಛೇರಿ ಕ್ಯಾದಗಿ ಅವರು ಡಿಸೆಂಬರ್ ೮, ೨೦೨೫ ರಂದು ನೋಟಿಸ್ ಮುಟ್ಟಿದ ಒಂದು ವಾರದ ಒಳಗೆ ಸಾಗುವಳಿ ಮತ್ತು ಮನೆ ಸಹಿತ ತೆರವು ಮಾಡಲು ನೋಟಿಸ್ ನೀಡಲಾಗಿತ್ತು. ಸಾಗುವಳಿ ಕ್ಷೇತ್ರದಲ್ಲಿ ೫೦-೬೦ ವರ್ಷದ ತೆಂಗು, ಅಡಿಕೆ ಮರಗಳು ಸಹಿತ ತೆರವುಗೊಳಿಸುವುದು ವಿಷಾಧಕರ ಎಂದು ಹೋರಾಟಗಾರರ ವೇದಿಕೆ ಪ್ರಕಟಣೆಯಲ್ಲಿ ತಿಳಿಸಿದೆ.
ಹೋರಾಟಗಾರರ ವೇದಿಕೆ ನಿಯೋಗದಲ್ಲಿ ಪ್ರಧಾನ ಸಂಚಾಲಕ ಮಾಬ್ಲೇಶ್ವರ ನಾಯ್ಕ, ಸಂಚಾಲಕ ಜಗದೀಶ್ ನಾಯ್ಕ, ರವಿ ನಾಯ್ಕ ಅರಳಿಮಕ್ಕಿ, ಚೌಡಾ ಗೌಡ ಕಿತ್ತಳ್ಳಿ, ಉಪಸ್ಥಿತರಿದ್ದರು.
ಅರಣ್ಯ ಇಲಾಖೆಯ ತಪ್ಪು ನೀತಿ:
ಅರಣ್ಯವಾಸಿಗಳ ಸಾಗುವಳಿ ಕ್ಷೇತ್ರಕ್ಕೆ ಸಂಭAದಿಸಿ ಅರಣ್ಯ ಇಲಾಖೆ ಅನುಸರಿಸುತ್ತೀರುವ ನೀತಿ, ನಿಯಮ ಮತ್ತು ಕ್ರಮ ಗೊಂದಲಮಯವಾಗಿದ್ದು ಮತ್ತು ಒಕ್ಕಲೆಬ್ಬಿಸುವ ಆದೇಶ ಮತ್ತು ಒಕ್ಕಲೆಬ್ಬಿಸುವಿಕೆಯು ಕಾನೂನು ವ್ಯಾಪ್ತಿಯಲ್ಲಿ ಅಸರ್ಮಪಕವಾಗಿರುವುದರಿಂದ ಅರಣ್ಯ ಅಧಿಕಾರಿಯೊಂದಿಗೆ ಚರ್ಚೆ ಅವಶ್ಯ ಹಾಗೂ ರಾಜ್ಯ ಸಕಾರದ ನಿರ್ಧೇಶನದ ವಿರುದ್ದ ಅರಣ್ಯ ಇಲಾಖೆ ಕಾರ್ಯ ನಿರ್ವಹಿಸುತ್ತೀರುವುದ ವಿಷಾಧಕರ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



