ಅ.24 ರಂದು ವಿಚಾರಗೋಷ್ಠಿ ಹಾಗೂ ಅಭಿನಂದನೆ ಕಾರ್ಯಕ್ರಮ

Oct 16, 2025 - 21:54
 0  23
ಅ.24 ರಂದು ವಿಚಾರಗೋಷ್ಠಿ ಹಾಗೂ ಅಭಿನಂದನೆ ಕಾರ್ಯಕ್ರಮ

ಆಪ್ತ ನ್ಯೂಸ್ ಯಲ್ಲಾಪುರ:
ರಂಗಸಮೂಹ ಮಂಚಿಕೇರಿ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಇವರ ಆಶ್ರಯದಲ್ಲಿ ವಿಚಾರಗೋಷ್ಠಿ ಹಾಗೂ ಅಭಿನಂದನೆ ಕಾರ್ಯಕ್ರಮವನ್ನು ಅ.24 ರಂದು ಮಧ್ಯಾಹ್ನ 3 ಕ್ಕೆ ಪಟ್ಟಣದ ಅಡಕೆ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ರಂಗಸಮೂಹದ ಅಧ್ಯಕ್ಷ ರಾಮಕೃಷ್ಣ ಭಟ್ಟ ದುಂಡಿ ತಿಳಿಸಿದರು.
ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಮ್ಮಲ್ಲಿಯ  ಪರಿಸರದ ಬಗ್ಗೆ ನಾವು ಜಾಗೃತಿ ಮೂಡಿಸಿ ಹಾನಿಯಾದಲ್ಲಿ ಮುಂದೆ ಅನುಭವಿಸಬಹುದಾದ ಪರಿಸ್ಥಿತಿಯ ಬಗ್ಗೆ ಸಾರ್ವಜನಿಕರಲ್ಲಿ ವಿವಿಧ ರೀತಿಯಲ್ಲಿ ಜಾಗೃತಿ ಮೂಡಿಸಬೇಕಾಗುತ್ತದೆ.ಮತ್ತು ವೈಚಾರಿಕವಾಗಿ ಆಗಾಗ ಎಚ್ಚರಿಸುತ್ತಾ ಇರುವ ಕೆಲಸವನ್ನು ರಂಗಸಮೂಹ ಸೇರಿದಂತೆ ಹಲವು ಸಂಘಸಂಸ್ಥೆಗಳವರು‌ಮಾಡುತ್ತಾ ಬಂದಿದ್ದಾರೆ.ಈ ಹಿನ್ಬೆಲೆಯಲ್ಲಿ ಪ್ರಸ್ತುತವಾಗಿ ಈ  ವಿಚಾರಗೋಷ್ಠಿ ಹಮ್ಮಿಕೊಂಡಿದ್ದು  ವನ್ಯಜೀವಿ ಸಂಘರ್ಷ ಹಾಗೂ ಕೃಷಿ ಬಗ್ಗೆ ಪರಿಸರ ಬರಹಗಾರ ಶಿವಾನಂದ ಕಳವೆ, ಸುಸ್ಥಿರ ಅಭಿವೃದ್ಧಿಯ ಭವಿಷ್ಯದ ಮಾದರಿಗಳು ಕುರಿತು ಸಂರಕ್ಷಣಾ ಜೀವಶಾಸ್ತ್ರಜ್ಞ ಡಾ.ಕೇಶವ ಕೊರ್ಸೆ ಶಿರಸಿ ವಿಷಯ ಮಂಡಿಸಲಿದ್ದಾರೆ. ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತರಾದ ಸಹನಾ ಬಾಳ್ಕಲ್, ಯಲ್ಲಾಪುರ ಎಸಿಎಫ್ ಹಿಮವತಿ ಭಟ್ಟ ಭಾಗವಹಿಸಲಿದ್ದಾರೆ.
ಸಂಕಲ್ಪ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ  ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ವಿವರಿಸಿದರು.
ಕಾರ್ಯಕ್ರಮ ಸಂಯೋಜಕ ನರಸಿಂಹ ಸಾತೊಡ್ಡಿ ಮಾತನಾಡಿ ಇದೇ ಸಂದರ್ಭದಲ್ಲಿ   ಭಾರತದ ಆಡಳಿತ ಸೇವೆಯ‌ ಲ್ಲಿ ದೇಶದಲ್ಲೇ ೩೦ ನೇ ರ್ಯಾಂಕ್ ಗಳಿಸಿ  ಭಾರತೀಯ ಅರಣ್ಯ ಸೇವೇಯ ಅಧಿಕಾರಿಯಾಗಿ (ಐ.ಎಫ್.ಎಸ್)  ಆಯ್ಕೆಯಾಗಿರುವ  ಸಧ್ಯ ಡೆಹ್ರಾಡೂನ್ ನಲ್ಲಿ ತರಬೇತಿಯಲ್ಲಿರುವ ನಮ್ಮ ತಾಲೂಕಿನ ಹೆಮ್ಮೆಯ ಸುಚೇತ್ ಬಾಳ್ಕಲ್ ಅವರನ್ನು ಸಂಘಟನೆಯ ವತಿಯಿಂದ  ಅಭಿನಂದಿಸಲಾಗುತ್ತದೆ. ರಂಗಕರ್ಮಿ ರಾಮಕೃಷ್ಣ ದುಂಡಿ ಕಾರ್ಯಕ್ರಮದ ಆಶಯ ಮತ್ತು ಅಭಿನಂದನಾ ನುಡಿಗಳನ್ನಾಡಲಿದ್ದಾರೆ ಎಂದು ತಿಳಿಸಿದರು. ತಾಲೂಕು ಕ.ಸಾ.ಪ ಅಧ್ಯಕ್ಷ ವಿದ್ವಾನ್ ಸುಬ್ರಹ್ಮಣ್ಯ ಭಟ್ಟ ಮಾತನಾಡಿ ಪರಿಸರ ಕುರಿತ ಚಿಂತನಗೋಷ್ಠಿ ಅಭಿನಂದನೆ,ಹಾಗೂ ನಾಗರೀಕ ಸೇವೆಯ ಕುರಿತಾದ ಮಾಹಿತಿ ಪಡೆಯಲು ಎಲ್ಲರೂ ಪಾಲ್ಗೊಳ್ಳುವಂತೆ ವಿನಂತಿಸಿದರು.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0