ಬಲಿಪಾಡ್ಯಮಿ ಆಚರಣೆ ಹಿಂದಿರುವ ಕಥೆಯೇನು? ಅಷ್ಟಕ್ಕೂ ಈ ಬಲಿ ಯಾರು? ಏತಕ್ಕೆ  ದೇವರನ್ನು ಈ ದಿನ ಪೂಜಿಸುತ್ತಾರೆ?

Oct 19, 2025 - 14:39
 0  38
ಬಲಿಪಾಡ್ಯಮಿ ಆಚರಣೆ ಹಿಂದಿರುವ ಕಥೆಯೇನು? ಅಷ್ಟಕ್ಕೂ ಈ ಬಲಿ ಯಾರು? ಏತಕ್ಕೆ  ದೇವರನ್ನು ಈ ದಿನ ಪೂಜಿಸುತ್ತಾರೆ?

✍️ ವಿನಯ್ ನಾಯ್ಕ್

**********

ಹಿಂದೂ ಧರ್ಮದಲ್ಲಿ ಪ್ರತಿಯೊಂದು ಹಬ್ಬಕ್ಕೂ ಅದರದ್ದೇ ಆದ ಸಾಕಷ್ಟು ಪೌರಾಣಿಕ ಕಥೆಗಳು ಇವೆ.ಹಿರಿಯರಿಗೆ ಅವುಗಳ ಆಚರಣೆ ಹಿಂದಿರುವ ಮಹತ್ವ ಗೊತ್ತು.ಆದರೆ ಇತ್ತೀಚಿನ ಜನರಿಗೆ ಹಬ್ಬ ಆಚರಿಸೋದು ಗೊತ್ತು ಹಿನ್ನೆಲೆ ಮಹತ್ವ ತಿಳಿದಿರುವುದಿಲ್ಲ.ಅಷ್ಟಕ್ಕೂ ದೀಪಾವಳಿ ಹಬ್ಬದ ಆಚರಣೆ ಸಂಧರ್ಭದಲ್ಲಿ ೪ ನೆಯ ದಿನ ಬಲಿ ಪಾಡ್ಯಮಿ ದಿನದ ವಿಶೇಷತೆ ಹಾಗೂ ಪುರಾಣಿಕ ಕಥೆ ತಿಳಿದು ತಿಳಿಯೋಣ.

ದೀಪಾವಳಿ ನಾಲ್ಕನೇ ದಿನ ಈ ಹಬ್ಬ ಆಚರಣೆ ಮಾಡುತ್ತಾರೆ. ಈ ದಿನ ಭಗವಾನ್ ವಿಷ್ಣು ವಾಮನ ರೂಪ ತಾಳಿ ಬಲಿಯ ಮೂರು ಹೆಜ್ಜೆಗಳನ್ನು ತೀರಿಸಿದ ವಿಜಯವನ್ನು ಸಂಕೇತಿಸುತ್ತದೆ.ಎಂಬ ಪುರಾಣಿಕ ಕಥೆ ಇದೆ.

