ಆನಂದಪುರ ಸಹಕಾರಿ ಸಂಘಕ್ಕೆ ರತ್ನಾಕರ ಹೊನಗೋಡ್ ಬೆಂಬಲಿತ ಅಭ್ಯರ್ಥಿಗಳು ಆಯ್ಕೆ
ಆಪ್ತ ನ್ಯೂಸ್ ಆನಂದಪುರ:
ಸ್ಥಳೀಯ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆಯಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ರತ್ನಾಕರ ಹೊನಗೋಡ್ ಬೆಂಬಲಿತ ಬಿಜೆಪಿ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.
ಶುಕ್ರವಾರ ನಡೆದ ಚುನಾವಣೆಯಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ರತ್ನಾಕರ ಹೊನಗೋಡು ಬೆಂಬಲಿತ ನಿರ್ದೇಶಕರಾದ ರತ್ನಾಕರಹೊನಗೋಡ್, ಮಂಜುಪ್ಪ ಮುರುಕಟ್ಟೆ, ಗುಡವಿ ಮಂಜಪ್ಪ, ಕರಿಯಮ್ಮ, ಯಶೋದಮ್ಮ, ಕೇಶವಮೂರ್ತಿ, ಜಗದೀಶ್, ಹೊಳೆಯಪ್ಪ, ಕೆ ಟಿ ತಿಮ್ಮೇಶ, ಕಾರೆ ಗಣಪತಿ, ಭೈರಪ್ಪ ಇವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಪರಿಶಿಷ್ಟ ಜಾತಿಯ ಮೀಸಲಾತಿ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಗುಡವಿ ಮಂಜಪ್ಪ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣಮೂರ್ತಿ ಸ್ಪರ್ಧೆ ಮಾಡಿ ಹೀನಾಯವಾಗಿ ಸೋಲನ್ನು ಅನುಭವಿಸಿದ್ದಾರೆ. ಗುಡವಿ ಮಂಜಪ್ಪ 27 ಮತಗಳನ್ನು ಪಡೆದಿದ್ದರೆ, ಕೃಷ್ಣಮೂರ್ತಿ 2 ಮತಗಳನ್ನು ಪಡೆದಿದ್ದಾರೆ. ಚುನಾವಣೆಯಲ್ಲಿ ಜಯಗಳಿಸಿದ ಗುಡುವಿ ಮಂಜಪ್ಪರವರಿಗೆ ಅಭಿನಂದಿಸಲಾಯಿತು.
ಚುನಾವಣೆಯಲ್ಲಿ ಜಯಗಳಿಸಿದ ಗುಡುವಿ ಮಂಜಪ್ಪ ರವರಿಗೆ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ರತ್ನಾಕರಹೊನಗೋಡ್ ಅಭಿನಂದಿಸಿ ಮಾತನಾಡಿ ಸಹಕಾರಿ ಸಂಘಗಳು ಉನ್ನತ ಸ್ಥಾನದಲ್ಲಿ ಬೆಳೆಯಬೇಕಾದರೆ ಸಂಬಂಧಪಟ್ಟ ಅಧಿಕಾರಿಗಳು ಹೆಚ್ಚಿನ ಮಹತ್ವವನ್ನು ಸಹಕಾರಿ ಸಂಘಗಳಿಗೆ ನೀಡಬೇಕು. ಸಹಕಾರಿ ಸಂಘದ ಅಧಿಕಾರಿಗಳು ಒಂದು ವರ್ಷದ ಹಿಂದೆಯೇ ಆನಂದಪುರ ಸಹಕಾರಿ ಸಂಘದ ಚುನಾವಣೆ ನಡೆಸಬೇಕಾಗಿತ್ತು. ಆದರೆ ಮೇಲ್ಮಟ್ಟದ ಆಡಳಿತದವರ ಮಾತನ್ನು ಕೇಳಿ ಸಹಕಾರಿ ಸಂಘವನ್ನು ಹಾಳು ಮಾಡುವ ಉದ್ದೇಶದಿಂದ ಈ ರೀತಿ ನಡೆದುಕೊಂಡಿದ್ದರು. ರೈತರ ಒತ್ತಡಕ್ಕೆ ಮಣಿದು ಚುನಾವಣೆ ನಡೆಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಹಾಪ್ ಕಾಮ್ಸ್ ನಿರ್ದೇಶಕ ನಾರಾಯಣಪ್ಪ, ಆನಂದಪುರ ಗ್ರಾಮ ಪಂಚಾಯತ್ ಸದಸ್ಯ ಮೋಹನ್ ಕುಮಾರ್, ಗೌತಮಪುರ ಗ್ರಾಮ ಪಂಚಾಯತ್ ಸದಸ್ಯ ಪರಮೇಶ್ ಕಣ್ಣೂರ್, ಮಂಜಪ್ಪ ಮುರುಕಟ್ಟೆ, ಹಾಗೂ ಇತರರು ಉಪಸ್ಥಿತರಿದ್ದರು.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0



