ಅಡಕಳ್ಳಿಯವರ ಹೊಸ ಕೃತಿ  ' ಹಾಸ್ಯ ವಿಲಾಸ' ನಾಳೆ ಬಿಡುಗಡೆ 

Dec 26, 2025 - 16:04
 0  23
ಅಡಕಳ್ಳಿಯವರ ಹೊಸ ಕೃತಿ  ' ಹಾಸ್ಯ ವಿಲಾಸ' ನಾಳೆ ಬಿಡುಗಡೆ 
ಲೇಖಕ ರಾಜು ಅಡಕಳ್ಳಿ ಅವರ ಮತ್ತೊಂದು ನೂತನ  ಕೃತಿ " ಹಾಸ್ಯ ವಿಲಾಸ  " ನಾಳೆ, 27ರಂದು  ಲೋಕಾರ್ಪಣೆಗೊಳ್ಳಲಿದೆ.
 
ಕಳೆದ ಒಂದು ವರ್ಷದಲ್ಲಿ ಒಟ್ಟು ಮೂರು ಹಾಸ್ಯ ಭರಿತ ಕೃತಿಗಳನ್ನು ನೀಡಿ ಅಡಕಳ್ಳಿಯವರು ಹ್ಯಾಟ್ರಿಕ್ ಸಾಧಿಸಿದ್ದಾರೆ.
 
ಪ್ರತಿಷ್ಠಿತ ಸಪ್ನ ಪುಸ್ತಕ ಪ್ರಕಾಶನವು ಪ್ರಕಟಿಸಿರುವ ಈ ಹಾಸ್ಯ ವಿಲಾಸವು, ವಿಶಿಷ್ಟ ಶೈಲಿಯ ಗದ್ಯ ಪ್ರಯೋಗ ಮತ್ತು ಸಮಕಾಲೀನ ಸ್ವಾರಸ್ಯಗಳ ನಗೆ ಡಬ್ಬಿಯಂತಿದೆ. ಈ ಪುಸ್ತಕವನ್ನು ಬೆಂಗಳೂರಿನ ಗಾಂಧಿ ಭವನದಲ್ಲಿ ಬೆಳಗ್ಗೆ 10 ಗಂಟೆಗೆ,  ಸಾಹಿತಿ ಡಾ. ಹಂಪ ನಾಗರಾಜಯ್ಯ , ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಮತ್ತು ಇತರ ಪ್ರಮುಖ ಸಾಹಿತಿಗಳೊಂದಿಗೆ ಬಿಡುಗಡೆಗೊಳಿಸಲಾಗುವುದು.
 
ಅಡಕಳ್ಳಿಯವರ 11ನೇ ಕೃತಿಯಾದ ಈ ಹಾಸ್ಯ ವಿಲಾಸದಲ್ಲಿ, ಮನಸ್ಸಿಗೆ ಮುದ ನೀಡುವ, ನವಿರಾದ ಹಾಸ್ಯ ಭರಿತ ಲೇಖನಗಳ ಸಂಗ್ರಹವಿದೆ. 
 
ಅಡಕಳ್ಳಿಯವರ ಹರಟೆ ಕಷಾಯ, ರಸಗುಲ್ಲಾ ಕೃತಿಗಳ ಯಶಸ್ಸಿನ ನಂತರ, ಹಾಸ್ಯ ಪ್ರಿಯರಿಗೆ ಮತ್ತೊಮ್ಮೆ ರಸದೌತಣ ನೀಡುವ ಕೃತಿ ಇದಾಗಿದೆ ಎಂದು ಸ್ವಪ್ನ ಬುಕ್ ಹೌಸ್ ನ ದೊಡ್ಡೇಗೌಡರು ತಿಳಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0