ಒಮ್ಮೆ ಪ್ರಹ್ಲಾದ ಮೊಮ್ಮಗನಾದ ಅಸುರ ಕುಲದ "ಬಲಿ ಚಕ್ರವರ್ತಿ"ತಾನು ತನ್ನದು ಎಂಬ ಅಹಂಕಾರ ತುಂಬಿಕೊಂಡು ರಾಜ್ಯದಲ್ಲಿ ಮೆರೆಯುತ್ತಿದ್ದ.ಜೊತೆಗೆ ಈತ ಭಗವಾನ್ ವಿಷ್ಣುವಿನ ಪರಮ ಭಕ್ತನಾಗಿದ್ದ.ಒಳ್ಳೆಯ ಗುಣ,ಮಹಾದಾನಿ ಆಗಿದ್ದರೂ ಅಧಿಕಾರದ ನಶೆ ಹಿಡಿದು ದೇವಲೋಕವನ್ನ ತನ್ನ ವಶ ಮಾಡಿಕೊಳ್ಳಲು ಹೊರಟಿದ್ದ. ಈತನ ನಿರ್ಧಾರದಿಂದ ಭೂಲೋಕದಲ್ಲಿರುವ ದೇವತೆಗಳಿಗೆ ಭಯ ಶುರುವಾದವು.ದೇವತೆಗಳ ಪ್ರಾರ್ಥನೆಗೆ ಮೆಚ್ಚಿ ಭಗವಂತ ವಿಷ್ಣು ವಾಮನ ರೂಪ ತಾಳಿ ಬಾಲಿಯನ್ನು ಪಾತಾಳಕ್ಕೆ ತಳ್ಳುವ ಮೊದಲು ಬಲಿಗೆ ಒಂದು ವರವನ್ನು ಆತನಿಗೆ ಕೊಡುತ್ತಾನೆ. ಆ ಪ್ರಕಾರ ಬಲಿ ಪಾಡ್ಯಮಿ ದಿನ ಬಲಿ ಚಕ್ರವರ್ತಿ ಭೂಲೋಕಕ್ಕೆ ಬಂದು ತನ್ನ ಪ್ರಜೆಗಳು ಹೇಗಿದ್ದಾರೆ ಎಂದು ನೋಡಲು ಹೊರಡುತ್ತಾನೆ.ದೇವತೆಗಳ ತಾಯಿ ಅದಿತಿ ತನ್ನ ಮಕ್ಕಳು ರಾಕ್ಷಸರ ಕೈಗೆ ಸಿಲುಕಿದ್ದಾರೆ ಎಂಬ ಮಾತು ಕಷ್ಯಪರಿಗೆ(ಪತಿ) ಹೇಳುತ್ತಾಳೆ.ಭಗವಂತನಲ್ಲಿ ತನ್ನ ಮಕ್ಕಳನ್ನು ಕಾಪಾಡುವಂತೆ ಬೇಡಿಕೊಂಡಳು.
ಆ ಅಸುರರನ್ನು ಎದುರಿಸುವಂಥ ಶಕ್ತಿ ಶಾಲಿಯಾದ ಪುತ್ರ ಸಂತಾನ ನನಗೆ ಕುರಿಣಿಸು ಎಂದು ಪ್ರಾರ್ಥಿಸಿದಳು.ಮಹರ್ಷಿ ಕಶ್ಯಪರು ನೀನು ವೃತ ಮಾಡಿ ಭಗವಂತನನ್ನು ಧ್ಯಾನಿಸು ಎಂದು ಅದಿತಿಗೆ ಹೇಳುತ್ತಾರೆ.ಅದರಂತೆ ಅದಿತಿ ವೃತ ಮಾಡಿ ಭಗವಂತನನ್ನು ಧ್ಯಾನಿಸಿದಾಗ ಅವಳ ಭಕ್ತಿಗೆ ಮೆಚ್ಚಿ ಸಾಕ್ಷಾತ್ ಭಗವಂತನೇ ಪ್ರತ್ಯಕ್ಷನಾಗಿ,ಕೆಲವು ಕಾಲ ನಿನ್ನ ಮಗನಾಗಿ ನಿನ್ನ ಜೊತೆ ಇರುವೆ ಎನ್ನುವನು. ಈ  ವಿಷಯ ಯಾರಿಗೂ ತಿಳಿಸದೆ  ಗೌಪ್ಯವಾಗಿರಲಿ ಎಂದನು.

ಮಾರನೇ ದಿನ ಅದಿತಿ ಗರ್ಭ ಧರಿಸಿದಳು ಶಂಕ ಚಕ್ರ ಗಧಾಧಾರಿಯಾದ ಭಗವಂತನನ್ನ ಅದಿತಿ ಕಶ್ಯಪರಿಗೆ ಕಾಣಿಸಿದಳು.ನಂತರ ಮಗುವಾಗಿ ನೋಡುತ್ತಿದ್ದಂತೆ ಕುಳ್ಳನೆಯ ಪುಟ್ಟನೆ ಮುದ್ದಾದ ಥಳ ಥಳ ಹೊಳೆಯುವಂತ ಬಾಲಕನಾದ. ದೇವತೆಗಳು ಈ ಪುಟ್ಟ ಬಾಲಕನಿಗೆ ಉಪನಯನ ಮಾಡಲು ಅಣಿಯಾದರು.ಆತನಿಗೆ ಕಮಂಡಲ. ಕೋಲು, ಛತ್ರಿ," ಕಚ್ಚೆ ಪಂಚೆ ಉಡಿಸಿದರು.
ಗಾಯಂತ್ರಿ ಉಪದೇಶಿಸಿ ಅತ ವಾಮನ ವಟುವಾದ. ಬಲಿ ಚಕ್ರವರ್ತಿ ನಡೆಸುತ್ತಿದ್ದ ಅಶ್ವಮೇಧಯಾಗಕ್ಕೆ ಆಹ್ವಾನ ಇಲ್ಲದೆ ಬಂದನು.

ಈತನ ತೇಜಸ್ಸು, ವರ್ಚಸ್ಸು ಈ ಬಾಲಕನಲ್ಲಿ ಕಂಡು ಅಲ್ಲಿದ್ದವರೆಲ್ಲ ಬೆರಗಾದರು.ಅಲ್ಲಿಯೇ ಇದ್ದಂತಹ ಬಲಿ ಚಕ್ರವರ್ತಿ ಆತಿಥ್ಯ ಸತ್ಕಾರ ಮಾಡಿ ಬಾಲಕನ ಹತ್ತಿರ ಬಂದು ನಿಮಗೆ ಏನು ಬೇಕು?ಎಂದು ಕೇಳಿದನು.ನನಗೆ ಹೆಚ್ಚೇನೂ ಬೇಡ ಮೂರು ಹೆಜ್ಜೆ ಜಾಗ ಕೊಟ್ಟರೆ ಸಾಕು ಎಂದು ವಾಮನ ಹೇಳಿದ.ಮೂರು ಹೆಜ್ಜೆ ಇಷ್ಟೇ ಸಾಕೆ? ಎಂದನು ಬಲಿ ಚಕ್ರವರ್ತಿ.ನಾನು ಕೊಟ್ಟ ಧಾನ ಹಿಂಪಡೆಯುವುದಿಲ್ಲ ಉತ್ತರಿಸಿದ.ನಿಮ್ಮ ವಂಶದವರೆಲ್ಲ ಕೊಡುಗೈ ದಾನಿಗಳು ಎಂದನು. ಎಷ್ಟು ಕೇಳಿದರು ಅಷ್ಟನ್ನು ತೆಗೆದುಕೊಂಡರೆ ವಿಷಯವಾಗುತ್ತದೆ ಗಮನವಿರಲಿ ವಾಮನ
 ಮೂರ್ತಿ ಹೇಳಿದರು.

ಆ ಮೂರು ಹೆಜ್ಜೆ ಕೊಡಲು ಸಂಕಲ್ಪ ಮಾಡಿ ಅರ್ಘ್ಯ ನೀರನ್ನ ಕೆಳಕ್ಕೆ ಹಾಕಲು ಹೊರಟಾಗ ಅಸುರ ಕುಲದ ಶುಕ್ಲಾಚಾರ್ಯರು ಈತನಿಗೆ ದಾನ ಮಾಡೋದು ಬೇಡ ,ನಿನಗೆ ಮೋಸ ಮಾಡಲು ಸಾಕ್ಷಾತ್ ಭಗವಂತನೇ ಬಂದಿದ್ದಾನೆ ಎಂದರು. ಶುಕ್ಲ ಚಾರ್ಯರು ನಿಲ್ಲಿಸಲು ಪ್ರಯತ್ನ ಮಾಡಿದರು ಆದರೆ ಬಲಿ ನಾನು ಅವರಿಗೆ ಮಾತು ಕೊಟ್ಟಾಗಿದೆ ಅದನ್ನು ಯಾವುದೇ ಕಾರಣಕ್ಕೂ ಹಿಂಪಡೆಯುವುದಿಲ್ಲ ಎಂದನು.ನೀನು ನನ್ನ ಮಾತನ್ನೇ ದಿಕ್ಕರಿಸಿ ಹೋಗ್ತಿದ್ದೆಯಲ್ಲ ಬಲಿ ಚಕ್ರವರ್ತಿ ನೀನು ನಿನ್ನ ಸರ್ವಸ್ವ ಕಳೆದುಕೊಂಡು ಅಧ:ಪತನ ಆಗು ಶಾಪ ಹಾಕಿದರು. ಭಗವಂತ ನನ್ನನ್ನೇ ನಾಶ ಪಡಿಸುವುದಾದರೆ ಪಡಿಸಲಿ ಎಂದು ಬಲಿ ಚಕ್ರವರ್ತಿ ಹೇಳಿದ. ಧಾನ ಕೊಡಲು ನಾನು ಸಿದ್ಧನಿದ್ದೇನೆ.

ವಾಮನ ಅವತಾರಿ ಭಗವಂತ ಹೆಜ್ಜೆಯನ್ನು ಹಿಗ್ಗಿಸಿ ದೊಡ್ಡದಾಗಿ ಬೆಳೆದನು. ಭೂಮಿ ಆಕಾಶ ಒಂದಾಗುವಂತೆ ವಿರಾಟ್ ರೂಪ ತಾಳಿ ಬೆಳೆದು ಎರಡು ಹೆಜ್ಜೆ ಹಾಕಿದ.ಮೂರನೇ ಹೆಜ್ಜೆ ಎಲ್ಲಿಡಲಿ ಕೇಳಿದಾಗ ಬಲಿ ಚಕ್ರವರ್ತಿ ನನ್ನ ತಲೆ ಮೇಲೆ ಇಡಲು ಹೇಳಿದ. ಬಲಿ ಚಕ್ರವರ್ತಿ ನಿನ್ನ ಭಕ್ತಿಗೆ ನಾನು ಮೆಚ್ಚಿದೆ. ದೇವತೆಗಳ ಮಾತಿನಂತೆ ಗುರುಗಳ ಶಾಪಕ್ಕೆ  ನೀನು ಪತನವಾಗಿ ಪಾತಾಳಕ್ಕೆ ಹೋಗು. ಅಲ್ಲಿ ಸೂತಣ್ಣ ಲೋಕದ ಅಧಿಪತಿ ಆಗಿರು. ಮುಂದಿನ ಮನ್ಮಂತರದಲ್ಲಿ ನೀನು ಇಂದ್ರನಾಗು ಎಂದು ವರವನ್ನು ಬಲಿ ಚಕ್ರವರ್ತಿಗೆ ನೀಡಿದರು. ಈ ದಿನ ನೀನು ನನಗೆ ಕೊಟ್ಟ ದಾನದಿಂದ ಪ್ರಸಿದ್ಧಿಯಾಗಿ ಭೂಲೋಕದಲ್ಲಿ ಈ ದಿನವನ್ನು ಗೋವುಗಳ ಆರಾಧನೆ ಜೊತೆಗೆ ಬಲಿಪಾಡ್ಯಮಿ ಎಂದು ನಿನ್ನ ಹೆಸರಿನಿಂದ ಜನರು ಹಬ್ಬ ಆಚರಿಸುತ್ತಾರೆ. 

ಈ ಕಾರಣದಿಂದಾಗಿ ಬಲಿ ಚಕ್ರವರ್ತಿಯ ಭಕ್ತಿಗೆ ಮೆಚ್ಚಿ ಭಗವಂತ ಸುತಳದಲ್ಲಿ ಬಲಿಯ ಮನೆಯ ದ್ವಾರಪನಾಲಕನಾಗಿ ಕಾಯುತ್ತಿದ್ದನು. ಅಂದಿನಿಂದ ಇಂದಿನವರೆಗೂ ದೀಪಾವಳಿ ನಾಲ್ಕನೇ ದಿನ ಬಲಿಪಾಡ್ಯಮಿ ಆಚರಿಸುವುದು ಜಾರಿಗೆ ಬಂತು.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0